Hubballi-ರೈಲ್ ಪ್ರಸಾದ್ ಪಡೆದಿದ್ದು Fake”ಗೌರವ ಡಾಕ್ಟರೇಟ್”|’ಯುಜಿಸಿ’ ಪ್ರಕಾರ ನಕಲಿ ಗೌ.ಡಾ.ಪಡೆದ ವರಪ್ರಸಾದ್ಗೆ ಶಿಕ್ಷೆ ಗ್ಯಾರಂಟಿ?..ಭಾಗ-02
ಖಡಕ ಪೊಲೀಸ್ ಕಮೀಶನರ್ ಶಶಿಕುಮಾರ್ ಅವರು ಈ ನಕಲಿ ಡಾಕ್ಟರ್ ವಿಎಸ್ವಿ ಪ್ರಸಾದ್ನ ಹೆಡೆಮುರಿ ಕಟ್ಟಿದರೇ ಸಾಕು. ಈ ನಕಲಿ ದಂಧೆಕೋರರು ಸಲೀಸಾಗಿ ಸಿಕ್ಕಿಬೀಳೋದು ಗ್ಯಾರಂಟಿ. ಸತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ಸಹ ನಕಲಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ತನಿಖೆ ಶುರು ಹಚ್ಚಿಕೊಂಡರೇ, ಈ ಭಾಗದಲ್ಲಿ ಹತ್ತಾರು ಸಂಖ್ಯೆಯಲ್ಲಿ ನಕಲಿ ಗೌ.ಡಾ.ಗಳು ಸೀಗಿಬೀಳಲಿದ್ದಾರೆ.

ಪದವಿ, ಗೌರವ ಡಾಕ್ಟರೇಟ್ಗಳನ್ನು ಬಿಕರಿಗೆ ಇಟ್ಟಿರುವ ಶೈಕ್ಷಣಿಕ ಜಗತ್ತಿನ ಅತಿದೊಡ್ಡ ಮಾಫಿಯಾ ದಂಧೆಯ ಬೆನ್ನತ್ತಿ ಹೊರಟಿರುವ ನ್ಯೂಇಂಡಿಯಾ ಕನ್ನಡ ಡಿಜಿಟಲ್ ಪತ್ರಿಕೆಯು, ಈ ಸಂಚಿಕೆಯಲ್ಲಿ ಹುಬ್ಬಳ್ಳಿಯ ರೈಲ್ ಕಂಟ್ರಾಕ್ಟರ್ನ ಇತಿಹಾಸವನ್ನು ಬಯಲು ಮಾಡಲಿದೆ.
ಸದಾ ಪ್ರಚಾರದ ಹಪಾಹಪಿಯಲ್ಲಿಯೇ ಇರುವ ಈ ವ್ಯಕ್ತಿ, ರೇಲ್ವೆ ಗುತ್ತಿಗೆ ಕೆಲಸವನ್ನೆ ಸಮಾಜಸೇವೆ ಎಂದು ತಿಳಿದುಕೊಂಡಿದ್ದಾನೆ ಮತ್ತು ಅದನ್ನೇ ಜನರಲ್ಲಿ ಬಿಂಬಿಸುತ್ತಾನೆ.
ಈತ ವರುಷಗಳ ಹಿಂದೆನೇ ನಕಲಿ ಗೌರವ ಡಾಕ್ಟರೇಟ್ ಪಡೆದಿದ್ದಲ್ಲದೇ ತನಗಿರುವ ಇನ್ಫ್ಲುಯೆನಸ್ಸ್ ಬಳಸಿ ಕಳೆದ ವರುಷ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಅಸಲಿ ಗೌರವ ಡಾಕ್ಟರೇಟ್ ಪಡೆದಿದ್ದು ಈ ನಾಡಿನ ದುರಂತ.
ಇಂತಹ ಪ್ರಚಾರಪ್ರಿಯನ ಅಸಲಿ ಸಂಗತಿಗಳ ಬಗ್ಗೆ ಹಾಗು ನಕಲಿ ವಿವಿಗಳ ಆಳ ಅಗಲಗಳ ಬಗ್ಗೆ ಇನ್ನಷ್ಟು ಸ್ಪೋಟಕ ಮಾಹಿತಿ ಇಲ್ಲಿದೆ.
ವಿಎಸ್ವಿ ಪ್ರಸಾದ್ ಎಂಬ ಪ್ರಚಾರಪ್ರಿಯ|
ಹುಬ್ಬಳ್ಳಿಯಲ್ಲಿ ಸಮಾಜಸೇವಕನ ಹೆಸರಿನಲ್ಲಿ ಪೋಸು|
ಹೂಬಳ್ಳಿಯ ಜನರಿಗೆ ಯಾಮಾರಿಸುತ್ತಿದ್ದಾನೆ ಪ್ರಸಾದ್|
ವಿಎಸ್ವಿ ಪ್ರಸಾದ್..ಅಲಿಯಾಸ ಸಿ.ಹೆಚ್.ವಿ.ಎಸ್.ವಿ. ಪ್ರಸಾದ್..ಸ್ವರ್ಣ ಗ್ರೂಪ್ ಎಂಡಿ ಪ್ರಸಾದ್..ಹೀಗೆ ಹುಬ್ಬಳ್ಳಿಯಲ್ಲಿ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ಆಸಾಮಿ, ಆಂದ್ರದಿಂದ ಹುಬ್ಬಳ್ಳಿಗೆ 90ರ ದಶಕದಲ್ಲಿ ವಲಸೆ ಬಂದವನು.

