ಅಜಾತಶತ್ರು “ರಾಘಣ್ಣ” ಹುಟ್ಟುಹಬ್ಬ ಸಂಭ್ರಮ|ನಾಡು ಕಂಡ ಅಪರೂಪದ ರಾಜಕಾರಣಿಗೆ ನಾಗರಿಕ ಸನ್ಮಾನ|ಅಭಿಮಾನಿಗಳಿಂದ ಗೌರವ ಸಮರ್ಪಣೆ
ಸತತ 4 ಬಾರಿ ಲೋಕಸಭಾ ಸದಸ್ಯರಾಗಿ, ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಅತ್ಯಧಿಕ ಮತಗಳಿಂದ ಗೆದ್ದು ಬಂದಿರುವ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಇವತ್ತಿಗೂ ಅಂತಸ್ತಿಕೆ, ದೊಡ್ಡಸ್ತನ, ಧಿಮಾಕು.. ತೋರಿಸಿದವರೇ ಅಲ್ಲ.
ಶಿವಮೊಗ್ಗ: ರಾಜ್ಯ ಕಂಡ ಸಹೃದಯಿ ರಾಜಕಾರಣಿ, ಬಡವರ ಬಗ್ಗೆ ಅಪಾರ ಕಳಕಳಿಯುಳ್ಳ ಧೀಮಂತ ನಾಯಕ, ಜನರ ಪಾಲಿನ ಪ್ರೀತಿಯ “ರಾಘಣ್ಣ” ಸೋಲಿಲ್ಲದ ಸರದಾರ, ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸ ಗಳಿಸಿರುವ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಆಗಸ್ಟ್ 16 ರಂದು ಹುಟ್ಟುಹಬ್ಬದ ಸಂಭ್ರಮ.

ಆದರೆ ರಾಜ್ಯದಲ್ಲಿ ಕೆಲವೆಡೆ ಬರಗಾಲ, ಕೆಲವೆಡೆ ಅತಿವೃಷ್ಟಿಯಂತಹ ಸಂದಿಗ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆಗೆ ನಿರಾಕರಿಸಿದ್ದ ಬಿ.ವೈ.ರಾಘವೇಂದ್ರ ಅವರನ್ನು ಅವರ ಶಿವಮೊಗ್ಗದ ಅಭಿಮಾನಿಗಳು ಪಟ್ಟು ಹಿಡಿದು ಸರಳ ರೀತಿಯಲ್ಲಿ ಆಚರಣೆ ಮಾಡುವದಾಗಿ ಬಿ.ವೈ.ರಾಘವೇಂದ್ರ ಅವರನ್ನು ಒಪ್ಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹತ್ತು ಹಲವು ಧಾರ್ಮಿಕ ಹಾಗೂ ಸಾಮಾಜಿಕ ಮತ್ತು ಅಭಿನಂದನಾ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳ ಬಳಗ ಹಮ್ಮಿಕೊಂಡಿದೆ.
ಅಜಾತಶತ್ರು “ರಾಘಣ್ಣ”
ಬಹುಶಃ ರಾಜಕಾರಣಿಗಳು ಸಹ ಈ ತರಹದ ಮೃದು ಸ್ವಭಾವದವರು ಇರುತ್ತಾರಾ? ಎಂಬ ಶಂಕೆ ಕೆಲವರನ್ನು ಆಗಾಗ ಕಾಡ್ತಾ ಇರುತ್ತೆ.
ಹೌದು…ಸತತ 4 ಬಾರಿ ಲೋಕಸಭಾ ಸದಸ್ಯರಾಗಿ, ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಅತ್ಯಧಿಕ ಮತಗಳಿಂದ ಗೆದ್ದು ಬಂದಿರುವ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಇವತ್ತಿಗೂ ಅಂತಸ್ತಿಕೆ, ದೊಡ್ಡಸ್ತನ, ಧಿಮಾಕು.. ತೋರಿಸಿದವರೇ ಅಲ್ಲ.
ದಿನವೂ ಸಮಸ್ಯೆ ಹೊತ್ತು ನೂರಾರು ಜನರು ಅವರನ್ನು ಭೇಟಿಯಾಗುತ್ತಾರೆ. ದಿನವೂ ಒಂದು ಕ್ಷೇತ್ರಕ್ಕೆ ತೆರಳಿ ಅಭಿವೃದ್ಧಿಪರ ಪ್ರಗತಿ ವೀಕ್ಷಣೆ ಮಾಡುವ ಸಂಸದರಿಗೆ ಭಾನುವಾರವೂ ಸಹ ಬಿಡುವು ಇಲ್ಲದೇ ಕೆಲಸ ಮಾಡುವ ಉತ್ಸಾಹಿ ದಣಿವರಿಯದ ರಾಜಕಾರಣಿ.
