ಆ.14ರ ರಾತ್ರಿ ” ಸಂಕಲ್ಪ ಶಿವಮೊಗ್ಗ” ಕಾರ್ಯಕ್ರಮ|250 ಕಲಾವಿದರಿಂದ ದೇಶಭಕ್ತಿ ಗೀತೆ ಗಾಯನ, ನೃತ್ಯ|10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ- ಸಿಎಸ್ ಷಡಾಕ್ಷರಿ
ಸ್ವಾತಂತ್ರೋತ್ಸವವನ್ನು ಇಡೀ ನಗರವೇ ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ದೇಶಕ್ಕಾಗಿ ಜೀವವನ್ನು ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ ಸೇನಾನಿಗಳಿಗೆ ಹಾಗೂ ಭಾರತೀಯ ಯೋಧರಿಗೆ ಈ ಕಾರ್ಯಕ್ರಮದ ಮೂಲಕ ನಮನ ಸಲ್ಲಿಸಲಾಗುತ್ತದೆ ಎಂದು ಸಿಎಸ್ ಷಡಾಕ್ಷರಿ ಹೇಳಿದರು.

ಶಿವಮೊಗ್ಗ: ಈ ಬಾರಿಯ ಸ್ವಾತಂತ್ರ್ಯ ದಿನವನ್ನು ಹಬ್ಬದಂತೆ ಆಚರಿಸಬೇಕೆಂಬ ಉದ್ದೇಶದಿಂದ “ಸಂಕಲ್ಪ ಶಿವಮೊಗ್ಗ” ಸ್ವದೇಶಿ ಮಂತ್ರ ಹೆಸರಿನಲ್ಲಿ ವಿಭಿನ್ನ ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಕಾರ್ಯಕ್ರಮವನ್ನು ಆಗಸ್ಟ್ 14ರ ರಾತ್ರಿ ಗೋಪಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಎಲ್ಲ ಸೇವಾಸಂಸ್ಥೆಗಳ ಒಕ್ಕೂಟಗಳು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿವೆ ಎಂದು “ಸಂಕಲ್ಪ ಶಿವಮೊಗ್ಗ” ಕಾರ್ಯಕ್ರಮದ ನೇತೃತ್ವ ವಹಿಸಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ತಿಳಿಸಿದರು.

ಬುಧವಾರ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಮಡಿದವರ ಬಲಿದಾನ, ದೇಶಪ್ರೇಮ ಯುವಪೀಳಿಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ದೇಶಭಕ್ತಿ ಗೀತೆ ಗಾಯನ, ನೃತ್ಯ|
250 ಕಲಾವಿದರೂ ಭಾಗಿ|
ಆಗಸ್ಟ್ 14 ರ ರಾತ್ರಿ ಗೋಪಿ ವೃತ್ತದಲ್ಲಿ ರಾತ್ರಿ 9 ರಿಂದ 12 ಗಂಟೆಯವರೆಗೆ 250 ಕ್ಕೂ ಹೆಚ್ಚು ಹೆಸರಾಂತ ಕಲಾವಿದರು ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆಂದು ಸಿಎಸ್ ಷಡಾಕ್ಷರಿ ಹೇಳಿದರು.