ಬಂದವನೇ ಏನು ಮಾಡಿದ ಗೊತ್ತಿಲ್ಲ. ಆದರೆ ಆತನೇ ಹೇಳಿಕೊಳ್ಳುವಂತೆ ರೇಲ್ವೆ ಗುತ್ತಿಗೆ ಮಾಡತೊಡಗಿದನಂತೇ. ಸರ್ಕಾರಿ ದುಡ್ಡಿನಲ್ಲಿ ಕೇಶ್ವಾಪೂರ ರಸ್ತೆಯಲ್ಲಿ ಓವರ್ ಬ್ರಿಡ್ಜ್ ಕಟ್ಟಿದರೇ ಇದು ತನ್ನದೇ ಸಾಧನೆ ಎಂದು ಪ್ರಚಾರ ಪಡೆಯುತ್ತಾನೆ.
ಇಂತಹ ವ್ಯಕ್ತಿ ಸ್ವರ್ಣ ಗ್ರೂಫ್ ಆಫ್ ಕಂಪನಿ ಸ್ಥಾಪಿಸುತ್ತಾನೆ. ಇವತ್ತು ಈತ ಮಾಡುವ ರೇಲ್ವೆ ಗುತ್ತಿಗೆ ಕಂಪನಿಯ ಎಂಡಿ ಹೆಸರಿನಲ್ಲಿಯೇ ತಾನೊಬ್ಬ ಸಾಧಕ ಎಂದು ಬಿಂಬಿಸುವುದೇ ಈತನ ಕೆಲಸ.
ಯಾರ್ಯಾರಿಗೆ ಏನೇನೂ ತಿನ್ನಿಸುತ್ತಾನೆ ಗೊತ್ತಿಲ್ಲ. ಇವತ್ತು ಹುಬ್ಬಳ್ಳಿ ರೇಲ್ವೆ ವಲಯದ ಬಹುತೇಕ ಕಡೆ ರೇಲ್ವೆ ಗುತ್ತಿಗೆ ಸಿಗುವುದು ಈತನಿಗೆ ಮಾತ್ರ. ಅಥವಾ ಈತ ಸೂಚಿಸಿದವರಿಗೆ ಸಿಗುತ್ತದೆ. ಆ ಮಟ್ಟಿಗೆ ಈತನ ಇನ್ಫ್ಲುಯೆನ್ಸ್ ರೇಲ್ವೆ ಇಲಾಖೆಯಲ್ಲಿ ಇರುವುದು ಮಾತ್ರ ನಿಜ.
ರೇಲ್ವೆ ಗುತ್ತಿಗೆ ಕೆಲಸದಿಂದಲೇ(?) ನೂರಾರು ಕೋಟಿ ರೂ. ಸಂಪಾದಿಸುವ ಈತ ದಶಕಗಳ ಹಿಂದೆಯೇ ಸಮಾಜಸೇವಕನ (?) ಪೋಸು ಕೊಡಲು ಶುರು ಹಚ್ಚಿಕೊಂಡಿದ್ದ. ಯಾರೇ ಅತಿಥಿಯಾಗಲಿ ಕರೆಯಲಿ ಅವರಿಗೆ ಇಂತಿಷ್ಟು ಅಂತ ಫಿಕ್ಸ್ ಮಾಡಿಬಿಟ್ಟ.

ಹೀಗಾಗಿ ಹುಬ್ಬಳ್ಳಿಯಲ್ಲಿ ಸಂದರ್ಭ ಇರಲಿ ಬಿಡಲಿ ಈತನನ್ನು ಹಲವು ಸೋಕಾಲ್ಡ್ ಸಂಘಟನೆಗಳು ಅತಿಥಿಯನ್ನಾಗಿ ಕರೆಯತೊಡಗಿದವು. ಹೀಗೆ ವಾರಕ್ಕೆ ಒಂದು ಫಂಕ್ಷನ್ಗೆ ಹೋಗುತ್ತಿದ್ದ ಈ ವಿಎಸ್ವಿ ಪ್ರಸಾದ್, ಬರು ಬರುತ್ತ ದಿನಕ್ಕೆ ನಾಲ್ಕು ಕಾರ್ಯಕ್ರಮಗಳಿಗೆ ಹೋಗತೊಡಗಿದನು.
