Shivamogga

ಶಿವಮೊಗ್ಗದಲ್ಲಿ ಅಂತರ ಶಾಲಾ ಸ್ಕೇಟಿಂಗ್ ಸ್ಪರ್ಧೆ|ರಾಜ್ಯ ಮಟ್ಟದ ಸ್ಕೇಟರ್‌ಗಳ ಆಯ್ಕೆ ಪ್ರಕ್ರಿಯೆ ಶುರು| 200 ಕ್ಕೂ ಹೆಚ್ಚು ಮಕ್ಕಳು ಭಾಗಿ

ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಪತ್ರಕರ್ತ ಎಸ್. ಕೆ. ಗಜೇಂದ್ರ ಸ್ವಾಮಿ ಮಾತನಾಡಿ, ನಿತ್ಯ ನೂರಾರು ಮಕ್ಕಳಿಗೆ ಕ್ರೀಡಾ ಸಂಕೀರ್ಣ ಹಾಗೂ ಶಿವಮೊಗ್ಗ ಹೆಲಿಪ್ಯಾಡ್ ನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಶಿವಮೊಗ್ಗ: ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಅಂತರ ಶಾಲಾ ಸ್ಕೇಟಿಂಗ್ ಸ್ಪರ್ಧೆ, ರಾಜ್ಯ ಮಟ್ಟದ ಸ್ಕೇಟರಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೋಪಾಳದ ಕ್ರೀಡಾ ಸಂಕೀರ್ಣ ಹಾಗೂ ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶದಲ್ಲಿ ಶನಿವಾರದಂದು ನಡೆದ ಆ ಆಯ್ಕೆ ಪ್ರಕ್ರಿಯೆಗೆ ಪತ್ರಕರ್ತ ಜಿ. ಚಂದ್ರಶೇಖರ್, ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್, ರಾಷ್ಟೀಯ ಕರಾಟೆ ಅಸೋಸಿಯೇಷನ್ ಪ್ರಮುಖ ವಿನೋದ್ ಚಾಲನೆ ನೀಡಿದರು.

ಮಾಜಿ ಕಾರ್ಪೊರೇಟರ್ ವಿಶ್ವಾಸ್ ಮಾತನಾಡಿ, ಇಂತಹ ಒಂದು ಸ್ಕೇಟಿಂಗ್ ಸಂಸ್ಥೆ ಶಿವಮೊಗ್ಗದಲ್ಲಿ ಸಾಕಷ್ಟು ಪ್ರತಿಭಾನ್ವಿತರನ್ನು ಹೊರ ತರುವ ವೇದಿಕೆಯಾಗಿದೆ ಎಂದು ಹೇಳಿದರು.

ಇದಕ್ಕೆ ಕ್ರೀಡಾಪಟುಗಳ ಜೊತೆ ಪೋಷಕರ ಸಹನೆ ಕಾರಣ ಎಲ್ಲಾ ಮಕ್ಕಳಿಗೂ ಶುಭವಾಗಲಿ ಎಂದು ಹಾರೈಸಿದರು.

ಕರಾಟೆ ಅಸೋಸಿಯೇಷ ಪದಾಧಿಕಾರಿ ವಿನೋದ್, ಶಿವಮೊಗ್ಗ ಜಿಲ್ಲಾಮಟ್ಟದಲ್ಲಿ ಆಟವಾಡುತ್ತಿರುವ ನೀವು ನಾಳೆ ರಾಜ್ಯ ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವಾಡುವಷ್ಟು ಉನ್ನತವಾಗಿ ತಮ್ಮ ಸಾಧನೆಯನ್ನು ತೋರಿಸಿ ಎಂದು ಕರೆ ನೀಡಿದರು.

ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಪತ್ರಕರ್ತ ಎಸ್. ಕೆ. ಗಜೇಂದ್ರ ಸ್ವಾಮಿ ಮಾತನಾಡಿ, ನಿತ್ಯ ನೂರಾರು ಮಕ್ಕಳಿಗೆ ಕ್ರೀಡಾ ಸಂಕೀರ್ಣ ಹಾಗೂ ಶಿವಮೊಗ್ಗ ಹೆಲಿಪ್ಯಾಡ್ ನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಎಂ. ರವಿ, ಸಂಸ್ಥೆಯ ಪ್ರಮುಖರು ಹಾಗೂ ವಕೀಲರಾದ ಪ್ರವೀಣ್, ಸಂಸ್ಥೆಯ ತರಬೇತುದಾರರಾದ ವಿಶ್ವಾಸ್, ಅತೀಶ್, ವಿರೂಪಾಕ್ಷಪ್ಪ, ಅಸೋಸಿಯೇಷನ ಪದಾಧಿಕಾರಿ ತಾರಾನಾಥ್, ಸುಧೀರ್, ಶ್ರೀನಾಥ್ ,ರಘು ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ರೋಡ್ ರೇಸ್ ಹಾಗೂ ರಿಂಗ್ ರೇಸ್ ನಲ್ಲಿ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಅವರೊಂದಿಗೆ ಪೋಷಕರು ಭಾಗವಹಿಸಿದ್ದರು.

Follow Us

Leave a Reply

Your email address will not be published. Required fields are marked *

Back to top button