ಹನಿ ಕಹಾನಿ ಸಚಿವರನ್ನು ಕೈ ಬಿಡಿ..|ಮಾಜಿ ಸಿಎಂ ವಿರುದ್ಧದ ಕುತಂತ್ರಕ್ಕೆ ಈಶ್ವರಪ್ಪ ಕಿಡಿ..|ಡಿಕೆಶಿ ಬೇಜವಾಬ್ದಾರಿ ಹೇಳಿಕೆಗೆ ಮಾಜಿ ಡಿಸಿಎಂ ಆಕ್ರೋಶ
ಮಾಜಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಹಿಂದೆ ಸ್ಟಿಂಗ್ ಆಪರೇಷನ್ ಕುತಂತ್ರವಿತ್ತು ಎಂಬ ವಿಚಾರಗಳು ಮುನ್ನಲೆಗೆ ಬಂದಿದ್ದು ಅಪಾಯಕಾರಿ ಬೆಳವಣಿಗೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ: ಹನಿ ಟ್ರ್ಯಾಪ್ ವಿಚಾರವಾಗಿ ಐವರು ಸಚಿವರಿಗೆ ಕರೆದು ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆಯಿಂದರಲು ಹೇಳ್ತಾರೆ ಅಂದರೆ! ತಮ್ಮ ಅಕ್ರಮ ಸಂಬಂಧ ಪ್ರವೃತ್ತಿಯನ್ನು ಮುಚ್ಚಿಕೊಂಡು ಹೋಗಿ ಎಂಬರ್ಥ ಬರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ
ಶುಕ್ರವಾರ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಐವರು ಸಚಿವರ ಹನಿಟ್ರ್ಯಾಪ್ ವಿಚಾರ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದ್ದರೆ ಅಂತಹವರನ್ನು ಮೊದಲು ಸಚಿವ ಸ್ಥಾನದಿಂದ ಕಿತ್ತುಹಾಕುವ ಧೈರ್ಯ ಮಾಡಿ ಕ್ಯಾಬಿನೇಟ್ ಪಾವಿತ್ರ್ಯತೆ ಕಾಪಾಡಲಿ ಎಂದು ಸಲಹೆ ನೀಡಿದರು.
ಅದನ್ನು ಬಿಟ್ಟು ಎಚ್ಚರಿಕೆಯಿಂದ ಇರಲು ಹೇಳ್ತಾರೆ ಅಂದ್ರೆ ಅನೈತಿಕತೆಯನ್ನು ಕೈಬಿಡಿ ಎನ್ನುವ ಬದಲು “ನೀವು ಮಾಡುವುದನ್ನು ಮುಚ್ಚಿಕೊಂಡು ಮುಂದುವರಿಸಿ” ಎಂಬ ಧಾಟಿಯಲ್ಲಿ ಹೇಳಿರುವುದು ನಾಚಿಕೆಗೇಡಿತನ ಎಂದು ಹೇಳಿದರು.
ಸಿದ್ದು ಬದಲಾವಣೆ ಹಿಂದೆ ಸ್ಟಿಂಗ್ ಆಪರೇಷನ್?
ಮಾಜಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಹಿಂದೆ ಸ್ಟಿಂಗ್ ಆಪರೇಷನ್ ಕುತಂತ್ರವಿತ್ತು ಎಂಬ ವಿಚಾರಗಳು ಮುನ್ನಲೆಗೆ ಬಂದಿದ್ದು ಅಪಾಯಕಾರಿ ಬೆಳವಣಿಗೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.
ಒಂದು ಸರ್ಕಾರವನ್ನು ಬುಡಮೇಲು ಮಾಡಲು ಸಚಿವರ ಸ್ಟಿಂಗ್ ಆಪರೇಷನ್ ನಡೆಯುತ್ತದೆ ಎಂದಾದರೆ, ಪ್ರಜಾಪ್ರಭುತ್ವಕ್ಕೆ, ಮತ ಹಾಕಿದ ಜನತೆಗೆ ಮಾಡಿದ ಅವಮಾನವಲ್ಲವೇ ಎಂದು ಕಿಡಿಕಾರಿದರು.
ಬಿಜೆಪಿ ಸೇರ್ಪಡೆ ವಿಚಾರವಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಉತ್ತರಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ನಾನು ರಾಜಕಾರಣ ಮಾಡಿರೋದೇ ಬಿಜೆಪಿಯಿಂದ. ಈಗ ಬಿಜೆಪಿಯಿಂದ ಹೊರಗಿದ್ದು ರಾಜಕಾರಣ ಮಾಡುತ್ತಿರುವುದರಲ್ಲಿ ನನಗೆ ಸಮಾಧಾನವಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಮೂರುಸಾವಿರ ಮಠದ ಸ್ವಾಮೀಜಿಗಳು ನಮ್ಮ ರಾಯಭಾರಿಗಳಾಗಿ ಸೇವೆ ಮಾಡಿ ಎಂಬ ಹೇಳಿಕೆ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
ಇದೀಗ ಸ್ಟಿಂಗ್ ಆಪರೇಶನ್ ಹನಿಟ್ರ್ಯಾಪ್ ವಿಚಾರಗಳ ಬಗ್ಗೆ ಕ್ಯಾಬಿನೇಟ್ ನಲ್ಲೂ ಚರ್ಚಿಸಿ ಕ್ಯಾಬಿನೇಟ್ ಪಾವಿತ್ರ್ಯತೆಯನ್ನು ಹಾಳುಗೆಡವಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







