ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಎಐ ಹ್ಯಾಕಥಾನ್ ಸ್ಪರ್ಧೆ|ಜೆಎನ್ಎನ್ಸಿ ಕಾಲೇಜಿನಲ್ಲಿ ಯುಗ್ಮಾ ಟೆಕ್ ಫೆಸ್ಟ್ 2.0 ಕಾರ್ಯಕ್ರಮ |24 ತಾಸು ನಿರಂತರ ಸ್ಪರ್ಧೆ-ಡಾ ವೈ.ವಿಜಯಕುಮಾರ್
ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಒಟ್ಟು 54 ಕಾಲೇಜುಗಳ 124 ತಂಡಗಳು ಭಾಗವಹಿಸಲಿವೆ. ಹ್ಯಾಕಥಾನ್ ಸ್ಪರ್ಧೆಯಲ್ಲಿ ಒಟ್ಟು 500 ಉತ್ಸಾಹಿ ವಿದ್ಯಾರ್ಥಿಗಳು ಭಾಗವಹಿಸಲಿದ್ದು, 24 ಗಂಟೆಗಳ ಕಾಲ ನಿರಂತರವಾಗಿ ಸ್ಪರ್ಧೆ ನಡೆಯಲಿದೆ ಎಂದು ಡಾ ವೈ.ವಿಜಯಕುಮಾರ್ ತಿಳಿಸಿದರು.

ರಾಷ್ಟ್ರ ಮಟ್ಟದ ಯುಗ್ಮಾ ಟೆಕ್ ಫೆಸ್ಟ್ 2.0 ಕಾರ್ಯಕ್ರಮ ಅಡಿಯಲ್ಲಿ ಮೇಧಾದೃಷ್ಟಿ ರಾಷ್ಟ್ರಿಯಮಟ್ಟದ ಎಐ ಹ್ಯಾಕಥಾನ್ ಸ್ಪರ್ಧೆಯನ್ನು ಶಿವಮೊಗ್ಗದ ಜೆಎನ್ಎನ್ಸಿ ಎಂಜನಿಯರಿಂಗ್ ಕಾಲೇಜು ವತಿಯಿಂದ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ ವೈ.ವಿಜಯಕುಮಾರ್ ತಿಳಿಸಿದರು.

ಬುಧವಾರದಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಐ ಆಸಕ್ತ ಉತ್ಸಾಹಿಗಳಿಗೊಂದು ವೇದಿಕೆಯಾಗಿ ಜುಲೈ 24,25, ರಂದು ಯುಗ್ಮಾ ಟೆಕ್ ಫೆಸ್ಟ್ 2.0 ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಯುಗ್ಮಾ ಟೆಕ್ ಫೆಸ್ಟ್ 2.0 ಹೈಲೈಟ್ಸ್|
ಎಐಸಿಟಿಇ ಮಾನ್ಯತೆ ಪಡೆದ ದೇಶದ ಯಾವುದೇ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಯುಗ್ಮಾ ಟೆಕ್ ಫೆಸ್ಟ್ನಲ್ಲಿ ಭಾಗವಹಿಸಬಹುದಾಗಿದೆ ಎಂದರು.
ದೇಶದ ನಾನಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆಗೆ ಆಹ್ವಾನಿಸಲಾಗಿದ್ದು ಒಂದು ತಂಡದಲ್ಲಿ ಗರಿಷ್ಠ 4 ಮಂದಿ ಸದಸ್ಯರಿಗೆ ಅವಕಾಶವಿರುತ್ತದೆ ಎಂದು ಡಾ ವೈ.ವಿಜಯಕುಮಾರ್ ಹೇಳಿದರು.
ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಒಟ್ಟು 54 ಕಾಲೇಜುಗಳ 124 ತಂಡಗಳು ಭಾಗವಹಿಸಲಿವೆ. ಹ್ಯಾಕಥಾನ್ ಸ್ಪರ್ಧೆಯಲ್ಲಿ ಒಟ್ಟು 500 ಉತ್ಸಾಹಿ ವಿದ್ಯಾರ್ಥಿಗಳು ಭಾಗವಹಿಸಲಿದ್ದು, 24 ಗಂಟೆಗಳ ಕಾಲ ನಿರಂತರವಾಗಿ ಸ್ಪರ್ಧೆ ನಡೆಯಲಿದೆ ಎಂದು ಡಾ ವೈ.ವಿಜಯಕುಮಾರ್ ತಿಳಿಸಿದರು.
