ShivamoggaSpecial Stories

ಆಗಸ್ಟ್‌ 6, 7 ರಂದು ಗುಡ್ಡೇಕಲ್‌ನಲ್ಲಿ ಆಡಿಕೃತ್ತಿಕೆ ಹರೋಹರ ಜಾತ್ರೆ|ಲಕ್ಷಾಂತರ ಭಕ್ತರಿಂದ ಹರಕೆ ಸಲ್ಲಿಕೆ|ತಮಿಳುನಾಡಿನ ಪಳನಿ ಮಾದರಿಯಲ್ಲಿ ಜಾತ್ರೆ

100 ವರ್ಷಗಳ ಇತಿಹಾಸವಿರುವ ಬಾಲಸುಬ್ರಮಣ್ಯ ದೇವಾಲಯದಲ್ಲಿ ಜಾತ್ರೆಯ ಅಂಗವಾಗಿ ಹೊರರಾಜ್ಯಗಳಿಂದ, ಬೇರೆ ಬೇರೆ ಜಿಲ್ಲೆಗಳಿಂದಲೂ ಲಕ್ಷಾಂತರ ಭಕ್ತಾದಿಗಳು ಕಾವಡಿ ಹೊತ್ತು ಹರಕೆ ಸಲ್ಲಿಸುವ ವಾಡಿಕೆಯಿದೆ.

ಶಿವಮೊಗ್ಗ: ಪ್ರಸಿದ್ದ ಆಡಿಕೃತ್ತಿಕೆ ಹರೋಹರ ಜಾತ್ರೆ ಆ. 6 ಮತ್ತು 7ರಂದು ಎರಡು ದಿನಗಳ ಕಾಲ ಗುಡ್ಡೇಕಲ್‌ನಲ್ಲಿ ವಿಜೃಂಭಣೆ ನಡೆಸಲಾಗುವುದೆಂದು ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಪಿ.ರಘುಕುಮಾರ್ ತಿಳಿಸಿದರು.

ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠೀಯಲ್ಲಿ ಜಾತ್ರೆ ಕುರಿತು ಅದರ ತಯಾರಿ ಬಗ್ಗೆ ವಿವರಿಸಿದರು.

ತಮಿಳುನಾಡಿನ ಪಳನಿಯಲ್ಲಿ ನಡೆಯುವಂತೆ ಶಿವಮೊಗ್ಗದಲ್ಲಿಯೂ ಕೂಡ ವಿಶಿಷ್ಟವಾಗಿ ಈ ಜಾತ್ರೆಯನ್ನು ಭಕ್ತಿ ಭಾವದಿಂದ ವೈಭವೋಪ್ರೇರಿತವಾಗಿ ಅಚರಿಸಲಾಗುತ್ತದೆ ಎಂದು ಹೇಳಿದರು.

100 ವರ್ಷಗಳ ಇತಿಹಾಸವಿರುವ ಬಾಲಸುಬ್ರಮಣ್ಯ ದೇವಾಲಯದಲ್ಲಿ ಜಾತ್ರೆಯ ಅಂಗವಾಗಿ ಹೊರರಾಜ್ಯಗಳಿಂದ, ಬೇರೆ ಬೇರೆ ಜಿಲ್ಲೆಗಳಿಂದಲೂ ಲಕ್ಷಾಂತರ ಭಕ್ತಾದಿಗಳು ಕಾವಡಿ ಹೊತ್ತು ಹರಕೆ ಸಲ್ಲಿಸುವ ವಾಡಿಕೆಯಿದೆ.

ಎರಡು ದಿನದ ಜಾತ್ರಾ ಮಹೋತ್ಸವದಲ್ಲಿ ಮೊದಲ ದಿನ ಭರಣಿ ಕಾವಡಿ, ಆಡಿಕೃತ್ತಿಕೆ ಉತ್ಸವ ಜರುಗಲಿದೆ ಎಂದು ತಿಳಿಸಿದರು.

