CrimeDistrictShivamogga
ಶಿವಮೊಗ್ಗ:ಪರಿತ್ಯಕ್ತ ವಾಹನಗಳ ತೆರವು ಕಾರ್ಯಾಚರಣೆ|ಪಬ್ಲಿಕ್ ಐ ಮೂಲಕ ಮಾಹಿತಿ ನೀಡಲು ಎಸ್ಪಿ ಮನವಿ|ನೊಟೀಸ್ ಬಳಿಕ ತೆರವು ಮಾಡದಿದ್ದರೇ ಕ್ರಮ-ಬಿ.ನಿಖಿಲ್
ವಾಹನ ತೆರವು ಕಾರ್ಯಾಚರಣೆ ವೇಳೆ ನೋಟೀಸ್ ಅಂಟಿಸಿದರೂ ಸಹ ವಾಹನ ತೆರವು ಮಾಡದೇ ಇದ್ದಲ್ಲಿ ಕಾನೂನು ಬದ್ದ ಕ್ರಮ ಕೈಗೊಳ್ಳಲಾಗುವುದು ಎಸ್ಪಿ ಬಿ.ನಿಖಿಲ್ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಾಲೀಕರಿಲ್ಲದ ಪರಿತ್ಯಕ್ತ ವಾಹನಗಳ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.
ವಾರಸುದಾರರಿಲ್ಲದ ವಾಹನಗಳಿಗೆ ನೋಟೀಸ್ ಅಂಟಿಸಿ, ಜಪ್ತಿಮಾಡುವ ಕಾರ್ಯಾಚರಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಎಸ್ಪಿ ನಿಖಿಲ್ ಬಿ. ಮನವಿ ಮಾಡಿದ್ದಾರೆ.
ರಸ್ತೆ ಬದಿಗಳಲ್ಲಿ , ಮನೆಯ ಮುಂದೆ ಮಾಲೀಕರಿಲ್ಲದ ವಾಹನ ಕಂಡುಬಂದಲ್ಲಿ ನಾಗರೀಕರು ಪಬ್ಲಿಕ್ ಐ ಮೂಲಕ ಮಾಹಿತಿ ನೀಡಬಹುದಾಗಿದೆ.
ವಾಹನ ತೆರವು ಕಾರ್ಯಾಚರಣೆ ವೇಳೆ ನೋಟೀಸ್ ಅಂಟಿಸಿದರೂ ಸಹ ವಾಹನ ತೆರವು ಮಾಡದೇ ಇದ್ದಲ್ಲಿ ಕಾನೂನು ಬದ್ದ ಕ್ರಮ ಕೈಗೊಳ್ಳಲಾಗುವುದು ಎಸ್ಪಿ ಬಿ.ನಿಖಿಲ್ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಿ ಸಂಭಂಧಿಸಿದ ಮಾಲೀಕರು ತಮ್ಮ ವಾಹನಗಳನ್ನ ಹಿಂಪಡೆಯಬಹುದು ಎಂದು ತಿಳಿಸಿದ್ದಾರೆ
ನ್ಯೂಸ್ ಡೆಸ್ಕ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.