Shivamogga

ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಆರೋಪ|ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಟ್ರಾಫಿಕ್‌ ಪೊಲೀಸರು|ಪ್ರಿ-ಪೇಯ್ಡ್‌ ದರದಂತೇ ಹಣ ಪಡೆಯಲು ಆಟೋ ಚಾಲಕರಿಗೆ ಸೂಚನೆ

ಬೆಳಗಿನ ಜಾವ 4:30ರ ಸುಮಾರಿಗೆ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದ ಟ್ರಾಫಿಕ್‌ ಪೊಲೀಸರು, ಪ್ರೀ-ಪೇಯ್ಡ್ ಟಿಕೆಟ್‌ನಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆಯದಂತೆ ಎಚ್ಚರಿಕೆ ನೀಡಿದರು.

ಶಿವಮೊಗ್ಗದಲ್ಲಿ ಬುಧವಾರದಂದು ಬೆಳ್ಳಂಬೆಳಗ್ಗೆ ಟ್ರಾಫಿಕ್‌ ಪೊಲೀಸರು ಫೀಲ್ಡಗಿಳಿದು ಬಿಟ್ಟಿದ್ದರು. ಮುಂಗಡವಾಗಿ ಹಣ ನೀಡಿ ಬುಕ್‌ ಮಾಡುವ ಪ್ರಯಾಣಿಕರಿಗೆ ಆಟೋ ಚಾಲಕರು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಬೆಳಗಿನ ಜಾವ 4:30ರ ಸುಮಾರಿಗೆ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದ ಟ್ರಾಫಿಕ್‌ ಪೊಲೀಸರು, ಪ್ರೀ-ಪೇಯ್ಡ್ ಟಿಕೆಟ್‌ನಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆಯದಂತೆ ಎಚ್ಚರಿಕೆ ನೀಡಿದರು.

ಬೆಂಗಳೂರು–ತಾಳಗುಪ್ಪ ರೈಲಿನಲ್ಲಿ ಆಗಮಿಸಿದ ಪ್ರಯಾಣಿಕರು ಒಟ್ಟು 112 ಪ್ರೀ-ಪೇಯ್ಡ್ ಆಟೋ ಟಿಕೆಟ್‌ಗಳನ್ನು ಪಡೆದು ಪ್ರಯಾಣಿಸಿರುವ ದಾಖಲೆಯನ್ನು ಹಾಗೂ ಆಟೋಗಳ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಸಂಚಾರ ವೃತ್ತ ಸಿಪಿಐ ದೇವರಾಜ್ ಟಿ.ವಿ ಹಾಗೂ ಪೂರ್ವ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ನಾಗರಾಜ್ ಹೆಚ್.ಎನ್. ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

Follow Us

Leave a Reply

Your email address will not be published. Required fields are marked *

Back to top button