ದಿನವೂ ಹಲವು ಪತ್ರಿಕೆಗಳಲ್ಲಿ ಈತನ ಫೋಟೋ, ಸುದ್ದಿಗಳು ಬರತೊಡಗಿದವು. ಎಲ್ಲೆಡೆ ಸ್ವರ್ಣ ಗ್ರೂಪ್ ಆಫ ಕಂಪನಿ ಎಂಡಿ ಪ್ರಸಾದ್ ಎಂದು ಪ್ರಚಾರ ಸಿಗತೊಡಗಿತು. ಅಸಲಿಗೆ ಈತನ ಸ್ವರ್ಣ ಗ್ರೂಪ್ ಆಫ್ ಕಂಪನಿ ಹೆಸರಿನಲ್ಲಿ ಏನು ಮಾಡುತ್ತಾನೆ ಎಂದು ಯಾರು ಪ್ರಶ್ನಿಸಲೇ ಇಲ್ಲ. ಪ್ರತಿದಿನ ದಿನಪತ್ರಿಕೆ ತೆಗೆದರೇ ಸಾಕು ಈತನ ಸುದ್ದಿ ಇರಲೇಬೇಕು.

ಮೊದಲಿಗೆ ಮಾತಾಡಲು ಬರುತ್ತಿರಲಿಲ್ಲ. ಬಳಿಕ ಯಾರೋ ಬರೆದುಕೊಟ್ಟ ಭಾಷಣದ ಗಿಳಿಪಾಠ ಒಪ್ಪಿಸತೊಡಗಿದ. ಹೀಗೆ ಜನಪ್ರತಿನಿಧಿಗಳಿಗೂ ಸಿಗದ ಪ್ರಚಾರ ಈ ಪ್ರಸಾದ್ನಿಗೆ ಸಿಗತೊಡಗಿತು.
ಇದರಿಂದ ತಾನೇನು ಭಾರಿ ಸಾಧನೆ ಮಾಡಿದ್ದೇನೆ ಎಂಬ ಭ್ರಮೆಯಲ್ಲಿ ತೇಲತೊಡಗಿದ್ದ ಈ ಪ್ರಸಾದನಿಗೆ ಕ್ರಮೇಣ ಸ್ಥಳೀಯ ರಾಜಕಾರಣಿಗಳು ಪರಿಚಯವಾಗತೊಡಗಿದ್ದರು.
ಸದಾ ತನ್ನ ಸುತ್ತ ರೌಡಿಗಳನ್ನು ಇಟ್ಟುಕೊಂಡು ತಿರುಗಾಡತೊಡಗಿದ್ದ ಈತನ ಬಗ್ಗೆ ಹುಬ್ಬಳ್ಳಿಯ ಜನರಿಗೆ ಅದಾಗಲೇ ಒಂದು ಸಣ್ಣ ಅನುಮಾನ ಶುರು ಆಗಿತ್ತು.
ಇದಿಷ್ಟು ಈ ಪ್ರಸಾದನ ಫಸ್ಟ್ ಹಾಫ್ನ ಕೆಲ ವಿಷಯಗಳ ಒಂದು ಸಣ್ಣ ಕಥೆಯಷ್ಟೇ. ಸೆಕೆಂಡ್ ಹಾಫ್ ಕಥೆ ಶುರು ಆಗೋದೆ ಗೌರವ ಡಾಕ್ಟರೇಟ್ ಮತ್ತು ರಾಜ್ಯಸಭಾ ಸದಸ್ಯನಾಗುವ ತೆವಲಿನ ಕಥೆ..
ರೇಲ್ವೆ ಗುತ್ತಿಗೆ ಕೆಲಸ ಸಮಾಜ ಸೇವೆಯೇ?
ನಕಲಿ ಗೌರವ ಡಾಕ್ಟರೇಟ್ ತೆವಲಿಗೆ ಬಿದ್ದ ಪ್ರಸಾದ್|
ಬಹುಶಃ ಪ್ರಚಾರಕ್ಕಾಗಿ ಈ ಪ್ರಸಾದ್ ಸೀಮಿತನಾಗಿ ಬಿಟ್ಟಿದ್ದರೇ ಈತನ ಹುಚ್ಚುತನದ ಬಗ್ಗೆ ಜನರು ಯಾವಾಗೋ ಮೆರೆತು ಬಿಡುತ್ತಿದ್ದರೇನೋ! ಆದರೆ ಈತನ ಪ್ರಚಾರದ ತೆವಲು ಯಾವ ಮಟ್ಟಿಗೆ ತಿರುಗಿತು ಎಂದರೇ ಸಮಾಜದಲ್ಲಿ ನಾನು ಬುದ್ದಿಜೀವಿ(?) ಅನಿಸಿಕೊಳ್ಳಬೇಕು ಎನ್ನುವ ಚಪಲ.
ಬರೀ ಹೆಸರು ಬಂದರೇ ಸಾಲದು. ನನ್ನ ಹೆಸರಿನ ಹಿಂದೆ ಡಾಕ್ಟರ್ ಅಂತ ಬರಬೇಕು ಎಂಬ ಹೊಸ ತೆವಲು ಶುರು ಆಗುತ್ತೇ. ಆಗ ಜನರು, ಹೋ..ಈತ ಸಂಶೋಧಕನಿರಬೇಕು. ಪಿಹೆಚ್ಡಿ ಪಡೆದಿರಬೇಕು. ನನ್ನನ್ನು ಬುದ್ದಿವಂತ ಅನ್ನಬೇಕು ಎಂಬ ದುರಾಸೆ ಪ್ರಸಾದನಿಗೆ ಶುರು ಆಗಿತ್ತು.

