ರೇಲ್ವೆ ಸಚಿವ ಸೋಮಣ್ಣ ಕಾರಿಗೆ ಮುತ್ತಿಗೆ|ಯುವ ಕಾಂಗ್ರೆಸ್ ಕಾರ್ಯಕರ್ತರ ದಿಢೀರ ಪ್ರತಿಭಟನೆ|ಅಶೋಕ್ ಸರ್ಕಲ್ನಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿ
ಅಶೋಕ್ ಸರ್ಕಲ್ ಬಳಿ ಏಕಾಏಕಿ ಆಗಮಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮಣ್ಣ ಅವರ ವಾಹನಕ್ಕೆ ಅಕ್ಷರಶಃ ಮುತ್ತಿಗೆ ಹಾಕಿ ವಾಹನ ತಡೆದರು. ಕಪ್ಪು ಬಾವುಟ ಪ್ರದರ್ಶಿಸಿದರು.

ಶಿವಮೊಗ್ಗ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಕಾವು ಸೋಮವಾರದಂದು ನಗರಕ್ಕೆ ಆಗಮಿಸಿದ್ದ ಕೇಂದ್ರ ರೈಲ್ವೇ ಸಚಿವ ಸೋಮಣ್ಣ ಅವರಿಗೂ ತಟ್ಟಿದೆ.
ಖಾಸಗಿ ಷೋರೂಂ ಉದ್ಘಾಟನೆಗೆ ತೆರಳುತ್ತಿದ್ದ ವೇಳೆ ಅಶೋಕ್ ಸರ್ಕಲ್ ಬಳಿ ಏಕಾಏಕಿ ಆಗಮಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮಣ್ಣ ಅವರ ವಾಹನಕ್ಕೆ ಅಕ್ಷರಶಃ ಮುತ್ತಿಗೆ ಹಾಕಿ ವಾಹನ ತಡೆದರು. ಕಪ್ಪು ಬಾವುಟ ಪ್ರದರ್ಶಿಸಿದರು.

ಜ್ಞಾನೇಶ್ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಯುವಕಾಂಗ್ರೆಸಿಗರು ಘೋಷಣೆ ಕೂಗಿದ ಘಟನೆಯು ನಡೆಯಿತು.
ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿತು. ಆದರೆ ಸ್ಥಳದಲ್ಲಿದ್ದ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸುವಲ್ಲಿ ಯಶಸ್ವಿಯಾದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಶಿತ್, ನಗರಾಧ್ಯಕ್ಷ ಚರಣ್, ತಾಲೂಕು ಅಧ್ಯಕ್ಷ ಪ್ರವೀಣ್, ಆಕಾಶ್, ನಿಖಿಲ್ ವಿಷ್ಣು ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







