KarnatakaShivamogga

ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ 380ಕೋ.ರೂ. ಸ್ವಾಹಾ..?ವರ್ಕ್ ಆರ್ಡರ್‌ ಇಲ್ಲದೇ ಹಣ ಪಾವತಿ|ಸಿಬಿಐ ತನಿಖೆಗೆ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ

ವರ್ಕ್ ಆರ್ಡರ್ ಇಲ್ಲದೇ 2024 ರಲ್ಲೇ ಮೆಘಾ ಎಂಜಿನಿಯರಿಂಗ್ ಇನ್ಫಾ ಸಂಸ್ಥೆಗೆ 380 ಕೋಟಿ ಹಣ ಪಾವತಿ ಮಾಡುವ ಮೂಲಕ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಬಹುಶಃ ಕರ್ನಾಟಕ ಇತಿಹಾಸದಲ್ಲಿಯೇ ಇಂತಹದೊಂದು ಗೋಲಮಾಲ್, ಮಹಾ ಹಗರಣ ಈ ಹಿಂದೆ ನಡೆದಿರಲಿಲ್ಲವೆನಿಸುತ್ತದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ತರದಂತೇ ಸ್ವತಃ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರೇ ಕೇಂದ್ರ ಪರಿಸರ ಇಲಾಖೆಯು ಈ ಯೋಜನೆಗೆ ಅನುಮತಿ ನೀಡಿಲ್ಲ. ‌

ಇದೆಲ್ಲದರ ಮಧ್ಯೆ ರಾಜ್ಯ ಸರ್ಕಾರವು ಕಾನೂನುಬಾಹಿರವಾಗಿ ವರ್ಕ್ ಆರ್ಡರ್ ಇಲ್ಲದೇ 2024 ರಲ್ಲೇ ಮೆಘಾ ಎಂಜಿನಿಯರಿಂಗ್ ಇನ್ಫಾ ಸಂಸ್ಥೆಗೆ 380 ಕೋಟಿ ಹಣ ಪಾವತಿ ಮಾಡುವ ಮೂಲಕ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಸ್ಪೋಟಕ ವಿಚಾರದ ಬಗ್ಗೆ ಮಾಹಿತಿ ನೀಡಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕಾಮಗಾರಿಯೇ ಆರಂಭವಾಗಿಲ್ಲ. ಆದರೆ ಸರ್ಕಾರಕ್ಕೆ ಮಾತ್ರ ಹಣ ಬಿಡುಗಡೆ ಮಾಡುವ ತರಾತುರಿ! ಹೌದು. 2025 ರ ಡಿಸೆಂಬರ್11 ರಂದು ಒಂದೇ ದಿನದಲ್ಲಿ ಮೇಘಾ ಇಂಜಿನಿಯರಿಂಗ್ ಇನ್ಫಾ ಸಂಸ್ಥೆಗೆ ಬರೋಬ್ಬರಿ 380 ಕೋಟಿರೂ. ಹಣವನ್ನು ಆಗಿನ ಇಂಧನ ಸಚಿವ ಕೆ.ಜೆ.ಜಾರ್ಜ್ ಅವಧಿಯಲ್ಲಿ ಪಾವತಿ ಮಾಡಲಾಗಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದ್ದಾರೆ.

ಇಷ್ಟೆಲ್ಲ ಭ್ರಷ್ಟಾಚಾರ ನಡೆದಿರುವಾಗ ಆಗಿನ ಇಂಧನ ಸಚಿವ ಕೆ.ಜೆ.ಜಾರ್ಜ್‌ ಮೌನ ತಾಳದೇ ಸ್ಪಷ್ಟೀಕರಣ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

15 ದಿನದೊಳಗೆ ಸ್ಪಷ್ಟತೆ ನೀಡದೇ ಇದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆ ಮಾಡುವದಾಗಿ ಅವರು ಎಚ್ಚರಿಕೆ ನೀಡಿದರು. ಇದೇ ವೇಳೆ 380 ಕೋಟಿರೂಗಳನ್ನು ಅಕ್ರಮವಾಗಿ ಸಂದಾಯ ಮಾಡಿರುವ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ. ಇದಕ್ಕೆ ಕೆಪಿಸಿಎಲ್ ಅಧಿಕಾರಿಗಳೇ ಹೊಣೆ ಹೊರಬೇಕು ಎಂದ ಈಶ್ವರಪ್ಪ, ಭವಿಷ್ಯದಲ್ಲಿ ಇನ್ನು ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಯುವ ಸಾಧ್ಯತೆ ದಟ್ಟವಾಗಿರುವುದರಿಂದ ರಾಜ್ಯ ಸರ್ಕಾರ ಯೋಜನೆ ಈ ಕೂಡಲೇ ಯೋಜನೆಯನ್ನು ಹಿಂಪಡೆಯಬೇಕು.

ಇಲ್ಲದಿದ್ದಲ್ಲಿ ತೀವ್ರ ಹೋರಾಟದ ಹಾದಿ ಹಿಡಿಯುವುದಾಗಿ ಎಚ್ಚರಿಕೆ ನೀಡಿದರು.

Follow Us

Leave a Reply

Your email address will not be published. Required fields are marked *

Back to top button