ಶಿವಮೊಗ್ಗ ಜಂಬೂ ಸವಾರಿ ಮೆರವಣಿಗೆ ವೇಳೆ ಅವಘಡ|ಪಟಾಕಿ ಶಬ್ಧದಿಂದ ಪೇರಿಕಿತ್ತ ಅಂಬಾರಿ ಹೊತ್ತ ಆನೆ|ನೆಲಕ್ಕೆ ಬಿದ್ದ ದೇವಿ ಮೂರ್ತಿಯ ಮಂಟಪ
ಅಂಬಾರಿ ಉತ್ಸವದ ವೇಳೆ ಪಟಾಕಿ ಸದ್ದುಗದ್ದಲಕ್ಕೆ ಬೆದರಿ ಎರಡು ಆನೆಗಳು ಗುದ್ದಾಟಕ್ಕಿಳದ ಪರಿಣಾಮ ಮಾವುತನ ನಿಯಂತ್ರಣಕ್ಕೆ ಸಿಗದೇ ಅಂಬಾರಿ ಹೊತ್ತ ಆನೆ ಸೋಮಣ್ಣ ದಿಕ್ಕಾಪಾಲಾಗಿ ಓಡಿದ್ದಾನೆ.

ಶಿವಮೊಗ್ಗ: ದಸರಾ ಜಂಬೂ ಸವಾರಿ ಮೆರವಣಿಗೆ ವೇಳೆ ಅಂಬಾರಿ ಹೊತ್ತ ಆನೆ ಸೋಮಣ್ಣ ದಿಕ್ಕಾಪಾಲಾಗಿ ಓಡಿದ ಪರಿಣಾಮ ದೇವಿ ಮೂರ್ತಿ ಸಹಿತ ಮಂಟಪ ಕೆಳಕ್ಕೆ ಬಿದ್ದ ಘಟನೆ ನಡೆದಿದೆ.
ಅಂಬಾರಿ ಮೆರೆವಣಿಗೆಗೆಗಾಗಿ ಎಲ್ಲ ಸಿದ್ದತೆಗಳೂ ನಡೆದಿತ್ತು.
ಅಂಬಾರಿ ಹೊರಬೇಕಾಗಿದ್ದ ಸಾಗರ್ ಆನೆ ಬದಲು 21 ರ ಬುಧವಾರ ಕಡೇ ದಿನ ಸೋಮಣ್ಣ ಆನೆಯನ್ನು ಅಂಬಾರಿ ಹೊರಲು ನಿಶ್ಚಯಿಸಿ ಮೆರವಣಿಗೆಗೆ ಸಜ್ಜುಗೊಳಿಸಿದ್ದರು.

ಸಂಭ್ರಮದೊಂದಿಗೆ ಆರಂಭಗೊಂಡ ಅಂಬಾರಿ ಉತ್ಸವದ ವೇಳೆ ಪಟಾಕಿ ಸದ್ದುಗದ್ದಲಕ್ಕೆ ಬೆದರಿ ಎರಡು ಆನೆಗಳು ಗುದ್ದಾಟಕ್ಕಿಳದ ಪರಿಣಾಮ ಮಾವುತನ ನಿಯಂತ್ರಣಕ್ಕೆ ಸಿಗದೇ ಅಂಬಾರಿ ಹೊತ್ತ ಆನೆ ಸೋಮಣ್ಣ ದಿಕ್ಕಾಪಾಲಾಗಿ ಓಡಿದ್ದಾನೆ.
ಇದರಿಂದ ಕೆಲಕಾಲ ಜನರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ಅಂಬಾರಿ ಹೊತ್ತ ಆನೆ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಳ್ಳಿಯ ಮಂಟಪ ಕೆಳಗೆ ಬಿದ್ದು ಜೋತಾಡುತ್ತಿತ್ತು.
ಅನಿರೀಕ್ಷಿತ ಘಟನೆಯಿಂದಾಗಿ ಶಿವಮೊಗ್ಗ ಜಂಬೂಸವಾರಿ ಮೆರವಣಿಗೆ ರದ್ದು ಮಾಡಲಾಗಿದೆ.
ಈ ಮಧ್ಯೆ ಅಲ್ಲಮ ಪ್ರಭು ಮೈದಾನದಲ್ಲಿ ನಡೆಯುವ ದೇವತೆಗಳ ಉತ್ಸವ ಮತ್ತು ಬನ್ನಿಮುಡಿಯುವ ಕಾರ್ಯಕ್ರಮ ನಿರಾತಂಕವಾಗಿ ಸಾಗಲಿದೆ .
ಇನ್ನು ವದಂತಿಗಳಿಗೆ ಕಿವಿಗೊಡದೇ ಬನ್ನಿ ಮುಡಿಯುವ ಉತ್ಸವದಲ್ಲಿ ಪಾಲ್ಗೊಳ್ಳಲು ಶಾಸಕ ಚೆನ್ನಬಸಪ್ಪ ಮನವಿ ಮಾಡಿದ್ದಾರೆ.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.






