ದರೋಡೆಕೋರರಿಂದ ವಶಪಡಿಸಿಕೊಂಡಿದ್ದ 5.73ಕೋಟಿ ಮೌಲ್ಯದ ಸ್ವತ್ತುಗಳು|ವಾರಸುದಾರರಿಗೆ ಹಸ್ತಾಂತರ|ಎಸ್ಪಿ ನಿಖಿಲ್ ಕಾರ್ಯಕ್ಕೆ ಐಜಿಪಿ ರವಿಕಾಂತೇಗೌಡ ಶ್ಲಾಘನೆ
ಎಸ್ಪಿ ಬಿ.ನಿಖೀಲ್ ನೇತೃತ್ವದ ತಂಡವು ವಿವಿಧ ಹಂತದ ಕಾರ್ಯಾಚರಣೆ ನಡೆಸಿ, ದರೋಡೆಕೋರರಿಂದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಕೊಂಡಿದ್ದು, ಶ್ಲಾಘನಾರ್ಹ ಎಂದು ಐಜಿಪಿ ಬಿ.ಆರ್. ರವಿಕಾಂತೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಮೊಗ್ಗ: 142 ಕ್ರಿಮಿನಲ್ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 5 ಕೋಟಿ 70 ಲಕ್ಷದ ವಿವಿಧ ಬಗೆಯ ಸ್ವತ್ತನ್ನು ಸೋಮವಾರದಂದು ಅದರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಕೊಲೆ, ಸುಲಿಗೆ ಡಕಾಯಿತಿ ನಡೆಸಿ ಸಾರ್ವಜನಿಕರನ್ನು ಸಂಕಷ್ಟಕ್ಕೆ ನೂಕಿದ್ದ ಖದೀಮರಿಂದ ವಶಪಡಿಸಿಕೊಂಡಿದ್ದ ಬೆಲೆಬಾಳುವ ಸ್ವತ್ತುಗಳು ಇನ್ನು ಸಿಗುವದಿಲ್ಲವೆಂದು ಅಂದುಕೊಂಡಿದ್ದ ಸಾರ್ವಜನಿಕರ ಮುಖದಲ್ಲಿ ಇಂದು ಮಂದಹಾಸ ಮೂಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ನಿಖಿಲ್ ನೇತೃತ್ವದ ತಂಡಕ್ಕೆ
ನಗದು ಬಹುಮಾನ ಘೋಷಣೆ|
ಶಿವಮೊಗ್ಗದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಪರ್ಟಿ ಪರೇಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು ಕಳೆದುಕೊಂಡಿದ್ದ ಸ್ವತ್ತನ್ನು ಅದರ ಮೂಲ ಮಾಲೀಕರಿಗೆ ಹಸ್ತಾಂತರಿಸಿದರು.

ಬಳೀಕ ಮಾತನಾಡಿದ ಅವರು, ಎಸ್ಪಿ ಬಿ.ನಿಖಿಲ್ ನೇತೃತ್ವದ ತಂಡವು ವಿವಿಧ ಹಂತದ ಕಾರ್ಯಾಚರಣೆ ನಡೆಸಿ, ದರೋಡೆಕೋರರಿಂದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಕೊಂಡಿದ್ದು, ಶ್ಲಾಘನಾರ್ಹ ಎಂದು ಐಜಿಪಿ ಬಿ.ಆರ್. ರವಿಕಾಂತೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.




ಇದೇ ವೇಳೆ ತನಿಖಾ ತಂಡಕ್ಕೆ 50 ಸಾವಿರ ನಗದು ಬಹುಮಾನ ಘೋಷಿಸಿದರು. ಹಿಂದಿನ ವರ್ಷದಲ್ಲಿ 32 ಪ್ರಕರಣ ಹಾಗೂ 2026ನೇ ಸಾಲಿನಲ್ಲಿ 142 , ಒಟ್ಟು 174 ಪ್ರಕರಣಗಳನ್ನು ಭೇದಿಸಿದ್ದಾರೆ ಎಂದು ಹೇಳಿದರು.
2024ರಲ್ಲಿ ನಡೆದ 1 ಕೊಲೆ , 3 ದರೋಡೆ ,17 ಸುಲಿಗೆ , 7 ಸರಗಳ್ಳತನ, 34 ಕಳವು, 14 ಮನೆಗಳ್ಳನತನ, 31 ಕಳ್ಳತನ, 14 ಜಾನುವಾರು ಕಳ್ಳತನ ಪ್ರಕರಣ , ಅಡಿಕೆ ಕಳವು ,ಹಾಗೂ 21 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ ಖದೀಮರನ್ನು ಜೈಲಿಗಟ್ಟಲಾಗಿದೆ ಎಂದು ಐಜಿಪಿ ಬಿ.ಆರ್. ರವಿಕಾಂತೇಗೌಡ ಮಾಹಿತಿ ನೀಡಿದರು.
ಎಸ್ಪಿ ಬಿ.ನಿಖಿಲ್ ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಜಿ ಕಾರಿಯಪ್ಪ, ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







