ಶಿವಮೊಗ್ಗ: ಆನ್‌ಲೈನ್ ಔಷಧ ಮಾರಾಟ ನಿಷೇಧಕ್ಕೆ ಆಗ್ರಹ|ವ್ಯಾಪಾರಿಗಳ ಸಾಂಕೇತಿಕ ಪ್ರತಿಭಟನೆ|ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್|

ಶಿವಮೊಗ್ಗ: ಇ-ಕಾಮರ್ಸ್,ಮತ್ತಿತರ ಆನ್ಲೈನ್ ವೇದಿಕೆ ಮೂಲಕ ಔಷಧ ಮಾರಾಟ ವಿರೋಧಿಸಿ ದೇಶದಾದ್ಯಂತ ಭಾರತೀಯ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ಮೆಡಿಕಲ್ ಶಾಪ ಬಂದ್ ಆಗಿತ್ತು.

ಶಿವಮೊಗ್ಗದ ಡಿಸಿ ಕಚೇರಿ ಮುಂದೆ ನೂರಾರು ಮೆಡಿಕಲ್ ಶಾಪ್ ಮಾಲೀಕರು ಸಾಂಕೇತಿಕ ಪ್ರತಿಭಟನೆ ನಡೆಸಿ, ಕೂಡಲೇ ಆನ್‌ಲೈನ್ ಔಷಧಿಗಳ ಮಾರಾಟಕ್ಕೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು.
ಮೂರು ಬೇಡಿಕೆಗಳ ಈಡೇರಿಕೆಗೆ ಆಗ್ರಹ|
ಆನ್ಲೈನ್ ವೇದಿಕೆ ಮೂಲಕ ನಡೆಸುವ ಔಷಧ ಮಾರಾಟಕ್ಕೆ ಕೇಂದ್ರಸರ್ಕಾರ ಕಡಿವಾಣ ಹಾಕಬೇಕು, ಬೃಹತ್ ಕಾರ್ಪೊರೇಟ್ ಕಂಪನಿಗಳು ರಿಯಾಯಿತಿ ದರದ ಔಷಧ ಪೂರೈಕೆ ನಿಲ್ಲಿಸಬೇಕು.

ಅತಿಯಾದ ರಿಯಾಯಿತಿಗಳಿಂದಾಗಿ ನಕಲಿ ಔಷಧಿಗಳು, ಕಳಪೆಗುಣಮಟ್ಟದ ಅಪಾಯಕಾರಿ ಔಷಧಗಳು ಮಾರುಕಟ್ಟೆಗೆ ಪ್ರವೇಶ ತಡೆಗಟ್ಟಬೇಕೆಂದು ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಧುಕರ್ ಆಗ್ರಹಿಸಿದರು.
ಜಿಲ್ಲೆಯಲ್ಲಿ 1000ಕ್ಕೂ ಅಧಿಕ ಮೆಡಿಕಲ್ ಶಾಪ್ ಬಂದ್|
ಶಿವಮೊಗ್ಗದಲ್ಲಿ 200 ಮೆಡಿಕಲ್ ಶಾಪ್ ಬಂದ್|
ದೇಶಾದ್ಯಂತ ಅಖಿಲಭಾರತ ಔಷಧ ವ್ಯಾಪಾರಿಗಳ ಸಂಘಟನೆಯಲ್ಲಿ 12.40 ಲಕ್ಷ ಔಷಧ ವ್ಯಾಪಾರಿಗಳಿದ್ದು ರಾಜ್ಯದಲ್ಲಿ 45 ಸಾವಿರ ಚಿಲ್ಲರೆ ಔಷಧ ವ್ಯಾಪಾರಿಗಳಿದ್ದಾರೆ.
ಎಐಒಸಿಡಿ ಕರೆ ನೀಡಿದ ಹಿನ್ನಲೆ ದೇಶದ 12 ಲಕ್ಷ ಔಷಧ ವ್ಯಾಪಾರಿಗಳು ಬೆಂಬಲಿಸಿದ್ದು ಶಿವಮೊಗ್ಗದಲ್ಲೂ ಕೂಡ 1000ಕ್ಕೂ ಅಧಿಕ ಮೆಡಿಕಲ್ ಶಾಪ್ ಮಾಲೀಕರು ಬೆಂಬಲಿಸಿ 24 ಗಂಟೆ ಔಷಧ ಮಳಿಗೆಗಳನ್ನು ಬಂದ್ ಮಾಡುವ ಮೂಲಕ ಬಹುತೇಕ ಮುಷ್ಕರ ಯಶಸ್ವಿಯಾಗಿದೆ ಎಂದು ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಧುಕರ್ ಹೇಳಿದರು.
ಔಷಧ ಮಾರಾಟಗಾರರ ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಆನ್‌ಲೈನ್ ಔಷಧಗಳು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಇ ಕಾಮರ್ಸ್ ವೇದಿಕೆ ಮೂಲಕ ಔಷಧ ವಿತರಿಸುವರಿಗೆ ಫಾರ್ಮಾ ಪದವಿ ಕನಿಷ್ಠ ಅರ್ಹತೆ ಕುರಿತು ಸ್ಪಷ್ಟ ನೀತಿಗಳಿಲ್ಲ, ವೈದ್ಯರ ಸಲಹಾ ಚೀಟಿಗಳನ್ನ ಎಷ್ಟರ ಮಟ್ಟಿಗೆ ಪರಾಮರ್ಶಿಸಿ ವಿತರಿಸುತ್ತಾರೆಂಬ ಖಾತ್ರಿಯೂ ಇಲ್ಲ, ಸಾಂಪ್ರದಾಯಿಕ ಔಷಧ ವ್ಯಾಪಾರಿಗಳಿಗೆ ಆನ್ ಲೈನ್ ವ್ಯಾಪಾರ ದೊಡ್ಡ ಪೆಟ್ಟು ಕೊಟ್ಟಿದೆ.ಹೀಗಾಗಿ ಆನ್ ಲೈನ್ ಔಷಧ ಮಾರಾಟ ಸಂಪೂರ್ಣ ನಿಷೇಧಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಮುಷ್ಕರ ನಡೆಸಿದ ಜಿಲ್ಲಾ ಔಷಧ ವ್ಯಾಪಾರಿಗಳು ಅಪರ ಜಿಲ್ಲಾಧಿಕಾರಿ ಬಿವಿ ಅಭಿಷೇಕ್ ಅವರಿಗೆ ಮೂರು ಪ್ರಮುಖ ಬೇಡಿಕೆಯುಳ್ಳ ಮನವಿ ಪತ್ರ ಸಲ್ಲಿಸಿದರು.







