Shivamogga

ಮಾಧ್ಯಮ ಪ್ರಶಸ್ತಿ ಪುರಸ್ಕ್ರತ ಎಸ್ ಚಂದ್ರಕಾಂತ್ ,ಪಿ.ಜೇಸುದಾಸ್‌ಗೆ ಸನ್ಮಾನ|ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಿಂದ ಅಭಿನಂದನೆ|ಎನ್‌.ಮಂಜುನಾಥ್‌, ನಾಗರಾಜ್‌ ನೇರಿಗೆ ಮತ್ತಿತರರು ಭಾಗಿ

ಪ್ರಶಸ್ತಿ ಪುರಸ್ಕ್ರತ ಪಿ. ಜೇಸುದಾಸ್ ಮಾತನಾಡಿ, ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಕುವೆಂಪು ವಿವಿಯಲ್ಲಿನ ಹೋರಾಟದ ದಿನಗಳನ್ನು ಸ್ಮರಿಸಿದರು. ಅಂಕಪಟ್ಟಿಯೇ ಪಡೆಯದೇ, ಪ್ರತಿಭೆಯ ಆಧಾರದ ಮೇಲೆ ಮಾಧ್ಯಮ ಕ್ಷೇತ್ರದಲ್ಲಿ ಸವೆಸಿದ ಹಾದಿಯನ್ನು ಹಂಚಿಕೊಂಡರು.

ಶಿವಮೊಗ್ಗ: ಐಎಮ್‌ಎ ಜೀವಮಾನ ಸಾಧನೆ ಪ್ರಶಸ್ತಿ, ನ್ಯೂ ಇಂಡಿಯನ್ ಟೈಮ್ಸ್ ನೀಡುವ ಟಿಎನ್‌ಐಟಿ ಮೀಡಿಯಾ ಅವಾರ್ಡ್ ಪ್ರಶಸ್ತಿ ಪುರಸ್ಕ್ರತ ಹಿರಿಯ ಪತ್ರಕರ್ತರಾದ ಎಸ್ ಚಂದ್ರಕಾಂತ್ ಹಾಗೂ ಪಿ.ಜೇಸುದಾಸ್‌ ಅವರಿಗೆ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಪ್ರೆಸ್‌ ಟ್ರಸ್ಟ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ, ಗಜೇಂದ್ರಸ್ವಾಮಿ, ಹೊನ್ನಾಳಿ ಚಂದ್ರಶೇಖರ್ , ಸಂತೋಷ್ ಕಾಚಿನ ಕಟ್ಟೆ, ಮೋಹನ್ ಕೃಷ್ಣ, ಶಿ.ಜು.ಪಾಶ, ಸಂತೋಷ್ ಎಲಿಗಾರ್, ಶ್ರೀಮತಿ ಸೌಮ್ಯ ಹೆಚ್‌.ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಎನ್.ಮಂಜುನಾಥ್ ಅವರು ಹಾಗೂ ಇತರೆ ಮಾಧ್ಯಮ ಮಿತ್ರರು ಜೊತೆಗೂಡಿ ಪ್ರಶಸ್ತಿ ಪುರಸ್ಕ್ರತ ಎಸ್ ಚಂದ್ರಕಾಂತ್ ಹಾಗೂ ಪಿ.ಜೇಸುದಾಸ್‌ ಅವರಿಗೆ ನೆನಪಿನ ಸ್ಮರಣಿಕೆ ನೀಡಿ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಎನ್‌.ಮಂಜುನಾಥ್‌, ನಮ್ಮ ನಡುವಿನ ಇಬ್ಬರು ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿರುವುದು ಶಿವಮೊಗ್ಗ ಜಿಲ್ಲಾ ಪತ್ರಿಕೋಧ್ಯಮಕ್ಕೆ ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಐದು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ದಿಟ್ಟ ಹೆಜ್ಜೆಯಿಟ್ಟು ಮುನ್ನಡೆಯುತ್ತಿರುವ ಚಂದ್ರಕಾಂತ್ ಹಾಗೂ ಈಗೀನ ಪೀಳಿಗೆಯ ಪತ್ರಕರ್ತರಿಗೆ ಜೇಸುದಾಸ್ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿದ ನಂತರ ಮಾತನಾಡಿದ ಎಸ್.ಚಂದ್ರಕಾಂತ್, ಮೊಳೆ ಜೊಡಿಸುವ ಕಾಲಘಟ್ಟದಿಂದ ಅಂಗೈನಲ್ಲೇ ಸುದ್ದಿ ಸಂಗ್ರಹಿಸುವ ಹಂತದವರೆಗೂ ಪತ್ರಿಕೋದ್ಯಮದ ಬದಲಾವಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರೆಸ್‌ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಎಸ್. ಚಂದ್ರಕಾಂತ್ ಅವರು ತಳಮಟ್ಟದಿಂದ ಬೆಳೆದು ಐದು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ.

ಅವರಿಗೆ ಈ ಮೊದಲೇ ಪ್ರಶಸ್ತಿಗಳು ಲಭಿಸಬೇಕಿತ್ತು. ಜೇಸುದಾಸ್ ಅವರ ಸಾಧನೆಯೂ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಮತ್ತೋರ್ವ ಪ್ರಶಸ್ತಿ ಪುರಸ್ಕ್ರತ ಪಿ. ಜೇಸುದಾಸ್ ಮಾತನಾಡಿ, ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಕುವೆಂಪು ವಿವಿಯಲ್ಲಿನ ಹೋರಾಟದ ದಿನಗಳನ್ನು ಸ್ಮರಿಸಿದರು.

ಅಂಕಪಟ್ಟಿಯೇ ಪಡೆಯದೇ, ಪ್ರತಿಭೆಯ ಆಧಾರದ ಮೇಲೆ ಮಾಧ್ಯಮ ಕ್ಷೇತ್ರದಲ್ಲಿ ಸವೆಸಿದ ಹಾದಿಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರ್ತಕರ್ತರು, ಪ್ರಶಸ್ತಿ ಪುರಸ್ಕ್ರತರ ಕುರಿತು ಅಭಿನಂದನಾ ಭಾಷಣ ಮಾಡಿದರು. ಇಬ್ಬರೂ ಹಿರಿಯ ಪತ್ರಕರ್ತರು, ಯುವ ಪತ್ರಕರ್ತರಿಗೆ ಸ್ಪೂರ್ತಿಯಾಗಿದ್ದಾರೆ, ಮತ್ತಷ್ಟು ಪ್ರಶಸ್ತಿಗಳು ಅರಸಿಬರುವಂತಾಗಲಿ ಎಂದು ಹಾರೈಸಿದರು.

Follow Us

Leave a Reply

Your email address will not be published. Required fields are marked *

Back to top button