Shivamogga
ಕಂಠೀರವ ಸ್ಟುಡಿಯೋ ಹಾಗೂ ಫಿಲಂಸಿಟಿ ಯೋಜನೆ ನಿರ್ಮಾಣ|25 ಎಕರೆ ಜಾಗದಲ್ಲಿ ಮಂಜೂರಾತಿ ಸಾಧ್ಯತೆ|ವಾರದೊಳಗೆ ಅಧಿಕೃತ ಪ್ರಸ್ತಾವನೆ ಸಲ್ಲಿಕೆ
ಶಿವಮೊಗ್ಗದ ತ್ಯಾಜವಳ್ಳಿಯ ಸರ್ವೇ ನಂ, 60 ಮತ್ತು 27 ರಲ್ಲಿ 25 ಎಕರೆ ಜಾಗದಲ್ಲಿ ಫಿಲಂಸಿಟಿ ಮತ್ತು ಅತ್ಯಾಧುನಿಕ ಕಂಠೀರವ ಸ್ಟುಡಿಯೋ ನಿರ್ಮಾಣಕ್ಕೆ ಗರಿಷ್ಠ ಪ್ರಮಾಣದ ಜಮೀನು ಮಂಜೂರಾತಿ ಬಗ್ಗೆ ಸಮಾಲೋಚಿಸಲಾಯಿತು.

ಶಿವಮೊಗ್ಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಂಠೀರವ ಸ್ಟುಡಿಯೋ ಹಾಗೂ ಫಿಲಂಸಿಟಿ ಯೋಜನೆ ಜಮೀನು ಮಂಜೂರಾತಿ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ತಹಶೀಲ್ದಾರ್ ಕೆ.ಎಸ್.ರಾಜೀವ್ ಕುಮಾರ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ ಸಭೆಯಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದರು.
ಶಿವಮೊಗ್ಗದ ತ್ಯಾಜವಳ್ಳಿಯ ಸರ್ವೇ ನಂ, 60 ಮತ್ತು 27 ರಲ್ಲಿ 25 ಎಕರೆ ಜಾಗದಲ್ಲಿ ಫಿಲಂಸಿಟಿ ಮತ್ತು ಅತ್ಯಾಧುನಿಕ ಕಂಠೀರವ ಸ್ಟುಡಿಯೋ ನಿರ್ಮಾಣಕ್ಕೆ ಗರಿಷ್ಠ ಪ್ರಮಾಣದ ಜಮೀನು ಮಂಜೂರಾತಿ ಬಗ್ಗೆ ಸಮಾಲೋಚಿಸಲಾಯಿತು.
ಒಂದು ವಾರದೊಳಗೆ ಸಮಗ್ರ ಪರಿಶೀಲನಾ ವರದಿ ಹಾಗೂ ಅಧಿಕೃತ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಕಳಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







