Shivamoggaಶಿವಮೊಗ್ಗ ದಸರಾ-2026
ಅಕ್ಟೋಬರ್ 12ರಂದು ಮಕ್ಕಳ ದಸರಾ ಕ್ರೀಡಾಕೂಟ|15ರಂದು ಸಮಾರೋಪ ಸಮಾರಂಭ|ಸರಿಗಮಪ ಲಿಟಲ್ ಚಾಂಪ್ ಗಾಯಕಿ ಕೀರ್ತಿ ಭಾಗಿ
ಕುವೆಂಪು ರಂಗಮಂದಿರ ಮತ್ತು ಎನ್ಇಎಸ್ ಮೈದಾನದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ನಗರದ ವಿವಿಧ ಶಾಲೆಗಳ ಪ್ರಾಥಮಿಕ ,ಪ್ರೌಢಶಾಲೆ ಮಕ್ಕಳು ಭಾಗವಹಿಸುವಂತೆ ಮಕ್ಕಳ ದಸರಾ ಸಮಿತಿ ಆಯೋಜಕರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಅಕ್ಟೋಬರ್ ಎರಡನೇ ತಾರೀಖಿನಿಂದ ನಡೆಯುತ್ತಿರುವ ಮಕ್ಕಳ ದಸರಾ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಅಕ್ಟೋಬರ್ 12 ರಂದು ಕ್ರೀಡಾ ಕೂಟ ಆಯೋಜಿಸಲಾಗಿದೆ.

ಕುವೆಂಪು ರಂಗಮಂದಿರ ಮತ್ತು ಎನ್ಇಎಸ್ ಮೈದಾನದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ನಗರದ ವಿವಿಧ ಶಾಲೆಗಳ ಪ್ರಾಥಮಿಕ ,ಪ್ರೌಢಶಾಲೆ ಮಕ್ಕಳು ಭಾಗವಹಿಸುವಂತೆ ಮಕ್ಕಳ ದಸರಾ ಸಮಿತಿ ಆಯೋಜಕರು ತಿಳಿಸಿದ್ದಾರೆ.

ಸಮಾರೋಪ ಸಮಾರಂಭ|
ಮಕ್ಕಳ ದಸರಾ ಸಮಾರೋಪ ಸಮಾರಂಭವು ಅಕ್ಟೋಬರ್ 15 ರಂದು ಫ್ರೀಡಂ ಪಾರ್ಕ್ನಲ್ಲಿ ಸಂಜೆ 5.30 ಕ್ಕೆ ನಡೆಯಲಿದೆ.
ಪ್ರಮುಖ ಆಕರ್ಷಣೆಯಾಗಿ ಸರಿಗಮಪ ಲಿಟಲ್ ಚಾಂಪ್ ಸೊರಬದ ಗಾಯಕಿ ಕು.ಕೀರ್ತಿ ಭಾಗವಹಿಸಲಿದ್ದಾರೆ. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ಸಾರ್ವಜನಿಕರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮಕ್ಕಳ ದಸರಾ ಸಮಿತಿ ಮನವಿ ಮಾಡಿದೆ.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







