KarnatakaShivamogga

ಅಜಾತಶತ್ರು “ರಾಘಣ್ಣ” ಹುಟ್ಟುಹಬ್ಬ ಸಂಭ್ರಮ|ನಾಡು ಕಂಡ ಅಪರೂಪದ ರಾಜಕಾರಣಿಗೆ ನಾಗರಿಕ ಸನ್ಮಾನ|ಅಭಿಮಾನಿಗಳಿಂದ ಗೌರವ ಸಮರ್ಪಣೆ

ಸತತ 4 ಬಾರಿ ಲೋಕಸಭಾ ಸದಸ್ಯರಾಗಿ, ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಅತ್ಯಧಿಕ ಮತಗಳಿಂದ ಗೆದ್ದು ಬಂದಿರುವ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಇವತ್ತಿಗೂ ಅಂತಸ್ತಿಕೆ, ದೊಡ್ಡಸ್ತನ, ಧಿಮಾಕು.. ತೋರಿಸಿದವರೇ ಅಲ್ಲ.

ಶಿವಮೊಗ್ಗ: ರಾಜ್ಯ ಕಂಡ ಸಹೃದಯಿ ರಾಜಕಾರಣಿ, ಬಡವರ ಬಗ್ಗೆ ಅಪಾರ ಕಳಕಳಿಯುಳ್ಳ ಧೀಮಂತ ನಾಯಕ, ಜನರ ಪಾಲಿನ ಪ್ರೀತಿಯ “ರಾಘಣ್ಣ” ಸೋಲಿಲ್ಲದ ಸರದಾರ, ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸ ಗಳಿಸಿರುವ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಆಗಸ್ಟ್‌ 16 ರಂದು ಹುಟ್ಟುಹಬ್ಬದ ಸಂಭ್ರಮ.

ಆದರೆ ರಾಜ್ಯದಲ್ಲಿ ಕೆಲವೆಡೆ ಬರಗಾಲ, ಕೆಲವೆಡೆ ಅತಿವೃಷ್ಟಿಯಂತಹ ಸಂದಿಗ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆಗೆ ನಿರಾಕರಿಸಿದ್ದ ಬಿ.ವೈ.ರಾಘವೇಂದ್ರ ಅವರನ್ನು ಅವರ ಶಿವಮೊಗ್ಗದ ಅಭಿಮಾನಿಗಳು ಪಟ್ಟು ಹಿಡಿದು ಸರಳ ರೀತಿಯಲ್ಲಿ ಆಚರಣೆ ಮಾಡುವದಾಗಿ ಬಿ.ವೈ.ರಾಘವೇಂದ್ರ ಅವರನ್ನು ಒಪ್ಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹತ್ತು ಹಲವು ಧಾರ್ಮಿಕ ಹಾಗೂ ಸಾಮಾಜಿಕ ಮತ್ತು ಅಭಿನಂದನಾ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳ ಬಳಗ ಹಮ್ಮಿಕೊಂಡಿದೆ.

ಬಹುಶಃ ರಾಜಕಾರಣಿಗಳು ಸಹ ಈ ತರಹದ ಮೃದು ಸ್ವಭಾವದವರು ಇರುತ್ತಾರಾ? ಎಂಬ ಶಂಕೆ ಕೆಲವರನ್ನು ಆಗಾಗ ಕಾಡ್ತಾ ಇರುತ್ತೆ.

ಹೌದು…ಸತತ 4 ಬಾರಿ ಲೋಕಸಭಾ ಸದಸ್ಯರಾಗಿ, ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಅತ್ಯಧಿಕ ಮತಗಳಿಂದ ಗೆದ್ದು ಬಂದಿರುವ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಇವತ್ತಿಗೂ ಅಂತಸ್ತಿಕೆ, ದೊಡ್ಡಸ್ತನ, ಧಿಮಾಕು.. ತೋರಿಸಿದವರೇ ಅಲ್ಲ.

ದಿನವೂ ಸಮಸ್ಯೆ ಹೊತ್ತು ನೂರಾರು ಜನರು ಅವರನ್ನು ಭೇಟಿಯಾಗುತ್ತಾರೆ. ದಿನವೂ ಒಂದು ಕ್ಷೇತ್ರಕ್ಕೆ ತೆರಳಿ ಅಭಿವೃದ್ಧಿಪರ ಪ್ರಗತಿ ವೀಕ್ಷಣೆ ಮಾಡುವ ಸಂಸದರಿಗೆ ಭಾನುವಾರವೂ ಸಹ ಬಿಡುವು ಇಲ್ಲದೇ ಕೆಲಸ ಮಾಡುವ ಉತ್ಸಾಹಿ ದಣಿವರಿಯದ ರಾಜಕಾರಣಿ.

ಎಂದಿಗೂ ಯಾರನ್ನು ಕೀಳು ಮಟ್ಟದಲ್ಲಿ ಮಾತನಾಡಿಸಿದ್ದರ ಉದಾಹರಣೆ ಇಲ್ಲ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಬಿ.ವೈ.ರಾಘವೇಂದ್ರ ಅವರನ್ನು ಜನರು ಪ್ರೀತಿಯಿಂದ ಅತ್ಯಂತ ಸಲುಗೆಯಿಂದ ರಾಘಣ್ಣ ಎಂದರೇ, ಗೆಳೆಯರು ರಾಘು ಎಂದು ಸಂಬೋಧಿಸುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಎದುರಾಳಿ ಪ್ರತಿಸ್ಪರ್ಧಿಯನ್ನು ಎದುರಿಸಿದ್ದು ಬಿಟ್ಟರೇ ಈವರೆಗೆ ಜನರ ಪ್ರೀತಿಯ ರಾಘಣ್ಣ ಅವರಿಗೆ ವಿರೋಧಿಗಳೇ ಇಲ್ಲದ ಅಜಾತಶತ್ರು ಎಂದು ಗುರುತಿಸಲ್ಪಡುತ್ತಾರೆ.

ಇಂತಹ ಧೀಮಂತ ನಾಯಕನಿಗೆ ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರು, ಅಭಿಮಾನಿಗಳು ಕೂಡಿಕೊಂಡು ಆಗಸ್ಟ್‌ 16 ರಂದು ರಾಘಣ್ಣನ ಅಪೇಕ್ಷೆಯಂತೇ ಸರಳ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.

ಜನರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಾಡು ಕಂಡ ಅಪರೂಪದ ರಾಜಕಾರಣಿಗೆ ಆಶೀರ್ವದಿಸಿ, ಹರಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

ADVT

ಸಂಸತ್ತಿನ ಮುಂದೆ ಸಂಸದ ಬಿ.ವೈ.ರಾಘವೇಂದ್ರ
ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ಅವರೊಂದಿಗೆ ಸಂತಸದ ಕ್ಷಣ..
ತಮ್ಮ ಪತ್ನಿ ಜೊತೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರ ಆಶೀರ್ವಾದ ಪಡೆದ ಕ್ಷಣ..
ಕೇಂದ್ರ ಸಚಿವ ಜೆ.ಪಿ,ನಡ್ಡಾ ಜೊತೆ…
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರೊಂದಿಗೆ ಸಂತಸದ ಕ್ಷಣ..
ಕುಟುಂಬದೊಂದಿಗೆ ಧರ್ಮಸ್ಥಳದಲ್ಲಿ..
ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಶ್ರೀಮತಿ ಮೈತ್ರಾದೇವಿ ಅವರ ಅಪರೂಪದ ಚಿತ್ರ..
Follow Us

Leave a Reply

Your email address will not be published. Required fields are marked *

Back to top button