CrimeShivamogga

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಲೋಕಾಯುಕ್ತ ದಾಳಿ|ಬಡ ಪೋಷಕರಿಂದ ಹಣ ಪೀಕುತ್ತಿದ್ದ ಪ್ರಾಂಶುಪಾಲ ಅರೆಸ್ಟ್|ಹುಣಸೆಕಟ್ಟೆ ಗ್ರಾಮದಲ್ಲಿ ನಡೆದ ಘಟನೆ

ಶಾಲೆಗೆ 'ಡ್ರಮ್ ಸೆಟ್' ಅನ್ನು ದೇಣಿಗೆಯಾಗಿ ನೀಡಬೇಕು. ಇದಕ್ಕೆ ಇಪ್ಪತ್ತು ಸಾವಿರರೂ. ಹಣ ನೀಡಬೇಕೆಂದು ಎಂದು ಪ್ರಾಂಶುಪಾಲ ನಾಮದೇವ್ ಬೇಡಿಕೆ ಇಟ್ಟಿದ್ದಾರೆ. ಆದರೆ ಬಡವನಾದ ಮೇಘರಾಜ್‌ ಅವರಿಗೆ ಅಷ್ಟು ಹಣ ಹೊಂದಿಸಲು ಆಗಿಲ್ಲ.

ಶಿವಮೊಗ್ಗ/ಭದ್ರಾವತಿ: ಪ್ರತಿಭಾವಂತ ಮಕ್ಕಳಿಗೆ ಆಸರೆಯಾಗಬೇಕಿದ್ದ ಸರ್ಕಾರಿ ವಸತಿ ಶಾಲೆ ಪ್ರಾಂಶುಪಾಲನೊಬ್ಬ ಲಂಚಕ್ಕೆ ಕೈಯೊಡ್ಡಿದ ಪರಿಣಾಮ ಲೋಕಾಯುಕ್ತ ಪೊಲೀಸರು ಹೆಡೆಮುರಿ ಕಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.

ಪ್ರಾಂಶುಪಾಲ ನಾಮದೇವ್‌

ಸೋಮವಾರದಂದು ಲಂಚದ ಹಣ ಸ್ವೀಕರಿಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿರುವ ಆರೋಪಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ನಾಮದೇವ್‌ನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಐ ಸಾಂರ್ಧಬಿಕ ಚಿತ್ರ

ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿಯಾದ ಎಳನೀರು ವ್ಯಾಪಾರ ಮಾಡು ಮೇಘರಾಜ.ಸಿ ಎಂಬುವವರು ತಮ್ಮ ಮಗಳು ಕು.ದೀಕ್ಷಾಳನ್ನು ಭದ್ರಾವತಿ ತಾಲೂಕು ಹುಣಸೆಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ 7ನೇ ತರಗತಿಗೆ ಸೇರಿಸಲು ಬಯಸಿದ್ದರು.

ಈ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲ ನಾಮದೇವ್ ಅವರನ್ನು ಭೇಟಿಯಾಗಿದ್ದರು. ಆಗ ಶಾಲೆಗೆ ‘ಡ್ರಮ್ ಸೆಟ್’ ಅನ್ನು ದೇಣಿಗೆಯಾಗಿ ನೀಡಬೇಕು. ಇದಕ್ಕೆ ಇಪ್ಪತ್ತು ಸಾವಿರರೂ. ಹಣ ನೀಡಬೇಕೆಂದು ಎಂದು ಪ್ರಾಂಶುಪಾಲ ನಾಮದೇವ್ ಬೇಡಿಕೆ ಇಟ್ಟಿದ್ದಾರೆ. ಆದರೆ ಬಡವನಾದ ಮೇಘರಾಜ್‌ ಅವರಿಗೆ ಅಷ್ಟು ಹಣ ಹೊಂದಿಸಲು ಆಗಿಲ್ಲ.

ಲಂಚದ ಹಣ ನೀಡಲು ಆಗದ ಮೇಘರಾಜ್‌, ಜುಲೈ 18 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ಎಐ ಸಾಂರ್ಧಬಿಕ ಚಿತ್ರ

ದೂರಿನನ್ವಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯಿದೆ-2018) ಕಲಂ 7(a) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ಮೊದಲಿನ ಕರಾರಿನಂತೇ ಮುಂಗಡವಾಗಿ 10,000ರೂ. ಹಣವನ್ನು ನೀಡುವುದಾಗಿ ಮೇಘರಾಜ್‌, ಪ್ರಾಂಶುಪಾಲ ನಾಮದೇವ್‌ ಅವರಿಗೆ ಮಾತು ಕೊಟ್ಟಿದ್ದ.

ಎಐ ಚಿತ್ರ

ಇದೆಲ್ಲದರ ಪ್ರಕಾರವೇ ಟ್ರ್ಯಾಪ್‌ ಮಾಡಲು ಮುಂದಾದ ಲೋಕಾಯುಕ್ತ ಪೊಲೀಸರು, ನಿಗದಿಯಂತೆ ಸೋಮವಾರದಂದು (ಜುಲೈ 20) ಮಧ್ಯಾಹ್ನ 12.20 ಗಂಟೆಗೆ ಹುಣಸೆಕಟ್ಟೆಯ ವಸತಿ ಶಾಲೆಯ ತಮ್ಮ ಕೊಠಡಿಯಲ್ಲಿ ಪ್ರಾಂಶುಪಾಲ ನಾಮದೇವ್ ದೂರುದಾರರಿಂದ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದಾರೆ.

ಲಂಚದ ಹಣವನ್ನು ಜಪ್ತಿ ಮಾಡಿಕೊಂಡಿರುವ ಲೋಕಾಯುಕ್ತ ಪೊಲೀಸರು, ಆರೋಪಿ ಪ್ರಾಂಶುಪಾಲನನ್ನು ಮುಂದಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರುದ್ರೇಶ್.ಕೆ.ಪಿ. ಅವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button