HealthShivamogga

ಲಿವರ್ ಕ್ಯಾನ್ಸರ್‌ ವಿರುದ್ದ ಸುಶೋಧ ಆಸ್ಪತ್ರೆಯಿಂದ ಲಸಿಕಾ ಅಭಿಯಾನ|ಶಿಬಿರದ ಪ್ರಯೋಜನ ಪಡೆಯಲು ಈಶ್ವರಪ್ಪ ಕರೆ|ಹೆಪಟೈಟಿಸ್ ಲಸಿಕೆ ಪಡೆಯಲು ಡಾ.ಪ್ರದೀಪ್‌ಕುಮಾರ್‌ ಮನವಿ

ಒಂದು ತಿಂಗಳ ಅಂತರದಲ್ಲಿ ಹೈಪಟೇಟಿಸ್‌ 3 ಡೋಸ್ ಲಸಿಕೆ ಪಡೆದಲ್ಲಿ ಲಿವರ್ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ ಎಂದು ಸುಶೋಧ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರದೀಪ್‌ಕುಮಾರ್‌ ಜಿ.ಕೆ ಹೇಳಿದರು.

ಶಿವಮೊಗ್ಗ: ಲಿವರ್ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದ್ದು, ಲಿವರ್ ಕ್ಯಾನ್ಸರನಿಂದ ಪಾರಾಗಲು ಹೆಪಟೈಟಿಸ್ ಬಿ, ಸಿ ಲಸಿಕೆ ಪಡೆಯುವದಲ್ಲದೇ ರಕ್ತ ತಪಾಸಣೆ ಸಹ ಮಾಡಿಸಿಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಕರೆ ನೀಡಿದರು.

ಈ ನಿಟ್ಟಿನಲ್ಲಿ ಸವಳಂಗ ರಸ್ತೆಯಲ್ಲಿರುವ ಸುಶೋಧ ಆಸ್ಪತ್ರೆಯಲ್ಲಿ ಆಯೋಜಿಸಿರುವ ಉಚಿತ ಲಸಿಕಾ ಶಿಬಿರ ಪ್ರಯೋಜನ ಶಿವಮೊಗ್ಗದ ಜನತೆ ಪಡೆದುಕೊಳ್ಳಬೇಕೆಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದರು.

ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನಾಚರಣೆ ಅಂಗವಾಗಿ ನಗರದ ಸವಳಂಗ ರಸ್ತೆಯಲ್ಲಿನ ಸುಶೋಧ ಆಸ್ಪತ್ರೆ ವತಿಯಿಂದ ಜುಲೈ 26ರಿಂದಲೇ ಬೃಹತ್ ಸಾರ್ವಜನಿಕ ತಪಾಸಣೆ ಮತ್ತು ಹೆಪಟೈಟಿಸ್ ಬಿ, ಸಿ ಲಸಿಕಾ ಶಿಬಿರ ಏರ್ಪಡಿಸಲಾಗಿದೆ.

ಒಂದು ವಾರಗಳ ಕಾಲ ನಡೆಯುವ ಈ ಲಸಿಕಾ ಶಿಬಿರವನ್ನು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹಾಗೂ ನಟ ದಿಗಂತ್ ಜೊತೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಲಿವರ್ ಆರೋಗ್ಯ ಕಾಪಾಡಿಕೊಳ್ಳುವುದರ ಕುರಿತು ಸಾರ್ವಜನಿಕರಲ್ಲಿ ಅರಿವು ಉಂಟು ಮಾಡುವ ಉದ್ದೇಶದಿಂದ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಫ್ರೀಡಂ ಪಾರ್ಕ್‌ ಬಳಿ ನಟ ದಿಗಂತ್‌ ಸೈಕಲ್‌ ಜಾಥಾಕ್ಕೆ ಚಾಲನೆ ನೀಡಿದರು.

ಸೈಕಲ್‌ ಜಾಥಾದಲ್ಲಿ ನೂರಾರು ಜನರು ಸ್ವಯಂ ಆಸಕ್ತಿಯಿಂದ ಪಾಲ್ಗೊಂಡು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಕೈಜೋಡಿಸಿದ್ದು ವಿಶೇಷವಾಗಿತ್ತು.

ಸುಮಾರು ಐದು ಕಿ.ಮಿ ವರೆಗೆ ನಡೆದ ಸೈಕಲ್ ಜಾಥಾ ಶಿವಮೂರ್ತಿ ಸರ್ಕಲ್ ನಲ್ಲಿ ಕೊನೆಗೊಂಡಿತು.

