ಮಾಹಿತಿ ಹಕ್ಕು ಕಾರ್ಯಾಗಾರ|ಆಡಳಿತದಲ್ಲಿ ಪಾರದರ್ಶಕತೆ ತರುವುದೇ ಆರ್ಟಿಐ ಕಾಯ್ದೆಯ ಉದ್ದೇಶ-ಡಾ.ಮಹೇಶ ವಾಳ್ವೇಕರ್ ಅಭಿಮತ
ಆರ್ಟಿಐ ಕಾಯ್ದೆಯು ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸುವ ಒಂದು ಪ್ರಮುಖ ಸಾಧನ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಮಹೇಶ ವಾಳ್ವೇಕರ್ ತಿಳಿಸಿದರು.

ಯಾದಗಿರಿ: ಮಾಹಿತಿ ಹಕ್ಕು ಕಾಯ್ದೆ 2005 ರ ಮೂಲಕ ಸರಕಾರದ ವಿವಿಧ ಯೋಜನೆಗಳ, ಕಾಮಗಾರಿಗಳ ಹಾಗೂ ಸಾರ್ವಜನಿಕ ಹಿತಾಸಕ್ತಿವುಳ್ಳ ಸರಕಾರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಮೂಲಭೂತ ಹಕ್ಕಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷ ಡಾ.ಮಹೇಶ ವಾಳ್ವೇಕರ್ ಹೇಳಿದ್ದಾರೆ.

ಇಲ್ಲಿಯ ಜಿಲ್ಲಾಡಳಿತದ ಆಡಿಟೋರಿಯಂ ಭವನದಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಪಿ.ಡಿ.ಒ.ಗಳಿಗೆ ಶನಿವಾರದಂದು ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ 2005ರ ಕುರಿತ ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಪಾರದರ್ಶಕತೆ ತರುವುದು|
ಆರ್ಟಿಐ ಕಾಯ್ದೆಯ ಉದ್ದೇಶ|

ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಆರ್ಟಿಐ ಕಾಯ್ದೆಯ ಉದ್ದೇಶವಾಗಿದೆ ಕೇಂದ್ರ ಸರ್ಕಾರ 2005ರ ಅಕ್ಟೋಬರ್ 12 ರಂದು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಮಹೇಶ ವಾಳ್ವೇಕರ ಹೇಳಿದರು.
ಸರ್ಕಾರದಿಂದ ಮಾಹಿತಿ ಹಾಗೂ ಕಾಮಗಾರಿ ಸಂಬಂಧಿತ ಪ್ರಶ್ನೆಗಳಿಗೆ ಹಾಗೂ ಸರ್ಕಾರ ಹೊರಡಿಸಿದ ಆದೇಶಗಳ ನಕಲನ್ನು ಆರ್ಟಿಐ ಅರ್ಜಿ ಸಲ್ಲಿಸುವ ಮೂಲಕ ಕೇಳಿ ಪಡೆಯಬಹುದು ಎಂದರು.
ಕಡತ ಪರಿಶೀಲನೆಗೆ ಅವಕಾಶ|
ಸರ್ಕಾರಿ ದಾಖಲೆಗಳು ಹಾಗೂ ಕಡತಗಳ ಪರಿಶೀಲನೆಗೂ ಸಾರ್ವಜನಿಕರಿಗೆ ಅವಕಾಶವಿದೆ. ಸರ್ಕಾರ ಯಾವುದೇ ಯೋಜನೆ ಕೈಗೊಂಡರೂ, ಅದರ ಪ್ರತಿಯೊಂದು ಮಾಹಿತಿಯು ಆರ್ಟಿಐ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರಿಗೆ ಅಧಿಕಾರ ನೀಡುವ, ಪಾರದರ್ಶಕ ಆಡಳಿತವನ್ನು ಉತ್ತೇಜಿಸುವ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸುವ ಒಂದು ಪ್ರಮುಖ ಸಾಧನ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಮಹೇಶ ವಾಳ್ವೇಕರ್ ತಿಳಿಸಿದರು.
ಇಂತಹ ಅಪರೂಪದ ಕಾಯ್ದೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಸಮರ್ಪಕ ಉತ್ತರ ನೀಡಲು
ಆರ್ಟಿಐ ಕಾಯ್ದೆ ತಿಳಿದುಕೊಳ್ಳಿ
ಡಾ.ವಾಳ್ವೇಕರ್ ಸಲಹೆ|
ಮಾಹಿತಿ ಹಕ್ಕು ಕಾಯ್ದೆ 2005 ಅನ್ನು ಅಧಿಕಾರಿಗಳು ಸ್ಪಷ್ಟವಾಗಿ ತಿಳಿದುಕೊಂಡಲ್ಲಿ ಮಾತ್ರ, ಸಾರ್ವಜನಿಕರಿಂದ ಮಾಹಿತಿಗಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಮರ್ಪಕವಾಗಿ ಉತ್ತರ ನೀಡಬಹುದು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಮಹೇಶ ವಾಳ್ವೇಕರ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಾಹಿತಿ ಆಯೋಗ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶ, ತೀರ್ಪುಗಳನ್ನು ಅಧಿಕಾರಿಗಳು, ನೌಕರರು ತಿಳಿದುಕೊಂಡಲ್ಲಿ ಮಾಹಿತಿ, ದಾಖಲೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಾಹಿತಿ ನೀಡಲು ವಿಳಂಬ ಸಲ್ಲ|
ಆರ್ಟಿಐ ಕಾಯ್ದೆಯಡಿ ಮಾಹಿತಿ ಕೋರಿದ ಅರ್ಜಿದಾರರಿಗೆ ವಿಳಂಬ ಮಾಡದೆ ನಿಗದಿತ ಸಮಯದೊಳಗೆ ಮಾಹಿತಿ ನೀಡಬೇಕು ಮತ್ತು ಸೂಕ್ತ ಹಿಂಬರಹ ನೀಡಬೇಕು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಮಹೇಶ ವಾಳ್ವೇಕರ್ ಸೂಚಿಸಿದರು.
ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿದಾರರಿಗೆ 30 ದಿನಗಳೊಳಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸ್ವೀಕರಿಸಿದ ಅರ್ಜಿಯು ಇಲಾಖೆಯ ವ್ಯಾಪ್ತಿಗೆ ಒಳಪಡದಿದ್ದರೆ ಸಂಬಂಧಪಟ್ಟವರಿಗೆ 5 ದಿನದೊಳಗೆ ಸೆಕ್ಷನ್6(3) ಅಡಿಯಲ್ಲಿ ವರ್ಗಾಯಿಸಬೇಕು ಎಂದರು.
ಈ ಎಲ್ಲ ಪ್ರಕ್ರಿಯೆಗಳನ್ನು ವಿಳಂಬ, ನಿರ್ಲಕ್ಷ್ಯ ಮಾಡಿದ ಪಕ್ಷದಲ್ಲಿ ದಂಡನೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರ್ಟಿಐ ಕಾಯ್ದೆ ಬಗ್ಗೆ|
ಹೆಚ್ಚು ಜನರಿಗೆ ಅರಿವಿಲ್ಲ|
ಆರ್ಟಿಐ ಎಂಬ ಪದ ಜನಪ್ರಿಯತೆ ಗಳಿಸಿದ್ದರೂ, ಆರ್ಟಿಐ ಕಾಯ್ದೆ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ. ಸಾರ್ವಜನಿಕರು ಈ ಅಧಿನಿಯಮದ ಬಗ್ಗೆ ಸೂಕ್ತ ಮಾಹಿತಿ ಪಡೆಯುವ ಮೂಲಕ ಕಾಯ್ದೆಯ ಸಮರ್ಪಕ ಬಳಕೆಗೆ ಮುಂದಾಗಬೇಕು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಮಹೇಶ ವಾಳ್ವೇಕರ್ ಹೇಳಿದರು.
ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯ್ದೆಯ ಉದ್ದೇಶವಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರಿಗೆ ಅಧಿಕಾರ ನೀಡುವ, ಪಾರದರ್ಶಕ ಆಡಳಿತವನ್ನು ಉತ್ತೇಜಿಸುವ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸುವ ಒಂದು ಪ್ರಮುಖ ಸಾಧನ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಮಹೇಶ ವಾಳ್ವೇಕರ್ ಹೇಳಿದರು.
ಜನರ ಕೆಲಸಗಳು ಮುಕ್ತ ಹಾಗೂ ತ್ವರಿತವಾಗಿ ಆಗಲೆಂದು ಸಕಾಲ, ಮಾಹಿತಿ ಹಕ್ಕು ಕಾಯ್ದೆ, ಲೋಕಾಯುಕ್ತದಂತಹ ವ್ಯವಸ್ಥೆಗಳು ಸಕ್ರಿಯವಾಗಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ತುರ್ತಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕಾನೂನಿನ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಸಾರ್ವಜನಿಕ ದೂರುಗಳಿಗೆ ಅಧಿಕಾರಿಗಳು ಆದ್ಯತೆ ನೀಡಬೇಕು. ಕಡತಗಳ ನಿರ್ವಹಣೆಯನ್ನು ವಿಷಯ ನಿರ್ವಾಹಕರು ಸಮರ್ಪಕವಾಗಿ ಮಾಡಬೇಕು. ವಿಳಂಬ ಧೋರಣೆ ಅನುಸರಿಸಬಾರದು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಮಹೇಶ ವಾಳ್ವೇಕರ್ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದ ಆಯುಕ್ತ ವೆಂಕಟಸಿಂಗ್, ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಎಸ್ಪಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲೂರ, ಸಹಾಯಕ ಆಯುಕ್ತ ಶ್ರೀಧರ್ ಗೋಟೂರು, ಹೆಚ್ಚುವರಿ ಎಸ್ಪಿ ಧರಣೀಶ್, ಡಿವೈಎಸ್ಪಿಗಳಾದ ಸುರೇಶ್, ಜಾವೀದ್ ಇನಾಂದಾರ್, ಭರತ್ ತಳವಾರ, ಜಿಪಂ ಉಪಕಾರ್ಯದರ್ಶಿ ವಿಜಯ್ಕುಮಾರ್ ಮಡ್ಡೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯೀಂದ್ರ ಪಿ.ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.