ಅದೇ ಹೊತ್ತಿಗೆ ಈ ಡುಬ್ಬಲ ಐಡಿಯಾ ಕೊಟ್ಟಿದ್ದ ಈತನ ಹೊಗಳುಭಟ್ಟರು, ಶ್ರೀಲಂಕಾದ ಒಂದು ವಿಶ್ವವಿದ್ಯಾಲಯ(?)ದೊಂದಿಗೆ ಮಾತನಾಡಿ ಗೌರವ ಡಾಕ್ಟರೇಟ್ ಖರೀಧಿ ಮಾಡಲು ಮುಂದಾಗಿದ್ದಾರೆ.
ಯಾವ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಎಂದು ಚರ್ಚೆ ನಡೆದು ಕೊನೆಗೂ ಹೊಗಳುಭಟ್ಟರು “ಕನಸ್ಟ್ರಕ್ಷನ್ ಇಂಡಸ್ಟ್ರೀಸ್”ನಲ್ಲಿ ಗೌರವ ಡಾಕ್ಟರೇಟ್ ಪಡೆಯಲು ಸಜ್ಜಾಗಿದ್ದಾರೆ.
ಆದರೆ ಆ ವಿಶ್ವವಿದ್ಯಾಲಯಕ್ಕೆ ಮಾನ್ಯತೆನೇ ಇಲ್ಲ ಎಂಬ ವಿಷಯ ಗೊತ್ತಾಗಲು ಬಹಳ ದಿನ ಬೇಕಾಗಲಿಲ್ಲ.
ಮೆಡಿಸಿನಾ ಅಲ್ಟರನೆಟಿವಾ ಎಂಬ ಫೇಕ್ ವಿಶ್ವವಿದ್ಯಾಲಯ|
ಶ್ರೀಲಂಕಾದಲ್ಲಿ ಇದಕ್ಕೆ ಮಾನ್ಯತೇನೆ ಇಲ್ಲ!
ನಕಲಿ “ಗೌರವ ಡಾಕ್ಟರೇಟ್” ಭಾಜನರಾದ ಪ್ರಸಾದ!
ಶ್ರೀಲಂಕಾದ ಮೆಡಿಸಿನಾ ಅಲ್ಟರನೆಟಿವಾ ಎಂಬ ವಿಶ್ವವಿದ್ಯಾಲಯದವರು ಗೌರವ ಡಾಕ್ಟರೇಟ್ ನೀಡಲು ದುಡ್ಡು ಕೇಳಿದಾಗಲೇ ಈ ಪ್ರಸಾದ್ನಿಗೆ ಆ ವಿಶ್ವವಿದ್ಯಾಲಯದ ಬಗ್ಗೆ ತಿಳಿದುಕೊಳ್ಳಬೇಕಿತ್ತು.

ಆದರೆ ಇದ್ಯಾವುದು ಆತನಿಗೆ ಬೇಡಾಗಿತ್ತು. ದೂರದ ಶ್ರೀಲಂಕಾದಿಂದ ಗೌರವ ಡಾಕ್ಟರೇಟ್ ನೀಡುತ್ತಿದ್ದಾರೆ.
ಎಲ್ಲಿಯ ಶ್ರೀಲಂಕಾ.. ಎಲ್ಲಿಯ ಹುಬ್ಬಳ್ಳಿ..ಯಾರಿಗೆ ಇದು ನಕಲಿ ವಿಶ್ವವಿದ್ಯಾಲಯ ಅಂತ ಗೊತ್ತಾಗುತ್ತೇ ಎಂಬ ಭಂಡತನದಿಂದಲೇ ಈ ಪ್ರಸಾದ್ ಅದೇಷ್ಟೋ ಲಕ್ಷಕ್ಕೆ ಕೊನೆಗೂ ಗೌರವ ಡಾಕ್ಟರೇಟ್ ಖರೀಧಿ ಮಾಡಿಯೇ ಬಿಟ್ಟನು.
ದುಡ್ಡು ಕೊಟ್ಟಿದ್ದನಲ್ಲ. ಹೀಗಾಗಿ ಮೆಡಿಸಿನಾ ಅಲ್ಟರನೆಟಿವಾ ಎಂಬ ನಕಲಿ ವಿಶ್ವವಿದ್ಯಾಲಯದ ಚೀಟರ್ಗಳು ಹೊಟೇಲ್ ಒಂದರಲ್ಲಿ ಕಾರ್ಯಕ್ರಮ ಮಾಡಿ ಈತನ ತಲೆಗೆ ಪಾಲಿಸ್ಟರ್ ಟೋಪಿ ಇಟ್ಟು ಗೌನ್ ಹಾಕಿದರು.

