ಅಂಬಾರಿ ಹೊತ್ತ ಆನೆ ದಿಕ್ಕಾಪಾಲಾಗಿ ಓಡಿದ ಪ್ರಕರಣ|ಜನರಲ್ಲಿ ಅಪಶಕುನದ ಆತಂಕ ಎಂದ ಈಶ್ವರಪ್ಪ|ಎಸಿಎಫ್‌ನೇತೃತ್ವದಲ್ಲಿ ತನಿಖೆ-ಡಿಸಿ ಪ್ರಭುಲಿಂಗ ಕವಳಿಕಟ್ಟಿ
ರಾಜಕೀಯ ನಾಯಕರ ಭಾವನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ್ ಕವಳಿಕಟ್ಟಿ ಹೇಳಿದರು.

ಶಿವಮೊಗ್ಗ: ದಸರಾ ಅಂಬಾರಿ ಹೊತ್ತ ಆನೆ ದಿಕ್ಕಾಪಾಲಾಗಿ ಓಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ, ಅಗತ್ಯ ತಾಲಿಮಿನ ಅಭಾವ ನಿರ್ವಹಣೆ ಲೋಪ ಆರೋಪಕ್ಕೆ ಸಂಬಂಧಿಸಿದಂತೇ ಎಸಿಎಫ್ ನೇತೃತ್ವದಲ್ಲಿ ಆಂತರಿಕ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದಾರೆ.
ಸತ್ಯ ಶೋಧನಾ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು. ಆಡಳಿತ ವಿಚಾರದಲ್ಲಿನ ತೊಂದರೆಗಳಿಗೆ ಸರ್ಕಾರದ ಸಲಹೆ ಪಡೆಯಬಹುದು.
ಆದರೆ ಇದು ಧಾರ್ಮಿಕ ವಿಚಾರವಾಗಿರುವುದರಿಂದ ಧಾರ್ಮಿಕ ಪರಿಷತ್ ಸಲಹೆ ಪಡೆಯಬೇಕಾಗುತ್ತದೆ ಎಂದರು.
ರಾಜಕೀಯ ನಾಯಕರ ಭಾವನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಜರಾಯಿ ಇಲಾಖೆಯ ಒಳಪಡುವುದರಿಂದ ಅಲ್ಲಿನ ಧಾರ್ಮಿಕ ಪರಿಷತ್ ಮುಖಂಡರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ
ಬಂದ ಕೆಎಸ್ಇ, ಚೆನ್ನಬಸಪ್ಪ|
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಗೆ ದೌಡಾಯಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕ ಪ್ರಸನ್ನ ಕುಮಾರ್ ನೇತೃತ್ವದ ನಿಯೋಗವು, ತಾಯಿ ಚಾಮುಂಡೇಶ್ವರಿ ದೇವಿ ವಿಗ್ರಹ ಕೆಳಬಿದ್ದು ಅಪಚಾರವಾದ ಹಿನ್ನೆಲೆಯಲ್ಲಿ ಧಾರ್ಮಿಕ ಪರಿಹಾರದ ಕುರಿತು ಕ್ರಮ ಕೈಗೊಳ್ಳುವಂತೇ ಆಗ್ರಹಿಸಿದರು.
ದಸರಾ ಸಂಭ್ರಮದ ವೇಳೆ ದೇವಿ ಮೂರ್ತಿ ಭಗ್ನದಿಂದಾಗಿ ಅಪಶಕುನವಾಗಿದೆ ಎಂಬ ಆತಂಕ ಜನರಲ್ಲಿ ಉಂಟಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಧಾರ್ಮಿಕ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.

ಬಳಿಕ ಶಾಸಕ ಚನ್ನಬಸಪ್ಪ ಕೂಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಾತುಕತೆ ನಡೆಸಿದರು.
ದಸರಾ ಅನಾಹುತಕ್ಕೆ ಸಂಬಂಧಪಟ್ಟಂತೆ ಧಾರ್ಮಿಕ ವಿಧಿ ವಿಧಾನ ಅನುಸರಿಸುವ ಕುರಿತು ಕುರಿತು ಚರ್ಚೆ ನಡೆಸಿದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







