ಶಿವಮೊಗ್ಗ ದಸರಾ-2026 ಆಚರಣೆ|ಜಂಬೂಸವಾರಿ ಆನೆಗಳಿಗೆ ಸಾಂಪ್ರಾದಾಯಿಕ ಸ್ವಾಗತ|ಸಕ್ರೆಬೈಲ್ನಲ್ಲಿ ಶಾಸಕ ಚೆನ್ನಬಸಪ್ಪರಿಂದ ಪೂಜೆ
ಅಂಬಾರಿ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಹೊತ್ತು ಸಾಗಲಿರುವ ಗಜಪಡೆಯ ಕ್ಯಾಪ್ಟನ್ ಸಾಗರ್ಗೆ ಬಹದ್ದೂರ್ ಮತ್ತು ಸೋಮಣ್ಣ ಆನೆಗಳು ಸಾಥ್ ನೀಡಲಿವೆ ಎಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ ದಸರಾ-2026 ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಹೊರಲಿರುವ ಗಜಪಡೆಗೆ ಗುರುವಾರದಂದು ಶಾಸಕ ಎಸ್.ಎನ್. ಚನ್ನಬಸಪ್ಪ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಕವಾಗಿ ಆಹ್ವಾನಿಸಲಾಯಿತು.

ಶಿವಮೊಗ್ಗ ಪಾಲಿಕೆಯ ಆಯುಕ್ತ ಮಾಯಣ್ಣಗೌಡ ಹಾಗೂ ಇತರರೊಡನೆ ಗುರವಾರದಂದು ಸಕ್ರೆಬೈಲು ಆನೆ ಬಿಡಾರಕ್ಕೆ ಶಾಸಕ ಚೆನ್ನಬಸಪ್ಪ ಭೇಟಿ ನೀಡಿದರು.

ಜಂಬೂಸವಾರಿಯ ತಾಲೀಮು, ಆನೆಗಳ ಆರೋಗ್ಯ ಮತ್ತು ಪಾಲನೆ, ಪೋಷಣೆಯ ವ್ಯವಸ್ಥೆಗಳ ಕುರಿತು ಅಧಿಕಾರಿಗಳು ಹಾಗೂ ಮಾವುತರೊಂದಿಗೆ ಸಮಾಲೋಚನೆ ನಡೆಸಿದರು.
ಅಂಬಾರಿ ಹೊರಲಿರುವ ಆನೆಗಳು|

ರಾಜ್ಯ ಸರ್ಕಾರದ ವಿಶೇಷ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಸಕ್ರೆಬೈಲಿನ ಬಿಡಾರದಿಂದ ಆಯ್ಕೆಯಾಗಿರುವ (ಸಾಗರ್ (41) ವರ್ಷ, ಬಹದ್ದೂರ್(40)ವರ್ಷ, ಸೋಮಣ್ಣ( 36 ) ಆನೆಗಳಿಗೆ ಹಣ್ಣು-ಹಂಪಲುಗಳನ್ನು ಶಾಸಕ ಚೆನ್ನಬಸಪ್ಪ ಇದೇ ವೇಳೆ ನೀಡಿ ಉಪಚರಿಸಿದರು.

ಅಂಬಾರಿ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಹೊತ್ತು ಸಾಗಲಿರುವ ಗಜಪಡೆಯ ಕ್ಯಾಪ್ಟನ್ ಸಾಗರ್ಗೆ ಬಹದ್ದೂರ್ ಮತ್ತು ಸೋಮಣ್ಣ ಆನೆಗಳು ಸಾಥ್ ನೀಡಲಿವೆ ಎಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ ದಸರಾ ಜಂಬೂಸವಾರಿಗ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಪೂಜೆ ಸಲ್ಲಿಸಿ ಯಾವುದೇ ಲೋಪವಿಲ್ಲದೆ ಉತ್ಸವ ಅತ್ಯಂತ ವೈಭವ ಹಾಗೂ ಶಿಸ್ತುಬದ್ಧವಾಗಿ ನೆರವೇರಲು ದೇವರಲ್ಲಿ ಪ್ರಾರ್ಥಿಸಿ ಆಮಂತ್ರಿಸಲಾಗಿದೆ ಎಂದು ಹೇಳಿದರು.
ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಉಪಾಧ್ಯಕ್ಷರುಗಳಾದ ಜ್ಞಾನೇಶ್ವರ್, ನಾಗರಾಜ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ಪಾಲಿಕೆಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







