DistrictShivamogga

ದೇಶವನ್ನು ಒಗ್ಗೂಡಿಸುವಲ್ಲಿ ಸರ್ದಾರ ವಲ್ಲಭಬಾಯಿ ಪಟೇಲರ ಪಾತ್ರ ಅಪಾರ| “ಏಕತಾ ನಡಿಗೆ” ಜಾಥಾಕ್ಕೆ ಚಾಲನೆ ನೀಡಿದ ಸಂಸದ ಬಿ ವೈ ರಾಘವೇಂದ್ರ

ಕಾಶ್ಮೀರದ ರಾಜಾ ಹರಿಸಿಂಗ್‌ ಅವರನ್ನು ನಮ್ಮ ಸಂವಿಧಾನ ಅಡಿಯಲ್ಲಿ ತರಲು ಮನವೊಲಿಸಿದ್ದ ಸರ್ದಾರ ವಲ್ಲಭಭಾಯಿ ಪಟೇಲರು, ಹೈದ್ರಾಬಾದ ನಿಜಾಮನನ್ನು ಸದೆಬಡೆಯುವ ಮೂಲಕ ಭಾರತದ ಅಡಿಯಲ್ಲಿ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಹೇಳಿದರು.

ದೇಶ ಸ್ವತಂತ್ರಗೊಂಡ ನಂತರ ರಾಷ್ಟ್ರದ ಎಲ್ಲ ಸಂಸ್ಥಾನಗಳನ್ನು ಒಂದೇ ಸೂರಿನಡಿ ತಂದ ಶ್ರೇಯಸ್ಸು ಸರ್ದಾರ ವಲ್ಲಭಬಾಯಿ ಪಟೇಲ್‌ರಿಗೆ ಸಲ್ಲುತ್ತದೆ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಹೇಳಿದರು.

ಸರ್ದಾರ ವಲ್ಲಬಭಾಯಿ ಪಟೇಲರ 150 ನೇ ಜನ್ಮದಿನದ ಅಂಗವಾಗಿ ಭಾರತ ಸರ್ಕಾರದ ಯುವ ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಲಾಗಿದ್ದ ಏಕತಾ ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ಕಾಶ್ಮೀರದ ರಾಜಾ ಹರಿಸಿಂಗ್‌ ಅವರನ್ನು ನಮ್ಮ ಸಂವಿಧಾನ ಅಡಿಯಲ್ಲಿ ತರಲು ಮನವೊಲಿಸಿದ್ದ ಸರ್ದಾರ ವಲ್ಲಭಭಾಯಿ ಪಟೇಲರು, ಹೈದ್ರಾಬಾದ ನಿಜಾಮನನ್ನು ಸದೆಬಡೆಯುವ ಮೂಲಕ ಭಾರತದ ಅಡಿಯಲ್ಲಿ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಹೇಳಿದರು.

ಸಾಮ ಭೇದ ದಂಡ ಅಸ್ರ್ತಗಳನ್ನು ಪ್ರಯೋಗಿಸಿ, ಇಡಿ ದೇಶವನ್ನು ಸಮೃದ್ಧ ರಾಷ್ಟ್ರವನ್ನಾಗಿ ಮಾಡಲು ಅವರು ಅಪಾರ ಶ್ರಮ ಪಟ್ಟಿದ್ದರು. ಹೀಗಾಗಿ ಸರ್ದಾರ ವಲ್ಲಬಭಾಯಿ ಪಟೇಲರು ಉಕ್ಕಿನ ಮನುಷ್ಯರೆಂದು ಖ್ಯಾತಿಯಾಗಿದ್ದರು ಎಂದು ಸಂಸದ ಬಿ ವೈ ರಾಘವೇಂದ್ರ ಸ್ಮರಿಸಿದರು.

ಶಾಸಕ ಎಸ್‌ ಎನ್‌ ಚೆನ್ನಬಸಪ್ಪ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಜೀವನ ಚರಿತ್ರೆಯು ಈಗಿನ ಪೀಳೀಗೆಯವರು ತಿಳಿದುಕೊಳ್ಳಬೇಕು. ಆ ಮೂಲಕ ಹಿರಿಯರಿಗೆ ಗೌರವ ಸಲ್ಲಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಹೇಳಿದರು

ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ, ಸರ್ದಾರ ವಲ್ಲಭಭಾಯಿ ಪಟೇಲ್‌ರಿಗೆ ಅಂಟಿಕೊಂಡಿರುವ “ಸರ್ದಾರ” ಎಂಬ ಬಿರುದು ಬರಲು 1928 ರಲ್ಲಿ ಗುಜರಾತಿನ ಬಾರ್ಡೋಲಿಯಲ್ಲಿ ನಡೆದ ರೈತ ಚಳುವಳಿಯೇ ಕಾರಣ ಎಂದರು.

ನಾವೆಲ್ಲ ಒಂದೇ ಎಂಬ ಭಾವನೆಯೊಂದಿಗೆ “ಏಕ್‌ ಭಾರತ್‌ ಶ್ರೇಷ್ಠ ಭಾರತ್”‌ ಎಂಬ ಧ್ಯೇಯದಡಿ ಏಕತಾ ನಡಿಗೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಏಕತಾ ನಡಿಗೆಯು ನೆಹರೂ ಸ್ಟೇಡಿಯಂನಿಂದ ಹೊರಟು, ಮಹಾವೀರ ಸರ್ಕಲ್‌, ಜೈಲ್‌ ಸರ್ಕಲ್‌, ದುರ್ಗಿಗುಡಿ ಮಾರ್ಗವಾಗಿ ಫ್ರೀಡಂ ಪಾರ್ಕ್‌ ತಲುಪಿತು.

ಏಕತಾ ನಡಿಗೆ ಜಾಥಾಕ್ಕೂ ಮುನ್ನ ಗೋವಿಗೆ ಪೂಜೆ ಮಾಡಲಾಯಿತು.

ಮಾಜಿ ಶಾಸಕ ಅಶೋಕ್‌ ನಾಯ್ಕ್‌, ಆರ್ ಕೆ ಸಿದ್ದರಾಮಣ್ಣ, ಅಪರ ಜಿಲ್ಲಾಧಿಕಾರಿ ಅಭಿಷೇಕ್‌, ಜಗದೀಶ್, ಡಾ.ಶುಭಾ ಮರವಂತೆ, ಜ್ಯೋತಿಪ್ರಕಾಶ್‌, ಕೆ ವಿ ಅಣ್ಣಪ್ಪ ಸೇರಿದಂತೆ ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಮತ್ತು ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

Follow Us

Leave a Reply

Your email address will not be published. Required fields are marked *

Back to top button