ಖುದ್ದು ಸೈಕಲ್‌ ತುಳಿದುಕೊಂಡು ಜಾಥಾದಲ್ಲಿ ಪಾಲ್ಗೊಂಡ ನಟ ದಿಗಂತ್‌, ದೇಹ ಫಿಟ್ ಆಗಿರಲು ವ್ಯಾಯಾಮ, ನಡಿಗೆಗಿಂತ ಪ್ರತಿದಿನ ಸೈಕ್ಲಿಂಗ್ ಅಭ್ಯಾಸ ಆರೋಗ್ಯಕ್ಕೆ ಅತ್ಯುತ್ತಮವೆಂದು ಸಲಹೆ ನೀಡಿದರು.

ಎಲ್ಲರೂ ಹೆಪಟೈಟಿಸ್ ಬಿ ಬಗ್ಗೆ ನಿರ್ಲಕ್ಷ್ಯ ಮಾಡದೇ ಮುನ್ನೆಚ್ಚರಿಕೆಯಿಂದ ತಪಾಸಣೆ ಲಸಿಕೆ ಪಡೆಯುವಂತೆ ಯುವಜನತೆಗೆ ದಿಗಂತ್‌ ಕರೆ ನೀಡಿದರು.

ಸವಳಂಗ ರಸ್ತೆಯ ಸುಶೋಧ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿರುವ ಹೆಪಟೈಟಿಸ್ ಲಸಿಕಾ ಅಭಿಯಾನಕ್ಕೆ ಮೊದಲ ದಿನವೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರಕಿತು.

ಮೊದಲ ದಿನವೇ ನೂರಾರು ಸಂಖ್ಯೆಯಲ್ಲಿ ಜನರು ಭಾಗಹಿಸಿ, ಲಸಿಕೆ ಪಡೆದರಲ್ಲದೇ ಸುಶೋಧ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ಪ್ರದೀಪ್‌ಕುಮಾರ್‌ ಜಿ.ಕೆ ಅವರಿಗೆ ಧನ್ಯವಾದ ಸಲ್ಲಿಸಿದರು.

ರೋಟರಿಯನ್ ಚಂದ್ರು ಮೊದಲ ಲಸಿಕೆ ಪಡೆಯುವ ಮೂಲಕ ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಕ್ಕಿತು.

ಒಂದು ತಿಂಗಳ ಅಂತರದಲ್ಲಿ ಹೈಪಟೇಟಿಸ್‌ 3 ಡೋಸ್ ಲಸಿಕೆ ಪಡೆದಲ್ಲಿ ಲಿವರ್ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ ಎಂದು ಸುಶೋಧ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರದೀಪ್‌ಕುಮಾರ್‌ ಜಿ.ಕೆ ಹೇಳಿದರು.

ಹೆಪಟೈಟಿಸ್ ಬಿ, ಸಿ ಲಸಿಕಾ ಶಿಬಿರದ ಪ್ರಯೋಜನ ಪಡೆಯಬಯಸುವವರು ಕಡ್ಡಾಯವಾಗಿ ಆಸ್ಪತ್ರೆಯ ಸಹಾಯವಾಣಿಗೆ ಕರೆ ಮಾಡಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ನೋಂದಣಿಗಾಗಿ ಫೋನ್‌ ಸಂಖ್ಯೆ : 8277736465, ಹಾಗೂ 7349091991 ಗೆ ಕರೆಮಾಡಬಹುದೆಂದು ತಿಳಿಸಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಂಗ್ರೆಸ್ ಯುವ ಮುಖಂಡ ಶರತ್ ಮರಿಯಪ್ಪ ಮಾತನಾಡಿ, ಆಸ್ಪತ್ರೆಗಳು ಹೆಚ್ಚು ವ್ಯಾವಹಾರಿಕವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಸುಶೋಧ ಆಸ್ಪತ್ರೆಯ ಕಾರ್ಯವನ್ನು ಶ್ಲಾಘಿಸಿದರು.

ಇಷ್ಟುದೊಡ್ಡ ಮಟ್ಟದಲ್ಲಿ ವಾರಗಳ ಕಾಲ ಶಿಬಿರ ಆಯೋಜಿಸಿ ಜನರಿಗೆ ಉಚಿತ ಲಸಿಕೆ ನೀಡುವ ಮೂಲಕ ಸುಶೋಧ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರದೀಪ್‌ಕುಮಾರ್‌ ಜಿ.ಕೆ, ಅವರ ಸೇವಾಮನೋಭಾವನೆಯು ಇತರೆ ಆಸ್ಪತ್ರೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

Follow Us

Leave a Reply

Your email address will not be published. Required fields are marked *

Back to top button