ಈ ನಕಲಿ ವಿವಿ ಯಾವಮಟ್ಟಕ್ಕೆ ಇಳಿಯುತ್ತದೆಂದರೇ ದುಡ್ಡು ಕೊಟ್ಟರೇ, ಗಾರೆ ಕೆಲಸ ಮಾಡೋರಿಗೂ ಗೌ.ಡಾ.ಪದವಿ ಕೊಡಲು ಮುಂದಾಗುತ್ತಾರೆ. (ಚಿಕ್ಕಪೇಟೆಯಲ್ಲಿ ಖರೀಧಿಸಿದರೇ ಈ ಟೋಪಿ ಹಾಗು ಗೌನ್ ಸಾವಿರ ರೂ.ಗೆ ಸಿಗುತ್ತೇ.)
ಸರಿ..ತನ್ನ ರೌಡಿ ಹಿಂಬಾಲಕರನ್ನು ಕರೆದುಕೊಂಡು ಹೋಗಿ ನಕಲಿ ಗೌರವ ಡಾಕ್ಟರೇಟ್ ಪಡೆದು ಹುಬ್ಬಳ್ಳಿಗೆ ಬಂದ ಈ ಪ್ರಸಾದ್ನಿಗೆ ಭಾರಿ ಸ್ವಾಗತ ಕೋರಲಾಯಿತು.
ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬಂತೇ ಪೇಮೆಂಟ್ ಪಡದೇ ಕಾರ್ಯಕ್ರಮ ಮಾಡುವ ಸಂಘ ಸಂಸ್ಥೆಗಳು ತಾ..ಮುಂದು ನಾ..ಮುಂದು ಎಂದು ಮುಗಿಬಿದ್ದು ನಕಲಿ ಗೌರವ ಡಾಕ್ಟರೇಟ್ ಪಡೆದ ಈ ಪ್ರಸಾದ್ನಿಗೆ ಸನ್ಮಾನ ಮಾಡಿದರು.
ಹಲವು ಪತ್ರಿಕೆಗಳಿಗೆ ದೊಡ್ಡ ದೊಡ್ಡ ಜಾಹೀರಾತುಗಳನ್ನು ಸ್ನೇಹಿತರ ಬಳಗದ ಹೆಸರಿನಲ್ಲಿ ನೀಡಲಾಯಿತು. ಪತ್ರಿಕೆಗಳಲ್ಲಿ ಫೋಟೋ ಸುದ್ದಿಗಳು ಬಂದವು.
ಹುಬ್ಬಳ್ಳಿಯ ಕೆಲವು ಜನ ಮತ್ತೆ ಹೋ ಪ್ರಸಾದ್..ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಹೊರದೇಶದವರು ಕರೆದು ಗೌರವ ಡಾಕ್ಟರೇಟ್ ನೀಡಿದ್ದಾರೆ ಎಂದು ಮಾತಾಡತೊಡಗಿದರು.
ನಕಲಿ ವಿಶ್ವವಿದ್ಯಾಲಯಗಳ ಬಗ್ಗೆ ಎಚ್ಚರಿಕೆ|
ಭಾರತದ ಯುಜಿಸಿಗೆ ಪತ್ರ ಬರೆದ ಶ್ರೀಲಂಕಾ|
ನಕಲಿ ಗೌರವ ಡಾಕ್ಟರೇಟ್ ನೀಡಿದ ಮೆಡಿಸಿನಾ ಅಲ್ಟರನೆಟಿವಾ ಎಂಬ ನಕಲಿ ವಿಶ್ವವಿದ್ಯಾಲಯವು ತನ್ನ ಕೇಂದ್ರ ಕಚೇರಿ ಶ್ರೀಲಂಕಾದಲ್ಲಿದೆ ಎಂದು ತನ್ನ ವೆಬ್ಸೈಟ್ನಲ್ಲಿ ಹೇಳುತ್ತದೆ.
ಈ ನಕಲಿ ವಿಶ್ವವಿದ್ಯಾಲಯಕ್ಕೆ ಶ್ರೀಲಂಕಾ ದೇಶದ ಯುಜಿಸಿ ಮಾನ್ಯತೆ ನೀಡಿಲ್ಲ. ಮತ್ತು ವಿಶೇಷ ಅಂದರೇ ಈ ಮೆಡಿಸಿನಾ ಅಲ್ಟರನೆಟಿವಾ ನಕಲಿ ವಿಶ್ವವಿದ್ಯಾಲಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಭಾರತದ ಯುಜಿಸಿಗೆ ಪತ್ರ ಬರೆದು ತಿಳಿಸಿದೆ.
