HealthKarnatakaShivamogga

ಕಾರ್ಮಿಕ ಇಲಾಖೆಯಲ್ಲಿ 800 ಕೋಟಿರೂ.ಹಗರಣ|ಕಾರ್ಮಿಕರ ಆರೋಗ್ಯ ತಪಾಸಣೆ ನೆಪದಲ್ಲಿ ಲೂಟಿ?,ಸಚಿವ ಲಾಡ್‌ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಯಾವ ಕಾರ್ಮಿಕರಿಗೆ ಎಲ್ಲಿ ,ಯಾವ ವೈದ್ಯರು ತಪಾಸಣೆ ನಡೆಸಿದರು? ಯಾವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಿತು? ಬಳಸಿದ ಕಿಟ್‌ಗಳ ಖರೀದಿ ಹಾಗೂ ಪಾವತಿ ವಿವರಗಳಂತಹ ದಾಖಲೆಗಳೇ ಲಭ್ಯವಿಲ್ಲ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

ಶಿವಮೊಗ್ಗ: ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿರೂ. ಅಕ್ರಮ ನಡೆದಿದೆ ಎಂದು ಮಾಜಿ ಗೃಹಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಈ ಬಹುಕೋಟಿರೂ. ಹಗರಣದಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹಾಗೂ ಕಾರ್ಮಿಕ ಮಂಡಳಿ ಅಧಿಕಾರಿಗಳು ಭಾಗಿಯಾಗಿದ್ದು, ಇಡಿ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಮಂಗಳವಾರದಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಮಿಕ ಇಲಾಖೆಯಲ್ಲಿ ನಡೆದಿರುವ ಬಹುಕೋಟಿ ಹಗರಣದ ವಿವರಗಳನ್ನು ಬಿಚ್ಚಿಟ್ಟರಲ್ಲದೇ, ಈ ಹಗರಣದ ನೈತಿಕ ಹೊಣೆ ಹೊತ್ತು ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿ ಕಾರ್ಮಿಕನ ಆರೋಗ್ಯ ತಪಾಸಣೆಗೆಂದು ವಾರ್ಷಿಕವಾಗಿ 2950ರೂ.ಗಳನ್ನು ಸರ್ಕಾರ ಹಣ ನೀಡುತ್ತಿದೆ.

ಆದರೆ ಕಳೆದ ಮೂರು ವರುಷಗಳ ಅವಧಿಯಲ್ಲಿ ಕಾರ್ಮಿಕ ಇಲಾಖೆಯು 81 ಕಾರ್ಯಾದೇಶಗಳ ಮೂಲಕ 27.13ಲಕ್ಷ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕಾರ್ಮಿಕರ ಆರೋಗ್ಯ ತಪಾಸಣೆಗೆ 800ಕೋಟಿ ರೂಗಳ ಲೆಕ್ಕ ತೋರಿಸಿರುವ ಆರೋಗ್ಯ ಇಲಾಖೆಯು ಸಂಪುಟದ ಒಪ್ಪಿಗೆ ಇಲ್ಲದೇ ಟೆಂಡರ್‌ ಕರೆದಿರುವ ಹಿಂದೆ ಗೋಲ್‌ಮಾಲ್‌ ನಡೆದಿದೆ ಎಂದು ಮಾಜಿ ಸಚಿವ ಆರಗ್‌ ಜ್ಞಾನೇಂದ್ರ ಆರೋಪಿಸಿದರು.

ತಮಗೆ ಅನುಕೂಲವಾಗಿರುವ ಏಜೆನ್ಸಿಗಳಿಗೆ ಟೆಂಡರ್‌ ನೀಡುವ ಮೂಲಕ ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದ್ದು, ಸುಮಾರು 30 ಕೋಟಿ ರೂ. ವೆಚ್ಚದ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ 8 ಮಂದಿ ಗುತ್ತಿಗೆದಾರರಿಗೆ 81 ವರ್ಕ್‌ ಆರ್ಡರ್‌ಗಳನ್ನು ನೀಡಲಾಗಿದೆ.

ಆದರೆ, ಯಾವ ಕಾರ್ಮಿಕರಿಗೆ ಎಲ್ಲಿ ,ಯಾವ ವೈದ್ಯರು ತಪಾಸಣೆ ನಡೆಸಿದರು? ಯಾವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಿತು? ಬಳಸಿದ ಕಿಟ್‌ಗಳ ಖರೀದಿ ಹಾಗೂ ಪಾವತಿ ವಿವರಗಳಂತಹ ದಾಖಲೆಗಳೇ ಲಭ್ಯವಿಲ್ಲ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button