KarnatakaPoliticalShivamogga

ಬಿಜೆಪಿಯಿಂದ ಎಸ್ಐಆರ್ ಮಹಾಸಂಪರ್ಕ ಅಭಿಯಾನ|ಭೀಕರ ಬರಗಾಲದ ಕಡೆ ಸಿಎಂ ಗಮನಹರಿಸಲಿ|ಕನಕಪುರದಲ್ಲಿ ವಿಮಾನ ನಿಲ್ದಾಣಕ್ಕೆ ಬಿ.ವೈ.ವಿಜಯೇಂದ್ರ ಆಕ್ಷೇಪ

ಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ತೋರಿಸಿದ ಆಸಕ್ತಿಯನ್ನು ರೈತರ ವಿಚಾರದಲ್ಲೂ ತೋರಿಸಬೇಕಿದೆ ಎಂದು ಬಿ.ವೈ.ವಿಜಯೀಂದ್ರ ಟೀಕಿಸಿದರು.

ರಾಜ್ಯ ಬಿಜೆಪಿ ವತಿಯಿಂದ ಜುಲೈ 25, 26 ರಂದು ಎಸ್ಐಆರ್ ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು ಆ ಮೂಲಕ ಒಂದು ಕೋಟಿ ಜನರನ್ನ ತಲುಪುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೀಂದ್ರ ತಿಳಿಸಿದರು.

ಮಂಗಳವಾರದಂದು ತಮ್ಮ ತವರು ಜಿಲ್ಲೆ ಶಿವಮೊಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿಯಾನದಲ್ಲಿ ಶಾಸಕರು, ಸಂಸದರು, ಮುಖಂಡರು, ಕಾರ್ಯಕರ್ತರು ಮನೆಮನೆಗೂ ತೆರಳಿ ಎಸ್ಐಆರ್ ನೊಂದಣಿ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.

ಎಸ್ಐಆರ್ ನಮೂನೆ ಭರ್ತಿ ವೇಳೆ ಸಾರ್ವಜನಿಕರಿಗೆ ಉಂಟಾಗುವ ಗೊಂದಲ ತೊಡಕುಗಳಿದ್ದಲ್ಲಿ ನಿವಾರಿಸಿ ಫಾರಂ ಭರ್ತಿಗೆ ಸಹಕರಿಸಿ ಯೋಜನೆ ಯಶಸ್ವಿಯಾಗಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಬಿ.ವೈ. ವಿಜಯೀಂದ್ರ ವಿವರಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ಸಿಎಂ ಡಿಕೆಶಿವಕುಮಾರ್ ಮಾತ್ರ ವಿಧಾನಸೌಧದಲ್ಲಿ ಕುಳಿತು ಕಾಟಾಚಾರಕ್ಕೆ ವೀಡಿಯೋ ಕಾನ್ಪರೆನ್ಸ್ ಸಭೆ ನಡೆಸುತ್ತಿದ್ದಾರೆ.

ಕೇಂದ್ರಕ್ಕೆ ಪತ್ರ ಬರೆದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಂದು ಎಂದು ಬಿ.ವೈ.ವಿಜಯೀಂದ್ರ ಆರೋಪಿಸಿದರು.

ರಾಜ್ಯ ಸರ್ಕಾರದಿಂದ ಯಾವೊಬ್ಬ ಸಚಿವರು, ಜಿಲ್ಲಾ ಪ್ರವಾಸ ಕೈಗೊಂಡು ರೈತರ ಸಂಕಷ್ಟ ಅಹವಾಲು ಕೇಳುವ ಕೆಲಸಮಾಡಿಲ್ಲವೆಂದು ಹರಿಹಾಯ್ದರು.

ಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ತೋರಿಸಿದ ಆಸಕ್ತಿಯನ್ನು ರೈತರ ವಿಚಾರದಲ್ಲೂ ತೋರಿಸಬೇಕಿದೆ ಎಂದು ಬಿ.ವೈ.ವಿಜಯೀಂದ್ರ ಟೀಕಿಸಿದರು.

