ಅ.14 ರಿಂದ ಸಿಹಿಮೊಗ್ಗೆಯಲ್ಲಿ ಸಿನಿ ದಸರಾ ಸಂಭ್ರಮ|ಡಾ.ರಾಜ್ಕುಮಾರ್ ಸೇರಿದಂತೆ ಹಲವು ಕಲಾವಿದರ ಚಿತ್ರ ಪ್ರದರ್ಶನ-ಶಾಸಕ ಎಸ್.ಎನ್.ಚನ್ನಬಸಪ್ಪ
ಅ.14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಿನಿ ದಸರಾ ಸಂಭ್ರಮದ ಪ್ರಯಕ್ತ ಹಲವು ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ: ಸಿನಿ ದಸರಾ ಅಂಗವಾಗಿ ಮಲೆನಾಡಿನ ಕಿರುಚಿತ್ರ ನಿರ್ಮಿಸುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವದರ ಜೊತೆಗೆ ಚಿತ್ರರಂಗದ ಸಾಧಕರಿಗೆ ಸನ್ಮಾನ, ರಾಜ್–ಅನಂತ್ ಗೀತೆಗಳ ಸಂಗೀತ ಸಂಭ್ರಮ ಏರ್ಪಡಿಸಲಾಗಿದ್ದು, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಚಾಲನೆ ನೀಡಲಿದ್ದಾರೆಂದು ದಸರಾ ಸಮಿತಿಗಳ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಿನಿಮೊಗೆ ಚಿತ್ರ ಸಮಾಜದ ಸಂಯುಕ್ತಾಶ್ರಯದಲ್ಲಿ
ಅ.14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಿನಿ ದಸರಾ ಸಂಭ್ರಮದ ಪ್ರಯಕ್ತ ಹಲವು ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ರಾಜ್–ಅನಂತ್ ಸಿನಿ ಸಂಭ್ರಮದ ಅಂಗವಾಗಿ ನಗರದ ಚಿತ್ರಮಂದಿರಗಳಲ್ಲಿ ಕನ್ನಡದ ಜನಪ್ರಿಯ ಚಿತ್ರಗಳನ್ನು ಪ್ರದರ್ಶನ ನಡೆಯಲಿದೆ.
- ಅ.14ರಂದು ಬೆಳಿಗ್ಗೆ 8.30ಕ್ಕೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಡಾ. ರಾಜ್ಕುಮಾರ್ ಅಭಿನಯದ ‘ಎರಡು ಕನಸು
- ಅ.16ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ‘ಸಂಪತ್ತಿಗೆ ಸವಾಲ್’
- ಅ.17ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ಗಾಳಿಪಟ–2
- ಅ.18ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು’, ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.
ಪೋಷಕ ಕಲಾವಿದೆ ಸಂಗೀತಾ ಅನಿಲ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ದೇಶಾದ್ರಿ ಹೊಸ್ಮನಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂ ರಾವ್ ಪಾಲ್ಗೊಳ್ಳಲಿದ್ದಾರೆ.


ಚಿತ್ರರಂಗದಲ್ಲಿ ಸಾಧನೆ ಮಾಡುತ್ತಿರುವ ನಗರದ ಪ್ರತಿಭೆಗಳಾದ ಗಾರ್ಗಿ ಕಾರೆಹಕ್ಲು, ಚಂದ್ರಶೇಖರ ಶಾಸ್ತ್ರಿ, ಚಂದ್ರಶೇಖರ ಹಿರೇಗೋಣಿಗೆರೆ, ದಾನಮ್, ಶಿವಮೊಗ್ಗ ರಾಮಣ್ಣ ಹಾಗೂ ರಘು ಗುಂಡ್ಲು ಅವರಿಗೆ ಸನ್ಮಾನಿಸಲಾಗುತ್ತದೆ ಶಾಸಕ ಎಸ್. ಎನ್. ಚನ್ನಬಸಪ್ಪ ತಿಳಿಸಿದರು
10 ಕಿರುಚಿತ್ರ ಪ್ರದರ್ಶನ|
ಮಾ.ಮಂಜುನಾಥ್ ರೋಹಿತ್ ಶ್ರೀನಾಥ್ ಭಾಗಿ|
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಉದ್ಘಾಟನೆಯ ಬಳಿಕ ‘ಪ್ರತಿಬಿಂಬ’ ಶೀರ್ಷಿಕೆಯಡಿ ಮಲೆನಾಡಿನ ಪ್ರತಿಭೆಗಳಿಂದ ನಿರ್ಮಿತ 10 ಕಿರುಚಿತ್ರಗಳನ್ನು ಪ್ರದರ್ಶನ ಸಂವಾದ ಕಾರ್ಯಕ್ರಮವಿದೆ ಎಂದು ಹೇಳಿದರು.
‘ಮಾಲ್ಗುಡಿ ಡೇಸ್’ ಖ್ಯಾತಿಯ ನಟ ಮಾಸ್ಟರ್ ಮಂಜುನಾಥ್ ಹಾಗೂ ಮಾಸ್ಟರ್ ರೋಹಿತ್ ಶ್ರೀನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಾದ ನಡೆಸಿಕೊಡಲಿದ್ದಾರೆ ಎಂದರು.
ಪೃಥ್ವಿ ಗೌಡ ನಿರ್ದೇಶನದ ‘ಕಬಂಧ’, ಪ್ರಶಾಂತ್ ಸಾಗರ್ ಅವರ ‘ಶರಾವತಿ’, ನಾಗರಾಜ್ ನೀಲ್ ಅವರ ‘ದಿ ಗಿಫ್ಟ್’, ಮೇದಿನಿ ಕೆಳಮನೆ ಅವರ ‘ದಾಳಿ’, ಈಶಾನ್ಯ ಶರ್ಮ ಅವರ ‘ಡಬಲ್ ಟಿಕ್’, ನಾಗರಾಜ ಕಿತ್ತೂರು ಅವರ ‘ಖಾಸಗಿ ಕನಸಿನ ಕಾಗದ’, ನವನ್ ಶ್ರೀನಿವಾಸ್ ಅವರ ‘ಗೋಣಿ ಚೀಲ’, ಅನಿಶ್ ಶರ್ಮ ಅವರ ‘ವಡ್ಡಾರಾಧಕ’, ನವೀನ್ ತೇಜಸ್ವಿ ಅವರ ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ’ ಹಾಗೂ ವಿದ್ಯಾಲಕ್ಷ್ಮಿ ಪ್ರಹ್ಲಾದ್ ಅವರ ‘ಘಮ’ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ರಾಜ್–ಅನಂತ್ ಗಾನಯಾನ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಿನಯ್ ಶಿವಮೊಗ್ಗ, ಪೃಥ್ವಿ ಗೌಡ, ಕಾರ್ತಿಕ್ ನಾಗಲಾಪುರ ಹಾಗೂ ಸಂಗೀತಾ ಕನ್ನಡ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಮೇಲ್ವಿನ್ ಲೀಮಾ, ವಿನಯ್, ರಮೇಶ್, ರಾಘವೇಂದ್ರ ರಂಗಧೋಳ್ ಹಾಗೂ ವಿಠಲ್ ರಂಗಧೋಳ್ ವಾದ್ಯಸಂಗೀತದಲ್ಲಿ ಸಾಥ್ ನೀಡಲಿದ್ದಾರೆ.
ಇಮ್ಯಾಜಿನ್ ಡಾನ್ಸ್ ಸ್ಟುಡಿಯೊ ತಂಡದಿಂದ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶನ ಇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







