Shivamoggaಶಿವಮೊಗ್ಗ ದಸರಾ-2026

ಆಕರ್ಷಕ ಲೇಸರ್‌ ಪ್ರದರ್ಶನ|ಜೋಗದ ವೈಭವ, ತುಂಗೆಯ ತಟ, ಮಲೆನಾಡಿನ ಅನಾವರಣ|ಇತಿಹಾಸ ಪರಿಚಯಿಸುವ ಪ್ರಯತ್ನ-ಮಾಯಣ್ಣಗೌಡ

ಲೇಸರ್ ಶೋ ಕಣ್ಮುಂಬಿಕೊಳ್ಳಲು ಶಿವಮೊಗ್ಗದ ಜನತೆ ಪಾಲಿಕೆ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಎಲ್ಲ ವಯೋಮಾನದವನ್ನೂ ತನ್ನತ್ತ ಆಕರ್ಷಿಸುತ್ತಿದೆ.

ಶಿವಮೊಗ್ಗ ದಸರಾ-2026ರ ಪ್ರಯುಕ್ತ ಮಹಾನಗರ ಪಾಲಿಕೆ ಪಾರಂಪರಿಕ ಕಟ್ಟಡದ ಮೇಲೆ ಮೊದಲ ಬಾರಿಗೆ ನಡೆಸುತ್ತಿರುವ ಆಕರ್ಷಕ ಲೇಸರ್ ಪ್ರದರ್ಶನ ಜನರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ದಸರಾ ಅಂಗವಾಗಿ ಬಣ್ಣಬಣ್ಣದ ಲೈಟಿಂಗ್ಸ್ಗಳಿಂದ ಝಗಮಗಿಸುತ್ತಿರುವ ಶಿವಮೊಗ್ಗ ಮಹಾನಗರದ ಪಾಲಿಕೆ ಐತಿಹಾಸಿಕ ಕಟ್ಟಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

1900 ರಲ್ಲಿ ನಿರ್ಮಿಸಲಾದ ಶಿವಮೊಗ್ಗ ಪಾಲಿಕೆ ಕಟ್ಟಡದಲ್ಲಿ 1919 ರಲ್ಲಿ ಮೊದಲ ಸಭೆ ನಡೆದಿದ್ದು ಇತಿಹಾಸ.. ಈ ಪಾರಂಪರಿಕ ಕಟ್ಟಡದಲ್ಲೀಗ ಶಿವಮೊಗ್ಗದ ಇತಿಹಾಸ ಪರಂಪರೆ ಸಂಸ್ಕೃತಿ ಪ್ರತಿಬಿಂಬಿಸುವ ಅತ್ಯಾಕರ್ಷಕ ಲೇಸರ್ ಪ್ರದರ್ಶನ ಗಮನ ಸೆಳೆಯುತ್ತಿದೆ.

ಭಾನುವಾರದಿಂದ ಆರಂಭಗೊಂಡಿರುವ ಲೇಸರ್ ಸಂಜೆ 7 ರಿಂದ 10 ಗಂಟೆವರೆಗೂ ನಡೆಯಲಿದೆ.

ಜೋಗದ ವೈಭವ, ತುಂಗೆಯ ತಟ, ಮಲೆನಾಡಿನ, ಸೊಬಗು, ಸಕ್ಕರೆಬೈಲಿನ ಬೆಡಗು, ಶಿವಪ್ಪನಾಯ್ಕನ ಅರಮನೆ, ಕೆಳದಿ ಇತಿಹಾಸ, ಹಚ್ಚಹಸಿರಿನ ಬನಸಿರಿ, ಶಿವಮೊಗ್ಗದ ಉತ್ಸವ, ಕಲೆ, ಸಾಹಿತ್ಯ ಕವಿಗಳ ಸೆಲೆ, ಸಂಗೀತ , ನೃತ್ಯ, ಸಂಪೂರ್ಣ ಶಿವಮೊಗ್ಗದ ಇತಿಹಾಸ ಲೇಸರ್ ಶೋ ಮೂಲಕ ಪ್ರದರ್ಶಿಸಲಾಗುತ್ತಿದೆ.

ಮುಂದಿನ ಪೀಳಿಗೆಗೆ ಅತ್ಯಾಕರ್ಷಕವಾಗಿ ಮನೋರಂಜನೆ ಮೂಲಕ ಇತಿಹಾಸವನ್ನು ಪರಿಚಯಿಸುವ ಸಣ್ಣ ಪ್ರಯತ್ನ ಎನ್ನುತ್ತಾರೆ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ.

ಸಾವಿರಾರು ಪೋಟೋ ಇಮೇಜ್ ಅಳವಡಿಸಿಕೊಂಡು ಅದಕ್ಕೆ ಸಂಗೀತ, ಬೆಳಕು ಹಾಗೂ ಲಯಬದ್ದ ವಿವರಣೆ ಮೂಲಕ ನೀಡುತ್ತಿರುವ ಲೇಸರ್ ಶೋನಲ್ಲಿ 28 ಮಂದಿ ತಂತ್ರಜ್ಞರ ಪರಿಶ್ರಮವಿದೆ.

ದಕ್ಷಿಣ ಏಷ್ಯಾದ ದೇಶಗಳಲ್ಲಿ ಲೇಸರ್ ಶೋ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.

ಅದರಲ್ಲಿ ಶ್ರೀಲಂಕಾದಲ್ಲಿ ಬುದ್ದಪೂರ್ಣಿಮಾ ಲೇಸರ್ ಶೋ, ಕಾಂಬೋಡಿಯಾದಲ್ಲಿ ನ್ಯಾಶನಲ್ ಗೇಮ್ ಥೀಮ್ ಲೇಸರ್ ಶೋ ಪ್ರಮುಖವಾದುದು.

ಲೇಸರ್ ಶೋ ಕಣ್ಮುಂಬಿಕೊಳ್ಳಲು ಶಿವಮೊಗ್ಗದ ಜನತೆ ಪಾಲಿಕೆ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಎಲ್ಲ ವಯೋಮಾನದವನ್ನೂ ತನ್ನತ್ತ ಆಕರ್ಷಿಸುತ್ತಿದೆ.

ಶಿವಮೊಗ್ಗದ ಚಿತ್ರಣ ಮನಮುಟ್ಟುವಂತೆ ಚಿತ್ತಾರದ ಬಣ್ಣದ ಬೆಳಿಕಿನ ಪ್ರದರ್ಶನಕ್ಕೆ ಶಿವಮೊಗ್ಗದ ಜನ ಫಿದಾ ಆಗಿರುವುದು ಸುಳ್ಳಲ್ಲ.

Follow Us

Leave a Reply

Your email address will not be published. Required fields are marked *

Back to top button