CrimeDistrictShivamogga

ಕೊನೆಗೂ ಪೊಲೀಸರ ಖೆಡ್ಡಾಕ್ಕೆ ಬಿದ್ದ ಹಗಲುಗಳ್ಳ|ನಿಟ್ಟಿಸಿರು ಬಿಟ್ಟ ತುಂಗಾನಗರ ವ್ಯಾಪ್ತಿಯ ಜನ|ಆರು ಲಕ್ಷರೂ ಚಿನ್ನಾಭರಣ, ಬೈಕ್ ವಶ

ಈ ಚಾಲಾಕಿ ಚೋರ, ಹಗಲು ದರೋಡೆ ಮಾಡಿದರೂ ಪೊಲೀಸರ ಕೈಗೆ ಸಿಗದೇ ಅಕ್ಷರಶಃ ಪೊಲೀಸರಿಗೆ ಸವಾಲಾಗಿಬಿಟ್ಟಿದ್ದ. ಕೊನೆಗೂ ಪೊಲೀಸರ ಅತಿಥಿಯಾಗಿರುವ ಕಳ್ಳ ಪ್ರದೀಪ್‌ನಿಂದ ಒಟ್ಟು ಆರು ಲಕ್ಷರೂಗಳ ಚಿನ್ನಾಭರಣ ಹಾಗೂ ಒಂದು ಬೈಕ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗ: ಹಗಲು ಹೊತ್ತಿನಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ಖತರನಾಕ್‌ ಕಳ್ಳನನ್ನು ಹೆಡೆಮುರಿ ಕಟ್ಟುವಲ್ಲಿ ತುಂಗಾನಗರ ಠಾಣೆಯ ಪೊಲೀಸ್‌ರು ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ ಜೂನ್‌ 12 ರಂದು ವಶಪಡಿಸಿಕೊಂಡಿರುವ ಕಳ್ಳ ಪ್ರದೀಪ್‌ ಬಿ. ಶ್ರೀರಾಂಪುರ ನಿವಾಸಿ ಎಂದು ಗುರುತಿಸಲಾಗಿದೆ.

ತುಂಗಾನರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಗೇನಹಳ್ಳಿ, ಶ್ರೀರಾಂಪುರ ಹಾಗೂ ವಾಜಪೇಯಿ ಬಡಾವಣೆಗಳ ಕಡೆಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಕಳ್ಳ ಪ್ರದೀಪ ಬಿ. ಹಗಲು ಹೊತ್ತಿನಲ್ಲಿಯೇ ತನ್ನ ಕೈಚಳಕ ತೋರಿಸುತ್ತಿದ್ದ.

ಈ ಚಾಲಾಕಿ ಚೋರ, ಹಗಲು ದರೋಡೆ ಮಾಡಿದರೂ ಪೊಲೀಸರ ಕೈಗೆ ಸಿಗದೇ ಅಕ್ಷರಶಃ ಪೊಲೀಸರಿಗೆ ಸವಾಲಾಗಿಬಿಟ್ಟಿದ್ದ. ಕೊನೆಗೂ ಪೊಲೀಸರ ಅತಿಥಿಯಾಗಿರುವ ಕಳ್ಳ ಪ್ರದೀಪ್‌ನಿಂದ ಒಟ್ಟು ಆರು ಲಕ್ಷರೂಗಳ ಚಿನ್ನಾಭರಣ ಹಾಗೂ ಒಂದು ಬೈಕ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಹಗಲುಗಳ್ಳ ಪ್ರದೀಪ್‌ನ ಬಂಧನಕ್ಕೆ ತುಂಗಾನಗರ ಇನ್ಸ್‌ಪೆಕ್ಟರ್ ಕೆ.ಟಿ ಗುರುರಾಜ್, ಪಿ.ಎಸ್.ಐ ಗಳಾದ ರಘುವೀರ.ಎಂ ಹಾಗೂ ಶ್ರೀಮತಿ ಮಂಜಮ್ಮ ರವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ ಕಿರಣ್ ಮೋರೆ, ಅರುಣಕುಮಾರ್ ಹಾಗೂ ಸಿಪಿಸಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್ ಎಂ ಜಿ, ರಂಗನಾಥ್, ತಮ್ಮಣ್ಣ ಜಂಬಗಿ ಅವರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಇದೇ ವೇಳೆ ತನಿಖಾ ತಂಡದ ಕಾರ್ಯಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಒಟ್ಟಾರೇ, ಖತರನಾಕ್‌ ಕಳ್ಳನ ಬಂಧನದಿಂದ ತುಂಗಾನಗರ ವ್ಯಾಪ್ತಿಯ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

Follow Us

Leave a Reply

Your email address will not be published. Required fields are marked *

Back to top button