Shivamogga

ಸುಂದರೇಶ್‌ ಆಟಾಟೋಪಕ್ಕೆ ಬ್ರೇಕ್‌ ಹಾಕಿದ ಕಾಂಗ್ರೆಸ್|ಸೂಡಾ ಅಧ್ಯಕ್ಷರಾಗಿ ಸಿ.ಜಿ.ಮಧುಸೂದನ್‌ ಅಧಿಕಾರ ಸ್ವೀಕಾರ|ಯುವಕರಿಗೆ ಮಣೆ ಹಾಕಿದ ಹೈಕಮಾಂಡ|

ಗುರುವಾರದಂದು ಆದೇಶ ಪ್ರತಿ ದೊರಕುತ್ತಿದ್ದಂತೇ ನೂತನ ಅಧ್ಯಕ್ಷ ಸಿ.ಜಿ.ಮಧುಸೂಧನ್‌ ಅವರು ಸೂಡಾ ಕಚೇರಿಗೆ ತೆರಳಿ, ಅಧಿಕಾರ ಸ್ವೀಕಾರ ಮಾಡಿದರು.

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ಯುವ ಕಾಂಗ್ರೆಸ್‌ ಮುಖಂಡ ಸಿ.ಜಿ.ಮಧುಸೂದನ್‌ ಅವರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ.ಕೆ ಆದೇಶ ಹೊರಡಿಸಿದ್ದಾರೆ.

ಗುರುವಾರದಂದು ಆದೇಶ ಪ್ರತಿ ದೊರಕುತ್ತಿದ್ದಂತೇ ನೂತನ ಅಧ್ಯಕ್ಷ ಸಿ.ಜಿ.ಮಧುಸೂದನ್‌ ಅವರು ಸೂಡಾ ಕಚೇರಿಗೆ ತೆರಳಿ, ಅಧಿಕಾರ ಸ್ವೀಕಾರ ಮಾಡಿದರು.

ಎನ್‌ಎಸ್‌ಯುಐ ಮೂಲಕ ಕಾಂಗ್ರೆಸ್‌ ಸೇರಿದ್ದ ಮಧುಸೂದನ್‌, ಬಳಿಕ ಯುವ ಕಾಂಗ್ರೆಸ್‌ನ ಮಂಚೂಣಿ ನಾಯಕರಾಗಿ ಹೊರಹೊಮ್ಮಿದ್ದರು.

ಈವರೆಗೆ ಸೂಡಾ ಅಧ್ಯಕ್ಷರಾಗಿದ್ದ ಸುಂದರೇಶ್‌ ಅವರು ಇತ್ತೀಚೆಗೆ ಪಕ್ಷದ ನಾಯಕರ ವಿರುದ್ದವೇ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಮತ್ತು ಸೂಡಾ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುತ್ತಾರೆ ಎಂಬ ಸುದ್ದಿ ಕಾಂಗ್ರೆಸ್‌ ಪಕ್ಷದ ವಲಯಗಳಲ್ಲಿ ಹರಡಿತ್ತು.

ಈ ಮಧ್ಯೆ ಸುಂದರೇಶ್‌ ಅವರ ಅಧಿಕಾರವಧಿ ಮುಗಿದಿದ್ದರಿಂದ ಕೂಡಲೇ ಜಾರಿಗೆ ಬರುವಂತೇ ಆದೇಶ ನೀಡಿ, ಸಿ.ಜಿ.ಮಧುಸೂದನ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

Follow Us

Leave a Reply

Your email address will not be published. Required fields are marked *

Back to top button