ಮುಖ್ಯಮಂತ್ರಿಗಳು ಹಿರಿಯ ಸಚಿವರ ದಂಡಿನೊಂದಿಗೆ ರಾಜಕೀಯಕ್ಕಾಗಿ ದೆಹಲಿ ಪ್ರವಾಸ ಬಿಟ್ಟು ಬರಪೀಡಿತ ಜಿಲ್ಲೆಗಳಿಗೆ ಅಧ್ಯಯನ ಪ್ರವಾಸ ಕೈಗೊಂಡು ಹಳ್ಳಿಗಳಲ್ಲಿ ರೈತರ ಪರಿಸ್ಥಿತಿ ಅವಲೋಕಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ದೆಹಲಿಯ ಜಂತರ್-ಮಂತರ್‌ನಲ್ಲಿ ವಿದ್ಯಾರ್ಥಿಗಳು ನೀಟ್ ವಿಚಾರವಾಗಿ ನಡೆಸಿದ ಬೃಹತ್ ಪ್ರತಿಭಟನೆಗೆ ಪಕ್ಷದ ವಿರೋಧವಿಲ್ಲ ಎಂದು ಬಿ.ವೈ.ವಿಜಯೀಂದ್ರ ಸ್ಪಷ್ಟಪಡಿಸಿದರು.

ಪ್ರತಿಭಟನೆ ನೆಪದಲ್ಲಿ ಯುವಕರನ್ನ ಮುಂದೆ ಬಿಟ್ಟು ದೇಶ ರಾಜ್ಯದಲ್ಲಿ ಅರಾಜಕತೆ ಸೃಷ್ಠಿಸುವ ಷಡ್ಯಂತ್ರ ವಿರೋಧಪಕ್ಷಗಳಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾದ ಅನೇಕ ಯುವಕರಿಗೆ ಕಾರಣವೇ ಗೊತ್ತಿರಲಿಲ್ಲ. ಹಲವು ಮಾಧ್ಯಮಗಳ ಮೇಲೆ ಪ್ರತಿಭಟನಾಕಾರರಿಂದ ಹಲ್ಲೆಯಾಗಿದೆ.

ಕೆಲವರು ದೇಶದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ವಿರೋಧ ಪಕ್ಷಗಳು ಯುವಕರನ್ನು ಮುಂದೆ ಬಿಟ್ಟು ರಾಜಕೀಯ ಮಾಡುತ್ತಿವೆ ಎಂದು ಬಿ.ವೈ.ವಿಜಯೀಂದ್ರ ಆಕ್ಷೇಪಿಸಿದರು.

ನೀಟ್ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಬಿ.ವೈ.ವಿಜಯೀಂದ್ರ ತೀವ್ರವಾಗಿ ಖಂಡಿಸಿದರು.

ನೀವು ಸಿಎಂ ಆಗಿದ್ದಾಗ 2.5 ಲಕ್ಷ ಹುದ್ದೆ ಭರ್ತಿಗೆ ಆಗ್ರಹಿಸಿ ಲಕ್ಷಾಂತರ ಪದವೀಧರ ಯುವಕರು ಹುಬ್ಬಳ್ಳಿಯಲ್ಲಿ ಬೀದಿಗಿಳಿದು ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದರು. ಆಗ ಯುವಕರ ಬಗೆಗಿನ ಕಾಳಜಿ ಎಲ್ಲಿಗೆ ಹೋಗಿತ್ತು ಎಂದು ಬಿ.ವೈ.ವಿಜಯೀಂದ್ರ ಪ್ರಶ್ನಿಸಿದರು.

ಎಷ್ಟು ಹುದ್ದೆ ಭರ್ತಿಮಾಡಿ ಪದವೀಧರ ಯುವಕರ ಭವಿಷ್ಯಕ್ಕೆ ಬೆಳಕು ನೀಡಿದ್ದೀರೆಂದು ರಾಜ್ಯದ ಜನತೆ ಮುಂದೆ ಸಿದ್ದರಾಮಯ್ಯನವರು ಸ್ಪಷ್ಟಪಡಿಸಬೇಕೆಂದು ಬಿ.ವೈ.ವಿಜಯೀಂದ್ರ, ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕನಕಪುರದಲ್ಲಿ ಸ್ಥಾಪಿಸುವ ಬಗ್ಗೆ ಬಿ.ವೈ.ವಿಜಯೀಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಿ.ಎಂ.ಡಿಕೆಶಿವಕುಮಾರ್‌ ಅವರು ಕೇವಲ ಕನಕಪುರದ ಮುಖ್ಯಮಂತ್ರಿಯಲ್ಲ, ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ ಎಂಬುದನ್ನು ಮೆರೆಯಬಾರದು ಎಂದು ಹೇಳಿದರು.

8 ಜಿಲ್ಲೆಗಳಿಗೆ ಅನುಕೂಲವಾಗುವಂತೆ ತುಮಕೂರಿನಲ್ಲಿ ವಿಮಾನ ನಿಲ್ದಾಣ ತೆರೆಯಬೇಕು ಎಂದು ಬಿ.ವೈ.ವಿಜಯೀಂದ್ರ ಆಗ್ರಹಿಸಿದರು.

Follow Us

Leave a Reply

Your email address will not be published. Required fields are marked *

Back to top button