ಆಹಾರ ದಸರಾ ನಿಮಿತ್ತ ತಿನ್ನುವ ಸ್ಪರ್ಧೆ|ಕೆಲಸದ ಒತ್ತಡದ ಮಧ್ಯೆ ಪೊಲೀಸರು ಭಾಗಿ|12 ಇಡ್ಲಿ ತಿಂದ ಮುಖ್ಯಪೇದೆ ಪ್ರವೀಣ್ ಪಾಟೀಲ್ಗೆ ಪ್ರಥಮ ಬಹುಮಾನ
ಸಾರ್ವಜನಿಕರ ವಿಭಾಗದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಿಥುನ್ 11 ಮುಕ್ಕಾಲು ಇಡ್ಲಿ ತಿಂದು ಮೊದಲ ಸ್ಥಾನ ಪಡೆದರೆ, ಮಣಿಕಂಠ 11 ಇಡ್ಲಿ ತಿಂದು ಎರಡನೇ ಸ್ಥಾನ, ಪ್ರವೀಣ್ 9 ಇಡ್ಲಿ ತಿಂದು ಮೂರನೇ ಸ್ಥಾನ ಪಡೆದರು.

ಶಿವಮೊಗ್ಗ: ಆಹಾರ ದಸರಾ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಟ್ರಾಫಿಕ್ ಪೊಲೀಸರು ಮತ್ತು ಸಾರ್ವಜನಿಕರಿಗೆ ಏರ್ಪಡಿಸಿದ್ದ ಇಡ್ಲಿ, ಬಾಳೆಹಣ್ಣು ತಿನ್ನುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.
ಶಿವಪ್ಪ ನಾಯ್ಕ ವೃತ್ತದಲ್ಲಿ ಶನಿವಾರ ಸಂಚಾರಿ ಪೋಲೀಸರು ಹಾಗೂ ಸಾರ್ವಜನಿಕರಿಗಾಗಿ ಎರಡು ನಿಮಿಷಗಳಲ್ಲಿ ಅತೀ ಹೆಚ್ಚು ಇಡ್ಲೀ , ಬಾಳೆ ಹಣ್ಣು ತಿನ್ನುವ ಸ್ಪರ್ಧೆ ತೀವ್ರ ಪೈಪೋಟಿಯಿಂದ ನಡೆಯಿತು.

ಮೊದಲಿಗೆ ಸಂಚಾರಿ ಪೊಲೀಸರಿಗೆ ಇಡ್ಲಿ ತಿನ್ನುವ ಸ್ಪರ್ಧೆ ನಡೆಯಿತು. ಮುಖ್ಯ ಪೇದೆ ಪ್ರವೀಣ್ ಪಾಟೀಲ್ 12 ಇಡ್ಲಿ ತಿಂದು ಮೊದಲ ಬಹುಮಾನಕ್ಕೆ ಪಾತ್ರರಾದರು.
ರಮೇಶ್ ಅವರು ಹತ್ತು ಇಡ್ಲಿ ತಿಂದು ಎರಡನೇ ಬಹುಮಾನ ಮತ್ತು ಸಂತೋಷ್ ಮೂರನೇ ಬಹುಮಾನ ಪಡೆದರು.

