ಗೋವಿಂದಾಪುರ, ಗೋಪಿಶೆಟ್ಟಿಕೊಪ್ಪ ಆಶ್ರಯ ಮನೆ ವಿತರಣೆ ವಿಳಂಬ|ರಾಷ್ಟ್ರಭಕ್ತ ಬಳಗದಿಂದ ಪ್ರತಿಭಟನಾ ಮೆರವಣಿಗೆ, ಧರಣಿ|ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವ
ಗೋಪಿಶೆಟ್ಟಿಕೊಪ್ಪದ ಕಾಮಗಾರಿಯ ಪ್ರಗತಿಯ ಬಗ್ಗೆಯೂ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ಶಿವಮೊಗ್ಗ: ಹಣ ಕಟ್ಟಿ 9 ವರ್ಷ ಕಳೆದರೂ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ನಿರ್ಮಿಸುತ್ತಿರುವ ಆಶ್ರಯ ಯೋಜನೆ ಮನೆಗಳ ವಿತರಣೆ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಅ. 27ರಂದು ಮಹಾನಗರ ಪಾಲಿಕೆ ಮುಂದೆ ರಾಷ್ಟ್ರಭಕ್ತರ ಬಳಗವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ , ಬೆಳಿಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮಹಾನಗರ ಪಾಲಿಕೆವರೆಗೂ ಬೃಹತ್ ಪ್ರತಿಭಟನಾ ಮೆರವಣಿ ನಡೆಸಿ ಪಾಲಿಕೆ ಆವರಣದಲ್ಲಿ ಧರಣಿ ನಡೆಸಲಾಗುವುದು ಎಂದು ಹೇಳಿದರು
9 ವರ್ಷ ವಿಳಂಬ|
423 ಮನೆ ಮಾತ್ರ ಹಂಚಿಕೆ|
2017ರಲ್ಲಿ ಹಣ ಕಟ್ಟಿಸಿಕೊಂಡ ನಂತರ ಕೇವಲ 463 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ.
ಬಡ ಕೂಲಿ ಕಾರ್ಮಿಕರು ಸಾಲ ಮಾಡಿ, ಚಿನ್ನಾಭರಣ ಹಾಗೂ ಮಂಗಳಸೂತ್ರ ಅಡಮಾನವಿಟ್ಟು ತಲಾ ₹80 ಸಾವಿರ ಪಾವತಿಸಿದ್ದು ಕಣ್ಣೀರು ಹಾಕುತ್ತಿದ್ದಾರೆ.
ಗೋಪಿಶೆಟ್ಟಿಕೊಪ್ಪದ ಕಾಮಗಾರಿಯ ಪ್ರಗತಿಯ ಬಗ್ಗೆಯೂ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಗೋವಿಂದಾಪುರದಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ನಾಗಾರ್ಜುನ ಕನ್‌ಸ್ಟ್ರಕ್ಷನ್‌ಗೆ ಸರ್ಕಾರದಿಂದ ₹15 ಕೋಟಿ ಬಾಕಿ ಇರುವುದರಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ ಎಂದರು.
2024 ರಲ್ಲಿ ಪ್ರತಿಭಟನೆ|
ಜಮೀರ್ ನೀಡಿದ್ದ ಭರವಸೆ ಹುಸಿ|
2024ರ ಜುಲೈ 18ರಂದು ರಾಷ್ಟ್ರಭಕ್ತರ ಬಳಗದ ವತಿಯಿಂದ ಪ್ರತಿಭಟನೆ ನಡೆಸಿ ಧರಣಿ ಸತ್ಯಾಗ್ರಹ ಕೈಗೊಂಡಾಗ, ಎರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೂಡ ಅಗತ್ಯ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು ಆದರೆ ಆ ಭರವಸೆ ಈಗ ಹುಸಿಯಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಮಧು ಬಂಗಾರಪ್ಪ ಬೇಡಿಕೆ ಈಡೇರಿಸಲಿ|
ಉಸ್ತುವಾರಿ ಸಚಿವ ಮಧುಬಂಗಾರಪ್ಪ ಮಹಾನಗರ ಪಾಲಿಕೆಗೆ ಬರಬೇಕು. ಫಲಾನುಭವಿಗಳಿಗೆ ಎಷ್ಟು ದಿನದಲ್ಲಿ ಮನೆ ವಿತರಿಸಲಾಗುತ್ತಿದೆ ಎಂಬ ಬಗ್ಗೆ ಭರವಸೆ ನೀಡಬೇಕೆಂದು ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು
ರಾಷ್ಟ್ರ ಭಕ್ತ ಬಳಗದ ಈ. ವಿಶ್ವಾಸ್ , ಮೋಹನ್ ಜಾಧವ್, ಶಂಕರ್ ನಾಯ್ಕ್, ಶಿವಾಜಿ, ಬಾಲು ಉಪಸ್ಥಿತರಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ.







