ರಂಗ ದಸರಾದಲ್ಲಿ “ಮಳೆ ನಿಲ್ಲುವವರೆಗೆ” ನಾಟಕ|ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ|ಸಂಜೆ 6.45ಕ್ಕೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನ|
ಬೆಟ್ಟದ ಮೇಲೊಂದು ನಿಗೂಢ ಮನೆ,ಒಬ್ಬ ನಿವೃತ್ತ ನ್ಯಾಯಾದೀಶ ಇಬ್ಬರು ವಕೀಲರು ಜೊತೆಗಿಬ್ಬರು ಸಹಚರರು ಕೇಸುಗಳ ವಿಚಾರಣೆ ನಡುವೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ.

ಶಿವಮೊಗ್ಗ: ರಂಗ ದಸರಾ ಪ್ರಯುಕ್ತ ಸೋಮವಾರ ಸಂಜೆ 7 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ “ಮಳೆ ನಿಲ್ಲುವವರೆಗೆ” ಕುತೂಹಲಭರಿತ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ನಮ್ ಟೀಮ್ ರಂಗತಂಡ ಪ್ರಸ್ತುತ ಪಡಿಸುವ ಈ ನಾಟಕದ ರಚನೆಯನ್ನು ಎಲ್.ಎಸ್. ಸುಧೀಂದ್ರ ಮಾಡಿದ್ದು ವಿಜಯ್ ನೀನಾಸಂ ನಿರ್ದೇಶಿಸಿದ್ದಾರೆ.

ಬೆಟ್ಟದ ಮೇಲೊಂದು ನಿಗೂಢ ಮನೆ,ಒಬ್ಬ ನಿವೃತ್ತ ನ್ಯಾಯಾದೀಶ ಇಬ್ಬರು ವಕೀಲರು ಜೊತೆಗಿಬ್ಬರು ಸಹಚರರು ಕೇಸುಗಳ ವಿಚಾರಣೆ ನಡುವೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ.
ಕಾಮಿಡಿ ಕಿಲಾಡಿ|
ಧಾರವಾಹಿ ನಟರೇ ಪಾತ್ರಧಾರಿಗಳು|
ಲಕ್ಷ್ಮಿನಿವಾಸ ಧಾರಾವಾಹಿ ವೆಂಕಿ ಖ್ಯಾತಿಯ ಚಂದ್ರಶೇಖರ ಶಾಸ್ತ್ರಿ ಶಿವಮೊಗ್ಗ, ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಹಿರೇಗೋಣಿಗೆರೆ ಅವರೊಂದಿಗೆ ಹೊನ್ನಾಳಿ ಚಂದ್ರಶೇಖರ್, ಯೋಗೀಶ್, ವೆಂಕಟೇಶ್, ಸೂರಜ್, ತ್ರಿಷಾ ಶೆಟ್ಟಿ ಈ ನಾಟಕದಲ್ಲಿ ಅಭಿನಯಿಸಿದ್ದಾರೆ.

ಚಂದನ್ ನೀನಾಸಂ ಬೆಳಕು, ಸಾಸ್ವೆಹಳ್ಳಿ ಸತೀಶ್ ಪ್ರಸಾದನವಿದೆ. ಪ್ರದರ್ಶನ ಉಚಿತವಾಗಿದ್ದು ಸಾರ್ವಜನಿಕರು ಹಾಗೂ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ರಂಗದಸರಾ ಸಮಿತಿ ಮನವಿ ಮಾಡಿದೆ.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