ಮಹಿಳಾ ವಿಭಾಗದಲ್ಲಿ ದಿವ್ಯ ಏಳುವರೆ ಬಾಳೆಹಣ್ಣು ತಿಂದು ಮೊದಲ ಸ್ಥಾನ, ಸಲೀಮಾ ಐದು ಬಾಳೆಹಣ್ಣು ತಿಂದು ತೃತೀಯ ಸ್ಥಾನ ಪಡೆದರು.
ಸಾರ್ವಜನಿಕರ ವಿಭಾಗದಲ್ಲಿ
ಪುರುಷರಲ್ಲಿ ಮಿಥುನ್ ಫಸ್ಟ್|
ಮಹಿಳೆಯರಲ್ಲಿ ಧನಲಕ್ಷ್ಮೀ ಫಸ್ಟ್|
ಇನ್ನು ಸಾರ್ವಜನಿಕರ ವಿಭಾಗದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಿಥುನ್ 11 ಮುಕ್ಕಾಲು ಇಡ್ಲಿ ತಿಂದು ಮೊದಲ ಸ್ಥಾನ ಪಡೆದರೆ, ಮಣಿಕಂಠ 11 ಇಡ್ಲಿ ತಿಂದು ಎರಡನೇ ಸ್ಥಾನ, ಪ್ರವೀಣ್ 9 ಇಡ್ಲಿ ತಿಂದು ಮೂರನೇ ಸ್ಥಾನ ಪಡೆದರು.
ಸಾರ್ವಜನಿಕರ ಮಹಿಳಾ ವಿಭಾಗದಲ್ಲಿ ಧನಲಕ್ಷ್ಮಿ 13 ಬಾಳೆಹಣ್ಣು, ಪ್ರಥಮ. ಗೀತಾ 9 ಬಾಳೆಹಣ್ಣು ದ್ವಿತೀಯ ನೀಲಕುಮಾರಿ 8 ಬಾಳೆಹಣ್ಣು ತಿಂದು ತೃತೀಯ ಸ್ಥಾನ ಪಡೆದರು.
ಸಾರ್ವಜನಿಕರ ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾದ ಮಿಥುನ್ ಮಾತನಾಡಿ ಎಲ್ಲೋ ಹೋಗುತ್ತಿದ್ದವರು ಅಕಸ್ಮಾತ್ ಆಗಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ.
ಅವಕಾಶಗಳು ಸಿಗೋದೇ ಅಪರೂಪ..ಸಿಕ್ಕಾಗ ಬಳಸಿಕೊಳ್ಳಬೇಕು. ಮುಂದಿನ ವರ್ಷವೂ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುವುದಾಗಿ ಎಂದು ಹೇಳಿದರು.
ಆಹಾರ ದಸರಾ ಇಡ್ಲಿ ತಿನ್ನುವ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟ್ರಾಫಿಕ್ ನಿರೀಕ್ಷಕ ದೇವರಾಜ್, ಶಿವಮೊಗ್ಗದಲ್ಲಿ ಮೈಸೂರು ಬಿಟ್ಟರೆ ಅತ್ಯಂತ ವಿಜೃಂಭಣೆಯಿಂದ ಶಿವಮೊಗ್ಗದಲ್ಲಿ ದಸರಾ ನಡೆಯುತ್ತಿದೆ.
ಸಂಚಾರಿ ಪೊಲೀಸರಿಗೂ ಆಹಾರ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಾರೆ. ಭಾರತೀಯರು ಆಹಾರಪ್ರಿಯರು ಪ್ರತಿದಿನ ಅವಸರದಲ್ಲಿ ಕೆಲಸ ಮಾಡುವ ನಮಗೆ ದಸರಾದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಸಂತಸ ತಂದಿದೆ ಎಂದರು. ಬಳಿಕ ಸ್ಪರ್ಧೆ ವಿಜೇತರಿಗೆ ಅವರು ಬಹುಮಾನ ವಿತರಿಸಿದರು.
ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಣ್ಣ ಮಾತನಾಡಿ, ಸೋತವರು ಗೆದ್ದವರು ಎಲ್ಲರೂ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಭಾರತ ವೈವಿಧ್ಯಮಯ ಆಹಾರ ಪದ್ಧತಿ ಇರುವ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವ ದೇಶ ಈ ದಸರಾ ಹಬ್ಬ ಎಲ್ಲರಿಗೂ ಸಂತೋಷ ತರಲಿ ಎಂದರು.
ಪಾಲಿಕೆ ಸಹಾಯಕ ಅಭಿಯಂತರ ಪ್ರಭಾಕರ್, ಮಾಜಿ ಕಾರ್ಪೊರೇಟರ್ ರೇಖಾ ರಂಗನಾಥ್, ಹಿರಿಯ ಆಹಾರ ನಿರೀಕ್ಷಕ ವಸಂತ್ ಕುಮಾರ್ ಆಹಾರ ಪರೀಕ್ಷಕ ಬಸವರಾಜ್ ಆರೋಗ್ಯ ಇಲಾಖೆಯ ವೈದ್ಯರಾದ ಅನನ್ಯ ಆಹಾರ ದಸರಾ ಸಮಿತಿ ಕಾರ್ಯದರ್ಶಿ ಕೃಷ್ಣಮೂರ್ತಿ, ಶೈಲಜಾ ಮಂಜಣ್ಣ ಉಪಸ್ಥಿತರಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








