Shivamoggaಶಿವಮೊಗ್ಗ ದಸರಾ-2026

ಆಹಾರ ದಸರಾದಲ್ಲಿ ಶೇಂಗಾ, ಕೊಬ್ಬರಿ ಬಳಸಿ ಖಾದ್ಯ ಸ್ಪರ್ಧೆ|ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಕಾರ್ಯಕ್ರಮ|12 ಜೋಡಿಗಳು ಭಾಗಿ

ಸುಮಾರು 12 ಜೋಡಿಗಳು ಸಂಭ್ರಮದಿಂದ ಭಾಗವಹಿಸಿ ವಿವಿಧ ಬಗೆಯ ಪೌಷ್ಟಿಕ ಹಾಗೂ ಸ್ವಾದಿಷ್ಠಕರ ಖಾದ್ಯ ತಯಾರಿಸಿ ಸೈ ಎನಿಕೊಂಡರು.

ಶಿವಮೊಗ್ಗ: ಆಹಾರ ದಸರಾ ಪ್ರಯುಕ್ತ ಶೇಂಗಾ ಮತ್ತು ಕೊಬ್ಬರಿ ಬಳಸಿ ಖಾದ್ಯ ತಯಾರಿಸುವ ಸ್ಪರ್ಧೆಯನ್ನು ವೀರಶೈವ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು.

ಸುಮಾರು 12 ಜೋಡಿಗಳು ಸಂಭ್ರಮದಿಂದ ಭಾಗವಹಿಸಿ ವಿವಿಧ ಬಗೆಯ ಪೌಷ್ಟಿಕ ಹಾಗೂ ಸ್ವಾದಿಷ್ಠಕರ ಖಾದ್ಯ ತಯಾರಿಸಿ ಸೈ ಎನಿಕೊಂಡರು.

ಅಣ್ಣ ತಂಗಿ,ಅಕ್ಕ ತಮ್ಮ. ಮತ್ತು ಅಕ್ಕ ತಂಗಿ ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಸ್ಪರ್ಧೆಗೆ ಜಿಲ್ಲಾ ಆಹಾರ ಸರ್ವೇಕ್ಷಣ ಅಧಿಕಾರಿ ನಾಗರಾಜ್ ಚಾಲನೆ ನೀಡಿದರು.

ಶಾಸಕ ಎಸ್‌.ಎನ್.ಚನ್ನಬಸಪ್ಪ ಮಾಜಿ ಕಾರ್ಪೊರೇಟರ್ ಜ್ಞಾನೇಶ್ವರ್ ಮತ್ತು ಆಹಾರ ದಸರಾದ ಕಾರ್ಯದರ್ಶಿ ಕೃಷ್ಣಮೂರ್ತಿ ಭಾಗವಹಿಸಿದ್ದರು.

ತೀರ್ಪುಗಾರರಾಗಿ ಮಾಜಿ ಕಾರ್ಪೊರೇಟರ್ ಅನಿತಾ ರವಿಶಂಕರ್, ಬಿ ಎಚ್ ಈ ಓ ಸುಶೀಲಾ ಬಾಯಿ ಭಾಗವಹಿಸಿದ್ದರು

Follow Us

Leave a Reply

Your email address will not be published. Required fields are marked *

Back to top button