KarnatakaShivamoggaಶಿವಮೊಗ್ಗ ದಸರಾ-2026
ವಿಜೃಂಭಣೆಯಿಂದ ನಡೆಯುತ್ತಿರುವ ಶಿವಮೊಗ್ಗ ದಸರಾ-2026|ಶುಕ್ರವಾರದ ಕಾರ್ಯಕ್ರಮದ ಸಂಪೂರ್ಣ ಮಾಹಿತಿ
ರಂಗದಸರಾ: "ನಾಟಕ ಮೃತ್ಯು" ಸಂಜೆ 7 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನವಿದೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಶಿವಮೊಗ್ಗ-ದಸರಾ-2026 ರ ಕಾರ್ಯಕ್ರಮದನ್ವಯ ಶುಕ್ರವಾರದಂದು ನಡೆಯುವ ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತೇ ಇದೆ.
- ಆಹಾರದಸರಾ ಕಾರ್ಯಕ್ರಮ: ವೀರಶೈವ ಕಲ್ಯಾಣಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಆಹಾರ ದಸರಾ ಅಂಗವಾಗಿ ವಿವಿಧ ಬಗೆಯ ಅಡುಗೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿದೆ. ಆಹಾರ ನಾಗರೀಕ ಸರಬರಾಜು ಇಲಾಖೆ ಶಿವಮೊಗ್ಗ ಉಪನಿರ್ದೇಶಕ ಸತೀಶ್ ಉದ್ಘಾಟಿಸಲಿದ್ದಾರೆ.
- ಸಂಜೆ 7.30 ಕ್ಕೆ ಅಲ್ಲಮಪ್ರಭು ಮೈದಾನದಲ್ಲಿ ರಂಗಗೀತೆ ಗಾಯನ ಮತ್ತು ನೃತ್ಯರೂಪಕ ಹಾಗೂ ಗೀತಾ ಭತ್ತದ್ ತಂಡದಿಂದ ಗೀತಸಂಭ್ರಮ ಕಾರ್ಯಕ್ರಮ ಜರುಗಲಿದೆ. ಸ್ಥಳೀಯ ಲೆಕ್ಕಪರಿಶೋಧನಾ ಇಲಾಖೆ ಜಂಟಿ ನಿರ್ದೇಶಕರು ಗೀತಾ ಎನ್ ಯರೇಶಿಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
- ಚಲನಚಿತ್ರ ದಸರಾ ಅಂಗವಾಗಿ ಇಂದು ಬೆಳಿಗ್ಗೆ 10 ಗಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಡಾ.ರಾಜ್ಕುಮಾರ್ ಅಭಿನಯದ “ಸಂಪತ್ತಿಗೆ ಸವಾಲ್” ಚಲನಚಿತ್ರ ಪ್ರದರ್ಶನವಿದೆ.
- ಗಮಕ ದಸರಾ: ಬೆಳಿಗ್ಗೆ 9.30 ರಿಂದ 10. 30ರ ವರೆಗೆ ಗಮಕ ದಸರಾ ಕಾರ್ಯಕ್ರಮ ಎಸ್ ಆರ್ ಎನ್ ಎಂ ಕಾಲೇಜಿನಲ್ಲಿ ನಡೆಯಲಿದ್ದು ಮಾಜಿ ಶಾಸಕ ವೈ.ಎಸ್.ವಿ ದತ್ತಾ ಗಮಕ ವ್ಯಾಖ್ಯಾನ ಮಾಡಲಿದ್ದಾರೆ. ಸುಬ್ರಮಣ್ಯ ಶಾಸ್ತ್ರಿ, ಡಿ ಆರ್ ಆಶ್ವಥ್ ನಾರಾಯಣ ಶೆಟ್ಟಿ ಉಪಸ್ಥಿತರಿರುವರು.
- ಯುವ ದಸರಾ: ಸಿಟಿ ಸೆಂಟರ್ ಮಾಲ್ ನಲ್ಲಿ ಅ.16 ಸಂಜೆ 5 ಗಂಟೆಗೆ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ನಡೆಯಲಿದೆ. ಲೋಕೋಪಯೋಗಿ ಇಲಾಖೆ ಅಭಿಯಂತರ ಗಣೇಶ್ ಉದ್ಘಾಟಿಸಲಿದ್ದಾರೆ.
- ರಂಗದಸರಾ: “ನಾಟಕ ಮೃತ್ಯು” ಸಂಜೆ 7 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನವಿದೆ.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