ದೇಶದಲ್ಲೇ ಪ್ರಥಮ ಬಾರಿಗೆ ನಾಗರೀಕರೆಲ್ಲ ಸೇರಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನಾಗಿಸುವ ಆಶಯವನ್ನು ಸಿಎಸ್ ಷಡಾಕ್ಷರಿ ಅವರು ವ್ಯಕ್ತಪಡಿಸಿದರು.
ಭಾಷಣ ರಹಿತ ಕಾರ್ಯಕ್ರಮವಾಗಿದ್ದು ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು, ಧರ್ಮಗುರುಗಳು, ಉದ್ಯಮಿಗಳು ಎಲ್ಲ ಸಂಘ ಸಂಸ್ಥೆ ಮುಖಂಡರೂ ಉಪಸ್ಥಿತರಿರುವರು ಎಂದು ಸಿಎಸ್ ಷಡಾಕ್ಷರಿ ತಿಳಿಸಿದರು.
ಯೋಧರಿಗೆ ಗೌರವ ಸನ್ಮಾನ|
ಭಾರತೀಯ ಸೇನೆಯಲ್ಲಿ ಸೇವೆಗೈದ 10 ಮಂದಿ ಯೋಧರಿಗೆ ಇದೇ ವೇಳೆ ಸನ್ಮಾನಿಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಗಿಲ್ ಯುದ್ಧ ಪ್ರದೇಶದಲ್ಲಿ ಅತೀ ಹೆಚ್ಚು ಬಾರಿ ಸೇವೆ ಸಲ್ಲಿಸಿದ ಶಿವಮೊಗ್ಗೆಯ ಯೋಧ ಸುಭಾಷ್ ಚಂದ್ರ ತೇಜಸ್ವಿ ನೆರವೇರಿಸಲಿದ್ದಾರೆ.
ಸ್ವಾತಂತ್ರೋತ್ಸವವನ್ನು ಇಡೀ ನಗರವೇ ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ದೇಶಕ್ಕಾಗಿ ಜೀವವನ್ನು ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ ಸೇನಾನಿಗಳಿಗೆ ಹಾಗೂ ಭಾರತೀಯ ಯೋಧರಿಗೆ ಈ ಕಾರ್ಯಕ್ರಮದ ಮೂಲಕ ನಮನ ಸಲ್ಲಿಸಲಾಗುತ್ತದೆ ಎಂದು ಸಿಎಸ್ ಷಡಾಕ್ಷರಿ ಹೇಳಿದರು.
ನಾಗರೀಕರಿಗೆ ಸಿಹಿ ವಿತರಣೆ
ಪಟಾಕಿ ಸಿಡಿಸಿ ಸಂಭ್ರಮ|
ಇನ್ನು ಆಗಸ್ಟ್ 14 ರಾತ್ರಿ 12ಗಂಟೆಗೆ ಪಟಾಕಿ ಸಿಡಿಸಿ ಸಂಭ್ರಮವನ್ನು ಆಚರಿಸುವದರೊಂದಿಗೆ 6 ಸಾವಿರ ನಾಗರೀಕರಿಗೆ ಸಿಹಿಯನ್ನು ವಿತರಿಸಲಿರುವದಾಗಿ ಸಿಎಸ್ ಷಡಾಕ್ಷರಿ ತಿಳಿಸಿದರು.
ಗೋಪಿ ಸರ್ಕಲ್ನಲ್ಲಿ ಬೃಹತ್ ವೇದಿಕೆ ಹಾಗೂ ವ್ಯವಸ್ಥೆ ಮಾಡಲಾಗಿದ್ದು 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಬಿಳಿ ಉಡುಪು ಧರಿಸಿ ಬರಲು ಸೂಚನೆ|
ಆಗಸ್ಟ್ 14 ರಂದು ಕಾರ್ಯಕ್ರಮಕ್ಕೆ ಭಾಗವಹಿಸುವವರು ಬಿಳಿ ಬಣ್ಣದ ಉಡುಪು ಧರಿಸಿ ಬರುವಂತೆ ತಿಳಿಸಲಾಗಿದೆ. ಛತ್ರಿ ಕ್ಯಾಪ್ ರೇನ್ಕೋಟ್ನೊಂದಿಗೆ ಭಾಗವಹಿಸಲು ಸೂಚನೆ ನೀಡಲಾಗಿದೆ.
ಮಳೆ ಬಂದರೂ ಕಾರ್ಯಕ್ರಮ ನಿಲ್ಲೋದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಸಂಘಟಕ ಸಮನ್ವಯ ಕಾಶಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತವಾಗದೇ ಒಂದು ಹಬ್ಬದಂತೆ ಆಚರಿಸಲು ನಗರದ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ನಾಗರೀಕರು ಕೈಜೋಡಿಸಿ “ಸಂಕಲ್ಪ ಶಿವಮೊಗ್ಗ”ದ ಅಡಿಯಲ್ಲಿ ಕಾರ್ಯಕ್ರಮಕ್ಕೆ ಸಜ್ಜಾಗಿರುವುದು ವಿಶೇಷ ಎಂದರು.
ಕ್ರಾಂತಿದೀಪ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಎನ್. ಮಂಜುನಾಥ, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ನ್ಯಾಯವಾದಿ ಕೆ ಪಿ ಶ್ರೀಪಾಲ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಗೋಪಿನಾಥ, ವಸಂತ ಹೋಬಳಿದಾರ್, ಬಳ್ಳೆಕೆರೆ ಸಂತೋಷ್, ಗಾಯಕಿ ಸುರೇಖಾ ಹೆಗಡೆ, ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