ಶ್ರೀಲಂಕಾದ್ದು ಎಂದು ಹೇಳಿ ಭಾರತದಲ್ಲಿ ಇವರು ನೀಡುವ ಪದವಿಗಳು, ಗೌರವ ಡಾಕ್ಟರೇಟ್ಗಳಿಗೆ ಯಾವುದೇ ಮಾನ್ಯತೆ ಇರುವದಿಲ್ಲ ಎಂದು ಭಾರತದ ಯುಜಿಸಿ ಸಹ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಅದೇ ರೀತಿ ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಯುಜಿಸಿ ಪತ್ರ ಬರೆದು ಸಹ ಎಚ್ಚರವಹಿಸಲು ತಿಳಿಸಿದೆ.
ನಕಲಿ ಗೌರವ ಡಾಕ್ಟರೇಟ್ ದಂಧೆ|
ದಂಧೆ ಮಾಡೋರಿಗೆ ಏನು ಶಿಕ್ಷೆ?
ಪದವಿ ಪಡೆದವರಿಗೆ ಯಾವ ಶಿಕ್ಷೆ|
ಭಾರತದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪನೆಗೆ (united grant commisson) ಯುಜಿಸಿ ಮಾನ್ಯತೆ ಇರಬೇಕು. ಎಲ್ಲವೂ ಸರ್ಕಾರದ ನಿಯಮಾವಳಿ ಪ್ರಕಾರವೇ ವಿವಿಗಳು ಕಾರ್ಯನಿರ್ವಹಿಸಬೇಕು.
ಅದೇ ರೀತಿ ಮಾನ್ಯತೆ ಇಲ್ಲದೇ ಕಾರ್ಯನಿರ್ವಹಿಸಿದರೇ ಅದಕ್ಕೆ ಏನು ಶಿಕ್ಷೆ ಎಂಬುದು ಸಹ ನಮ್ಮ ಭಾರತದ ದಂಡಸಂಹಿತೆ ತನ್ನ ಕಾಯ್ದೆಯಲ್ಲಿ ತಿಳಿಸುತ್ತದೆ.

ಆದರೆ ಇದ್ಯಾವುದು ಈ ನಕಲಿ ವಿಶ್ವವಿದ್ಯಾಲಯಗಳಿಗೆ ಬೇಕೇ ಆಗಿಲ್ಲ. ದುಡ್ಡು ಮಾಡುವುದು ಒಂದೇ ಗುರಿ ಇಟ್ಟುಕೊಂಡ ಈ ನಕಲಿ ವಿವಿಗಳು ಏಜೆಂಟರು, ಈ ಪ್ರಸಾದ್ನಂತಹ ಪ್ರಚಾರಪ್ರಿಯ ತೆವಲು ಗಿರಾಕಿಗಳು ಭಾರತದಲ್ಲಿ ಊರಿಗೆ ಹತ್ತು ಜನ ಸಿಗುತ್ತಾರೆ.
ಹೀಗಾಗಿ ಏಜೆಂಟರ್ ಮುಖಾಂತರ ಸಮಾಜಸೇವೆ ಪೋಸು ಕೊಡುವ ಢೋಂಗಿಗಳನ್ನು ಹೆಕ್ಕಿ ತೆಗೆದು ವರುಷವಿಡಿ ಒಂದಿಲ್ಲೊಂದು ಕಡೆ ಹೊಟೇಲ್ಗಳಲ್ಲಿ ಕಾರ್ಯಕ್ರಮ ಏರ್ಪಡಿಸಿ, ನಕಲಿ ಗೌರವ ಡಾಕ್ಟರೇಟ್ ನೀಡುತ್ತಾರೆ.
ಈ ರೀತಿ ಒಂದೆಡೆ ನಕಲಿ ಪದವಿ ನೀಡುವುದು, ಇನ್ನೊಂದೆಡೆ ಬಹಿರಂಗವಾಗಿ ಪದವಿ ಪ್ರಧಾನ ಕಾರ್ಯಕ್ರಮ ಏರ್ಪಡಿಸುವದು ಭಾರತೀಯ ದಂಡಸಂಹಿತೆ ಪ್ರಕಾರ ಅಪರಾಧವಾಗಿದೆ.

ಮೈಸೂರಿನಲ್ಲಿ ಇದೇ ರೀತಿ ಕಾರ್ಯಕ್ರಮ ನಡೆದಾಗ ಕರ್ನಾಟಕದ ಶಾಸಕನೋರ್ವ ಸೇರಿದಂತೆ ನೂರಾರು ಜನರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ( ಈ ಸುದ್ದಿಯನ್ನು ಪ್ರತ್ಯೇಕವಾಗಿ ಪ್ರಕಟಿಸುತ್ತೇನೆ)
ಒಂದು ವೇಳೆ ಪ್ರಸಾದ್ ನಕಲಿ ಪದವಿ ಸ್ವೀಕರಿಸುವಾಗ ಪೊಲೀಸ್ ದಾಳಿ ನಡೆದಿದ್ದರೇ ಜೈಲಿಗೆ ಸೇರುವ ಎಲ್ಲ ಸಾಧ್ಯತೆ ಇತ್ತು. ಆದರೆ ಅಲ್ಲಿಂದ ಪಾರಾಗಿ ಬಂದಿದ್ದ ಈ ಪ್ರಸಾದ್.