ಜುಲೈ 24ರ ಬೆಳಿಗ್ಗೆ ಜೆಎನ್ಎನ್ಸಿ ಕಾಲೇಜಿನಲ್ಲಿ 11 ಗಂಟೆಗೆ ನಡೆಯಲಿರುವ ಯುಗ್ಮಾ ಟೆಕ್ ಫೆಸ್ಟ್ 2.0 ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಸಿ ಹಾಗೂ ಕೈಗಾರಿಕೋದ್ಯಮಿ ರುದ್ರೇಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸ್ಪರ್ಧೆ 2 ಹಂತಗಳಲ್ಲಿ ನಡೆಯಲಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ರೋಗನಿರ್ಣಯಕ್ಕೆ ಸಹಕಾರಿಯಾಗುವ ಎಕ್ಸರೇ, ಸಿಟಿಸ್ಕ್ಯಾನ್ ಎಂಆರ್ಐ ಸಂಕೀರ್ಣ ದತ್ತಾಂಶವನ್ನು ಕ್ಷಿಪ್ರವಾಗಿ ವಿಶ್ಲೇಷಿಸಿ ಫಲಿತಾಂಶ ಪ್ರದರ್ಶಿಸುವ ಎಐ ಮಾದರಿಯೊಂದನ್ನ ಅಭಿವೃದ್ಧಿಪಡಿಸಬೇಕಾಗುತ್ತದೆ ಡಾ ವೈ.ವಿಜಯಕುಮಾರ್ ಹೇಳಿದರು.
ಕೈಗಾರಿಕಾ ಯಂತ್ರದಲ್ಲಿನ ದೋಷ ಪತ್ತೆಗೆ ಸಹಕರಿಸುವ ಎಐ ನಿರ್ಮಿತ ತಂತ್ರಜ್ಞಾನದ ಮಾದರಿಯನ್ನ ರೂಪಿಸಬೇಕಿದೆ ಎಂದು ಡಾ ವೈ ವಿಜಯ್ ಕುಮಾರ್ ಹೇಳಿದರು.
ಆ ಮೂಲಕ ನಮ್ಮ ಸುತ್ತಲಿನ ಪರಿಸರದಲ್ಲಿರುವ ವಸ್ತುವನ್ನ ಗುರುತಿಸಿ ದೋಷ ಪತ್ತೆಹಚ್ಚುವ ತಂತ್ರಜ್ಞಾನ ಕೃತಕ ಬುದ್ದಿಮತ್ತೆಗೆ ನೀಡುವುದು ಸ್ಪರ್ಧೆಯ ಭಾಗವಾಗಿದೆ ಎಂದು ಹೇಳಿದರು.
ಯುಗ್ಮಾ ಹ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಎರಡು ಲಕ್ಷರೂ ನಗದು ಬಹುಮಾನ ನೀಡಲಾಗುವುದು ಎಂದು ಜೆಎನ್ಎನ್ಸಿ ಕಾಲೇಜಿನ ಪ್ರಾಂಶುಪಾಲ ಡಾ ವೈ.ವಿಜಯ್ ಕುಮಾರ್ ತಿಳಿಸಿದರು.
ಹ್ಯಾಕಥಾನ್ ಸ್ಪರ್ಧೆಗೆ 2 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಮೊದಲು ಬಂದ ತಂಡಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಸ್ಪರ್ಧೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಬೇಕಾದ ವಸತಿ ಸೌಲಭ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದು ಡಾ ವೈ ವಿಜಯಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ, ಪ್ರೊ. ಆರ್.ಜಿ.ರಾಘವೇಂದ್ರ, ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರೊ. ಪವನ್, ಸಂಜೀವ್ ಕುಂಟೆ, ಮೊನೀಶಾ ಕೆ.ಎಂ, ಅರುಣ್ ಕುಮಾರ್, ವಿಶೃತ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







