DistrictShivamogga

ಮೋದಿ ನೇತೃತ್ವದ ಸರ್ಕಾರಕ್ಕೆ 12 ವರುಷದ ಸಂಭ್ರಮ|ವಾರ್ಡ್‌ ಮಟ್ಟದಲ್ಲಿ ಶಾಸಕರ ವಾಸ್ತವ್ಯ, ಸಂವಾದ|ಜನ ಕಲ್ಯಾಣ ಯೋಜನೆಗಳನ್ನು ತಲುಪಿಸಲು ಬದ್ಧ-ಚನ್ನಬಸಪ್ಪ

ಬೂತ್ ವ್ಯಾಸ್ತವ್ಯದ ಅಂಗವಾಗಿ ಆಶ್ರಯ ಲೇಔಟ್‌ನ ಮಹಿಳಾ ಪ್ರಮುಖರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಶಾಸಕ ಚೆನ್ನಬಸಪ್ಪ ಸಂವಾದ ನಡೆಸಿದರು.

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 12 ವರ್ಷಗಳ ಅವಧಿಯಲ್ಲಿ ಕೈಗೊಂಡಿರುವ ಜನಕಲ್ಯಾಣ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಲು ಶ್ರಮಿಸುವದಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಜನಸೇವೆ ಮತ್ತು ಪ್ರಗತಿ’ಯ 12 ವರ್ಷಗಳನ್ನು ಪೂರೈಸಿದ ಸಂದರ್ಭದ ಅಂಗವಾಗಿ ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ಸೋಮವಾರದಂದು ಹಮ್ಮಿಕೊಂಡಿದ್ದ ವಿಶ್ವಾಸ, ಅಭಿವೃದ್ಧಿ ಹಾಗೂ ಜನಕಲ್ಯಾಣದ ಸಂಭ್ರಮದ “ಎರಡು ದಿನಗಳ ವಿಶೇಷ ಬೂತ್ ವಾಸ್ತವ್ಯ” ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ಅಭಿಯಾನದ ಮೊದಲ ದಿನದಂದು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 01ರ ಬೂತ್ ಸಂಖ್ಯೆ 26ರ ಅಧ್ಯಕ್ಷೆ ಶ್ರೀಮತಿ ಶಾಂತಮ್ಮ ಅವರ ನಿವಾಸದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ವಾಸ್ತವ್ಯ ಹೂಡಿದರು.

ವಾಸ್ತವ್ಯಕ್ಕೂ ಮುನ್ನ ವಾರ್ಡ್ ನಂಬರ್ 01ರ ಶ್ರೀ ಓಂ ಶಕ್ತಿ ಮತ್ತು ಮುತ್ತು ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇಶ ಮತ್ತು ನಾಡಿನ ಒಳಿತಿಗಾಗಿ ಕಾರ್ಯಕರ್ತರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೂತ್ ವ್ಯಾಸ್ತವ್ಯದ ಅಂಗವಾಗಿ ಆಶ್ರಯ ಲೇಔಟ್‌ನ ಮಹಿಳಾ ಪ್ರಮುಖರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಶಾಸಕ ಚೆನ್ನಬಸಪ್ಪ ಸಂವಾದ ನಡೆಸಿದರು.

ಬಳಿಕ ಆಶ್ರಯ ಬಡಾವಣೆಯ ಪ್ರಮುಖ ಮಂಜುನಾಥ್ ಅವರ ನಿವಾಸದಲ್ಲಿ ಕ್ಷೇತ್ರದ ಗಣ್ಯರು ಹಾಗೂ ಕೀ-ವೋಟರ್ಸ್ ಜೊತೆ ಶಿವಮೊಗ್ಗದ ಪ್ರಗತಿಯ ಕುರಿತು ಸಮಾಲೋಚನೆ ನಡೆಸಿದರು.

ಬಳಿಕ ವಾರ್ಡ್ ನಂಬರ್ 02ರ ಬೂತ್ ಸಂಖ್ಯೆ 27ರ ಬೂತ್ ಅಧ್ಯಕ್ಷ ಶಿವಶಂಕರ್ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಎಸ್.ಎನ್. ಚನ್ನಬಸಪ್ಪ , ಮುಂಬರುವ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು.

ವಾಸ್ತವ್ಯದ ಕೊನೆಯ ಹಂತವಾಗಿ ಬೂತ್ ಅಧ್ಯಕ್ಷೆ ಶ್ರೀಮತಿ ಶಾಂತಮ್ಮ ಅವರ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿದರು.

ಅಭಿಯಾನದಲ್ಲಿ ಭಾಜಪ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಜ್ಞಾನೇಶ್ವರ್, ನಾಗರಾಜ್, ಪ್ರಮುಖರಾದ ಪ್ರಭಾಕರ್, ಮಂಜುನಾಥ ನವಲೆ, ಪ್ರದೀಪ್ ಹೊನ್ನಪ್ಪ, ದೀನ್ ದಯಾಳ್, ಶ್ರೀಮತಿ ಆಶಾ ಚಂದ್ರಪ್ಪ, ಚಂದ್ರಪ್ಪ, ಲಕ್ಷ್ಮಿಕಾಂತ್ ಭಟ್, ಕುಮಾರ್ ಗಾಡಿ ಕೊಪ್ಪ, ರವೀಂದ್ರ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Follow Us

Leave a Reply

Your email address will not be published. Required fields are marked *

Back to top button