KarnatakaShivamoggaಶ್ರೀ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯ..

ಚಿಕ್ಕಮಗಳೂರಿನಲ್ಲಿ ಶ್ರೀ ಈಶ್ವರ ದೇವಾಲಯದ ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ|ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯ..ಜನಜಾಗೃತಿ ಧರ್ಮಸಮಾರಂಭ|ಸಂಸದ ಬಿ.ವೈ.ರಾಘವೇಂದ್ರ ದಂಪತಿ ಭಾಗಿ

ನಮ್ಮ ಸನಾತನ ಧರ್ಮದ ಸಂಸ್ಕೃತಿಯನ್ನು, ಭಕ್ತಿ ಪರಂಪರೆಯನ್ನು ಮತ್ತು ಶರಣರ ತತ್ವ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇಂತಹ ಧಾರ್ಮಿಕ ಸಭೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು: ಇಲ್ಲಿಯ ಎ.ಐ.ಟಿ. ಕಾಲೇಜು ಹಿಂಭಾಗದಲ್ಲಿರುವ ಶ್ರೀಮತಿ ಮೈತ್ರಾದೇವಿ, ಶ್ರೀ ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯ ಭವನದ ಆವರಣದಲ್ಲಿ ಶ್ರೀ ಈಶ್ವರ ದೇವಾಲಯದ ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಜನಜಾಗೃತಿ ಧರ್ಮಸಮಾರಂಭವನ್ನು ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು.

ಶ್ರೀ ರಂಭಾಪುರಿ ಜಗದ್ಗುರುಗಳಾದ ಡಾ.ವೀರಸೋಮೇಶ್ವರ ಶ್ರೀಗಳ ದಿವ್ಯ ಜ್ಞಾನ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ವೀರಶೈವ-ಲಿಂಗಾಯತ ಸಮುದಾಯದ ಪೂಜ್ಯ ಸ್ವಾಮೀಜಿಗಳವರ ಮಂಗಳಾಶೀರ್ವಾದಗಳೊಂದಿಗೆ ಜರುಗಿತು.

ವಿಶೇಷ ಆಹ್ವಾನಿತರಾಗಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಮ್ಮ ಧರ್ಮಪತ್ನಿಯೊಂದಿಗೆ ಆಗಮಿಸಿ, ಶ್ರೀ ರಂಭಾಪುರಿ ಜಗದ್ಗುರುಗಳವರು ಸೇರಿದಂತೇ ಆಗಮಿಸಿದ್ದ ಶ್ರೀಗಳ ಆಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಚೈತನ್ಯವನ್ನು ತುಂಬುವಂತೆ ಮಾಡಿತು ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಮ್ಮ ಸನಾತನ ಧರ್ಮದ ಸಂಸ್ಕೃತಿಯನ್ನು, ಭಕ್ತಿ ಪರಂಪರೆಯನ್ನು ಮತ್ತು ಶರಣರ ತತ್ವ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇಂತಹ ಧಾರ್ಮಿಕ ಸಭೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ನವ ನಿರ್ಮಿತ ಶ್ರೀ ಈಶ್ವರ ದೇವಾಲಯವು ಭಕ್ತಾದಿಗಳ ಪಾಲಿಗೆ ನಿರಂತರ ನೆಮ್ಮದಿ ಹಾಗೂ ಭಕ್ತಿಯ ಆಶಾಕಿರಣವಾಗಲಿ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

Follow Us

Leave a Reply

Your email address will not be published. Required fields are marked *

Back to top button