ಬಳಿಕ ತಾನು ಪಡೆದಿದ್ದೇ ನಕಲಿ ಗೌರವ ಡಾಕ್ಟರೇಟ. ಹೀಗಾಗಿ ಮುಂದೆ ಆಗುವ ಅನಾಹುತದಿಂದ ಪಾರಾಗಲು ಈ ಕಳ್ಳ ತಾನು ಸ್ವೀಕರಿಸುತ್ತಿರುವ ಗೌ.ಡಾ. ಪದವಿ ಪ್ರಧಾನದ ಚಿತ್ರಗಳನ್ನು ಸೋಶಿಯಲ್ ಮಿಡಿಯಾದಿಂದ ಡಿಲಿಟ್ ಮಾಡಿದ್ದಾನೆ.
ಇದರ ಜೊತೆ ಡಾಕ್ಟರ್ ಅಂತ ಬಳಸುವದನ್ನು ಬಿಟ್ಟಿದ್ದರೇ ಈತ ಸೇಫ್ ಆಗಿ ಬಿಡುತ್ತಿದ್ದ. ಆದರೆ ಪ್ರಚಾರದ ತೆವಲು ಕೇಳಬೇಕಲ್ಲ. ಕಳೆದ ಹಲವು ವರುಷಗಳಿಂದ ನಿರಂತರವಾಗಿ ಡಾಕ್ಟರ್ ಎಂದು ಹೆಸರಿನ ಹಿಂದೆ ಬಳಕೆ ಮಾಡಿದ್ದು ಈಗ ಆತನಿಗೆ ಮುಳುವು ಆಗಿ ಪರಿಣಮಿಸಿದೆ.ಈವರೆಗೆ ಗೊತ್ತಾಗಿಲ್ಲ.
ನಕಲಿ ಗೌರವ ಡಾಕ್ಟರೇಟ್ ಪಡೆದವರಿಗೆ,
ಭಾರತೀಯ ದಂಡಸಂಹಿತೆಯಲ್ಲಿ ಯಾವ ಶಿಕ್ಷೆ!
ಯುಜಿಸಿ ಹಾಗು ಭಾರತೀಯ ದಂಡಸಂಹಿತೆ ಪ್ರಕಾರ, ನಕಲಿ ವಿವಿಗಳಿಂದ ಭಾರತದ ವ್ಯಕ್ತಿಗಳು ಗೌರವ ಡಾಕ್ಟರೇಟ್ ಪಡೆದರೇ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸುವದಿಲ್ಲ. ಇವರಿಗೆ ಆ ನಕಲಿ ವಿವಿಯವರು ಮೋಸ ಮಾಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
ವೆಬ್ಸೈಟ್ ಒಂದರಲ್ಲಿ ನಕಲಿ ಗೌ.ಡಾ. ವಿಎಸ್ವಿ ಪ್ರಸಾದ್ ನ ಬಯೋಡಾಟಾ ಅನ್ನು ಜುಲೈ 2020ರಲ್ಲಿ ಪ್ರಕಟಿಸಲಾಗಿದೆ.ಅದರಲ್ಲಿ ವಿಎಸ್ವಿ ಪ್ರಸಾದ್ ಅವರಿಗೆ ಯಾವ ವಿವಿ ಗೌರವ ಡಾಕ್ಟರೇಟ್ ನೀಡಿದೆ ಎಂದು ತಿಳಿಸಿದೆ. ಅದರ ಯಥಾವತ್ತು ಈ ಕೆಳಗಿನಂತಿದೆ.
With his immense success in all the verticals, Dr. Prasad has been honored with Doctorate in Construction Industries by the Senate and the Board of Directors of the University of Medicina Alternativa affiliated to The Open International University for Complimentary Medicines, Colombo, Sri Lanka.
ಆದರೆ ಹೀಗೆ ನಕಲಿ ವಿವಿಗಳಿಂದ ಪಡೆದ ಗೌರವ ಡಾಕ್ಟರೇಟ್ ಅನ್ನು ಪಡೆದ ನಂತರ ಅದರ ಪ್ರಚಾರ ಪಡೆದರೇ ಅಥವಾ ತಮ್ಮ ಹೆಸರಿನ ಹಿಂದೆ ಡಾ.ಎಂದು ಬರೆದರೇ ಭಾರತೀಯ ದಂಡಸಂಹಿತೆ ಪ್ರಕಾರ ಶಿಕ್ಷೆ ವಿಧಿಸಲು ಕಾಯ್ದೆ ರೂಪಿಸಲಾಗಿದೆ.
ಈ ಎಲ್ಲ ನಿಯಮಾವಳಿಗಳನ್ನು ನೋಡಿದಾಗ ಈ ಘಟಿಂಗ ಪ್ರಸಾದ್ ಜೈಲಿಗೆ ಹೋಗುವಂತಹ ಅಪರಾಧ ಮಾಡಿದ್ದು ಈಗ ಸಾಬೀತಾಗಿದೆ.

