CrimeDistrictShivamogga

ಬಾಲಕ ಸಂಕೇತ್‌ನ ಸಮಾಧಿ ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ|ನ್ಯಾಯ ಸಿಗುವವರೆಗೂ ವಿಶ್ರಮಿಸುವುದಿಲ್ಲ|ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ಇಂತಹ ಪುಂಡಾಟಿಕೆಗಳನ್ನು ಹತ್ತಿಕ್ಕಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಶಾಸಕ ಎಸ್‌.ಎನ್‌.ಚೆನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ: ಹತ್ಯೆಯಾದ ಬಾಲಕ ಸಂಕೇತ್‌ನ ಸಮಾಧಿಯನ್ನು ಧ್ವಂಸಗೊಳಿಸಿರುವ ದುಷ್ಕರ್ಮಿಗಳ ಹೇಯ ಕೃತ್ಯ ಕೇವಲ ಖಂಡನೀಯವಲ್ಲ, ಇದು ಅತ್ಯಂತ ಅಸಹನೀಯ ಮತ್ತು ವಿಕೃತ ಮನಸ್ಥಿತಿಯ ಪರಮಾವಧಿ ಎಂದು ಶಾಸಕ ಎಸ್‌.ಎನ್‌.ಚೆನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ತ ಮೇಲೆಯೂ ಹಗೆತನ ಸಾಧಿಸುವ ಇಂತಹ ವಿಕೃತ ಮನಸ್ಥಿತಿಯನ್ನು ಸಹಿಸುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಬಾಲಕ ಸಂಕೇತ್‌ ಸಮಾಧಿ ಸ್ಥಳಕ್ಕೆ ಗುರುವಾರದಂದು ಭೇಟಿ ನೀಡಿದ್ದ ಶಾಸಕ ಎಸ್‌.ಎನ್‌.ಚೆನ್ನಬಸಪ್ಪ , ಭಗ್ನಗೊಂಡಿದ್ದ ಸಮಾಧಿಯನ್ನು ಕುಟುಂಬಸ್ಥರು ಈಗ ಪುನರಸ್ಥಾಪಿಸಿದ್ದಾರೆ. ಸಂಕೇತ್ ತಂದೆಗೆ ನಿಮ್ಮೊಂದಿಗೆ ನಾವಿದ್ದೇವೆ, ನ್ಯಾಯ ಸಿಗುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಭರವಸೆ ನೀಡಿದ್ದೇನೆ ಎಂದು ಹೇಳಿದರು.

ಇಂತಹ ಪುಂಡಾಟಿಕೆಗಳನ್ನು ಹತ್ತಿಕ್ಕಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಶಾಸಕ ಎಸ್‌.ಎನ್‌.ಚೆನ್ನಬಸಪ್ಪ ತಿಳಿಸಿದರು.

Follow Us

Leave a Reply

Your email address will not be published. Required fields are marked *

Back to top button