ಜಾತ್ರೆ ನಿಮಿತ್ತ ವಿಶೇಷ ಪೂಜೆ, ಅಭೀಷೇಕ ಅಲಂಕಾರ ಮಹಾ ಮಂಗಳರತಿ ಹಾಗೂ ಸಾಂಸ್ಕೃತಿಕ ಹಾಗೂ ಧಾರ್ಮಿಕಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಹರಹರ ಜಾತ್ರೆ ಕೇವಲ ತಮಿಳು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ವರ್ಗದವರೂ ಆರಾಧಿಸುವ ದೈವವಾಗಿದೆ. ನವಗ್ರಹಗಳಾದ ಕುಜಗ್ರಹದ ಅಧಿಪತಿ ಬಾಲಸುಬ್ರಹ್ಮಣ್ಯ ಸ್ವಾಮಿಯಾಗಿದ್ದು, ಚರ್ಮವ್ಯಾಧಿ, ರಕ್ತ ಸಂಬಂಧಿತ ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಹರಕೆ ಹೊತ್ತು ಪ್ರತಿ ಮಂಗಳವಾರ ಪೂಜೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.

ಹರೋಹರ ಜಾತ್ರೆಯಲ್ಲಿ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೊತ್ತ ಭಕ್ತರು ಜೇನುಕಾವಡಿ, ನವಿಲು ಕಾವಡಿ,ಪುಷ್ಪ ಕಾವಡಿಗಳನ್ನು ಹೊತ್ತು, ನಾಲಿಗೆಗೆ ,ಕೆನ್ನೆಗೆ ಚೂಪಾದ ಶೂಲ ಚುಚ್ಚಿಕೊಂಡು ದೇಹದಂಡಿಸಿ ಹರಕೆ ತೀರಿಸುವ ಮೂಲಕ ಸ್ವಾಮಿಯ ದರ್ಶನವನ್ನು ಪಡೆದು ಕೃತಾರ್ಥರಾಗುತ್ತಾರೆ ಎಂದರು.

ದೇವಾಲಯದ ಖಜಾಂಚಿ ಎಂ ರಾಜು ಮಾತನಾಡಿ, ದೇವಸ್ಥಾನದ ಗುಡ್ಡದ ಮೇಲೆ ವಿಶ್ವದಲ್ಲಿಯೇ ಅತಿ ಎತ್ತರವಾದ 151 ಅಡಿ ಬಾಲಸುಬ್ರಹ್ಮಣ್ಯಸ್ವಾಮಿಯ ವಿಗ್ರಹವನ್ನು 6 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕೆಲಸ ಆರಂಭಿಸಲಾಗಿದೆ.

ಸಂಸದ ಬಿ.ವೈ.ರಾಘವೇಂದ್ರರವರ ಸಹಕಾರದಿಂದಾಗಿ ವಿಗ್ರಹದ ನಿರ್ಮಾಣ ಕಾಮಗಾರಿ ಬಿಡ್ಡಿಂಗ್ ಹಂತದಲ್ಲಿದೆ ಇನ್ನೂ ಧನಸಹಾಯದ ಅಗತ್ಯವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಟ್ರಸ್ಟ್‌ನ ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ .ಎಂ,ಲೋಕೇಶ್ ಖಜಾಂಚಿ ಎಂ.ರಾಜು, ಸಹಕಾರ್ಯದರ್ಶಿ ಸಿ ರವಿ, ಟ್ರಸ್ಟಿಗಳಾದ ಎಂ,ಸುಬ್ರಮಣಿ, ಎಂ,ಪಿ,ಸಂಪತ್, .ಪಿ,ರವಿಕುಮಾರ್, ಕೆ,ವಿಶ್ವನಾಥ್ ಹಾಜರಿದ್ದರು.

Follow Us

Leave a Reply

Your email address will not be published. Required fields are marked *

Back to top button