ಅದು ಹೇಗೆಂದರೇ, ಈಗ ವರುಷಗಳ ಹಿಂದೆ ನಕಲಿ ಗೌರವ ಡಾಕ್ಟರೇಟ್ ಪಡೆದಿದ್ದಕ್ಕಾಗಿಯೇ ಹಲವು ಸಂಘಟನೆಗಳು ಈ ಪ್ರಸಾದನನ್ನು ಕರೆದು ಸನ್ಮಾನ ಮಾಡಿದ್ದಾರೆ.
ಇದಕ್ಕಿಂತ ಮುಂದೆ ಹೋಗಿ ವರುಷಗಳ ಕಾಲ ತನ್ನ ಹೆಸರಿನ ಹಿಂದೆ ಡಾ.ಪ್ರಸಾದ್ ಎಂದು ಬರೆದುಕೊಂಡು ಪ್ರಚಾರ ಪಡೆದಿದ್ದಾನೆ.
ಇದಕ್ಕೆ ಸಾಕ್ಷಿಯಾಗಿ ವರುಷಗಳ ಕಾಲ ಪತ್ರಿಕೆಗಳಲ್ಲಿ ಬಂದ ಸುದ್ದಿಗಳಲ್ಲಿ ವೆಬ್ಸೈಟ್ಗಳಲ್ಲಿ , ಆಮಂತ್ರಣ ಪತ್ರಿಕೆಗಳಲ್ಲಿ ಡಾ.ವಿಎಸ್ವಿ ಪ್ರಸಾದ್ ಎಂದು ನಮೂದಾಗಿದೆ. ಈತನ ಅಪರಾಧ ಸಾಬೀತಾಗಲಿಕ್ಕೆ ಇಷ್ಟು ದಾಖಲೆ ಸಾಕು.
ಹೀಗಾಗಿ ಹುಬ್ಬಳ್ಳಿಯ ಸಾಮಾನ್ಯ ನಾಗರಿಕರು ಒಂದು ಸಣ್ಣ ದೂರನ್ನು ನೀಡಿದರೂ ಈ ನಕಲಿ ಡಾಕ್ಟರ್ ಪ್ರಸಾದ್ ನೇರವಾಗಿ ರಾಜನಗರ ಜೈಲಿಗೆ ಹೋಗೋದು ಗ್ಯಾರಂಟಿ.
ಈತನ ಇನ್ನಷ್ಟು ಡ್ರಾಮಾಗಳಿಗೆ ಕಡಿವಾಣ ಹಾಕುವ ಉದ್ದೇಶ ಸರ್ಕಾರಕಿದ್ದರೇ ಈತ ಅದು ಹೇಗೇ ನಕಲಿ ಗೌರವ ಡಾಕ್ಟರೇಟ್ ಪಡೆದ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕಿದೆ. ಆ ಮೂಲಕ ಈ ನಕಲಿ ವಿವಿಗಳನ್ನು ಮಟ್ಟ ಹಾಕಬೇಕಿದೆ.

ಹುಬ್ಬಳ್ಳಿ ಧಾರವಾಡ ಖಡಕ ಪೊಲೀಸ್ ಕಮೀಶನರ್ ಶಶಿಕುಮಾರ್ ಅವರು ಮನಸ್ಸು ಮಾಡಿದರೇ ಈ ನಕಲಿ ವಿವಿ ದಂಧೆಯ ಹಿಂದೆ ಯಾರಿದ್ದಾರೆ? ಹುಬ್ಬಳ್ಳಿಯಲ್ಲಿ ಇನ್ನು ಎಷ್ಟು ಜನರು ಫೇಕ್ ಗೌರವ ಡಾಕ್ಟರೇಟ್ ಪಡೆದವರು ಇದ್ದಾರೆ ಎಂಬುದನ್ನು ಪತ್ತೆ ಮಾಡೋದು ಅಂತಹ ಕಷ್ಟದ ಕೆಲಸವೆನಲ್ಲ.
ಈ ನಕಲಿ ಡಾಕ್ಟರ್ ವಿಎಸ್ವಿ ಪ್ರಸಾದ್ನ ಹೆಡೆಮುರಿ ಕಟ್ಟಿದರೇ ಸಾಕು. ಆತನ ಅಸಲಿ ಮುಖವು ಸಹ ಅನಾವರಣಗೊಳ್ಳಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ಆ ಮೂಲಕ ರಾಜ್ಯದಲ್ಲಿ ಹರಡಿರುವ ಶೈಕ್ಷಣಿಕ ಜಗತ್ತಿನ ಮಾಫಿಯಾ ತಮ್ಮಿಂದಲೇ ಅಂತ್ಯವಾಗಬೇಕು.
ವರದಿ: ಇನವೆಸ್ಟಿಗೇಟಿವ್ ಟೀಮ್
ನ್ಯೂಇಂಡಿಯಾ ಕನ್ನಡ
ಬೆಂಗಳೂರು.

ಶ್ರಮಿಕರ ಹಕ್ಕು-ಮೋದಿ ಸರ್ಕಾರದ ಗುರಿ


Advertisement