ಎಂದಿಗೂ ಯಾರನ್ನು ಕೀಳು ಮಟ್ಟದಲ್ಲಿ ಮಾತನಾಡಿಸಿದ್ದರ ಉದಾಹರಣೆ ಇಲ್ಲ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಬಿ.ವೈ.ರಾಘವೇಂದ್ರ ಅವರನ್ನು ಜನರು ಪ್ರೀತಿಯಿಂದ ಅತ್ಯಂತ ಸಲುಗೆಯಿಂದ ರಾಘಣ್ಣ ಎಂದರೇ, ಗೆಳೆಯರು ರಾಘು ಎಂದು ಸಂಬೋಧಿಸುತ್ತಾರೆ.
ಚುನಾವಣೆ ಸಂದರ್ಭದಲ್ಲಿ ಎದುರಾಳಿ ಪ್ರತಿಸ್ಪರ್ಧಿಯನ್ನು ಎದುರಿಸಿದ್ದು ಬಿಟ್ಟರೇ ಈವರೆಗೆ ಜನರ ಪ್ರೀತಿಯ ರಾಘಣ್ಣ ಅವರಿಗೆ ವಿರೋಧಿಗಳೇ ಇಲ್ಲದ ಅಜಾತಶತ್ರು ಎಂದು ಗುರುತಿಸಲ್ಪಡುತ್ತಾರೆ.
ಇಂತಹ ಧೀಮಂತ ನಾಯಕನಿಗೆ ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರು, ಅಭಿಮಾನಿಗಳು ಕೂಡಿಕೊಂಡು ಆಗಸ್ಟ್ 16 ರಂದು ರಾಘಣ್ಣನ ಅಪೇಕ್ಷೆಯಂತೇ ಸರಳ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.
ಆಗಸ್ಟ್ 16 ರಂದು ಏನೆಲ್ಲ ಕಾರ್ಯಕ್ರಮ?
- ಮೊದಲಿಗೆ ಬೆಳಗ್ಗೆ 7.30 ಕ್ಕೆ ವಿನೋಬನಗರದ ಶಿವಾಲಯದಲ್ಲಿ ಸಂಸದರ ಹೆಸರಿನಲ್ಲಿ ರುದ್ರಾಭಿಷೇಕ ನಡೆಯಲಿದೆ.
- ಬಳಿಕ 8.30 ಕ್ಕೆ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
- 10.30 ಕ್ಕೆ ರೇಲ್ವೆ ನಿಲ್ದಾಣದಲ್ಲಿ ಸಿಹಿ ವಿತರಿಸಲಿದ್ದಾರೆ.
- ಬಳಿಕ ಬೆಳಗ್ಗೆ 11.30 ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.
- ಇನ್ನು ಸಂಜೆ 5.30ಕ್ಕೆ ಬಂಟರ ಭವನದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ನಾಗರಿಕೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
- ಇನ್ನು ಸಂಸದ ಬಿ.ವೈ.ರಾಘವೇಂದ್ರ ಅವರ ಹುಟ್ಟುಹಬ್ಬವನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಬಿಜೆಪಿ ವತಿಯಿಂದಲೂ ವಿವಿದೆಡೆ ಆಚರಿಸಲಾಗುತ್ತಿದೆ.
- ಬೆಳಿಗ್ಗೆ ಅನವೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹಿರಿಮಾವುದಮ್ಮ ದೇವಸ್ಥಾನದಲ್ಲಿ ಸಂಕಲ್ಪ ಪೂಜೆ ನೆರವೇರಲಿದೆ.
- ತದನಂತರ ಹೊಳೆಹೊನ್ನೂರಿನ ಕೈಮರದಲ್ಲಿರುವ ಶಿವ ದೇವಸ್ಥಾನ, ಹೊಳೆಹೊನ್ನೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಕುಂಸಿ ಭಾಗದ ಶ್ರೀ ಸಿದ್ದೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಕೆ. ಬಿ. ಅಶೋಕ್ ನಾಯ್ಕ್ ತಿಳಿಸಿದ್ದಾರೆ
- ಮಧ್ಯಾಹ್ನ 3:30 ಕ್ಕೆ ಬಂಜಾರ ಸಮುದಾಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಜನರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಾಡು ಕಂಡ ಅಪರೂಪದ ರಾಜಕಾರಣಿಗೆ ಆಶೀರ್ವದಿಸಿ, ಹರಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.
ADVT

ಸಂಸದ ಬಿ.ವೈ.ರಾಘವೇಂದ್ರ ಅವರ ಹುಟ್ಟುಹಬ್ಬದ
ಹಿನ್ನೆಲೆಯಲ್ಲಿ ಅವರ ಕೆಲವು ಚಿತ್ರಪಟಗಳು..|
































