ರಾಹುಲ್ ಗಾಂಧಿ ಆಪ್ತನಿಗೆ ಎರಡು ಮಹತ್ತರ ಜವಾಬ್ದಾರಿ| “ಛಾತ್ರೋಂ ಕಿ ಗೂಂಜ್” ಅಭಿಯಾನದ ವೀಕ್ಷಕರಾಗಿ, ಹಾಗೂ”ಸಂಘಟನ ಸೃಜನ ಅಭಿಯಾನ” ಸಹಯೋಜಕರಾಗಿ ಶಾಕೀರ್ ಸನದಿ ನೇಮಕ|
ವಿದ್ಯಾರ್ಥಿಗಳು ತಮ್ಮ ಅನುಭವಗಳು, ಸಮಸ್ಯೆಗಳು ಮತ್ತು ಆಶಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವ ಜೊತೆಗೆ, "ಛಾತ್ರೋಂ ಕಿ ಗೂಂಜ್" ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಶಾಕೀರ್ ಸನದಿ ಮನವಿ ಮಾಡಿದ್ದಾರೆ.

“ಛಾತ್ರೋಂ ಕಿ ಗೂಂಜ್” ಅಭಿಯಾನದ ವೀಕ್ಷಕರನ್ನಾಗಿ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ ಅವರನ್ನು ನೇಮಕ ಮಾಡಿ ಎಐಸಿಸಿ ಅಧಿಕೃತ ಆದೇಶ ಹೊರಡಿಸಿದೆ.
ಈ ಮಧ್ಯೆ ಕೆಪಿಸಿಸಿ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ “ಸಂಘಟನ ಸೃಜನ ಅಭಿಯಾನ”ದಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಸಹಯೋಜಕರಾಗಿ ಜವಾಬ್ದಾರಿ ನೀಡಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆದೇಶ ಹೊರಡಿಸಿದ್ದಾರೆ.
“ಛಾತ್ರೋಂ ಕಿ ಗೂಂಜ್” ಅಭಿಯಾನ|
ರಾಹುಲ್ ಗಾಂಧಿ ಆಪ್ತನಿಗೆ ಮಹತ್ತರ ಜವಾಬ್ದಾರಿ|

“ಛಾತ್ರೋಂ ಕಿ ಗೂಂಜ್” ಅಭಿಯಾನದ ಅಂಗವಾಗಿ ದೇಶದ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ, ಪ್ರಶ್ನೆಪತ್ರ ಸೋರಿಕೆ, ಪರೀಕ್ಷೆಗಳ ವಿಳಂಬ, ನೇಮಕಾತಿಯಲ್ಲಿನ ಅನಿಶ್ಚಿತತೆ, ಹೆಚ್ಚುತ್ತಿರುವ ಶಿಕ್ಷಣ ವೆಚ್ಚ ಹಾಗೂ ನಿರುದ್ಯೋಗ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಆಲಿಸುವದಾಗಿದೆ ಎಂದು ಅಭಿಯಾನದ ವೀಕ್ಷಕರಾಗಿ ನೇಮಕಗೊಂಡಿರುವ ಕಾಂಗ್ರೆಸ್ ಮುಖಂಡ ಹಾಗೂ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸುವುದು ಮುಖ್ಯ ಗುರಿ ಇಟ್ಟುಕೊಂಡಿರುವ ಈ ಅಭಿಯಾನದ ಯಶಸ್ವಿಗೆ ಹಗಲಿರಳು ಶ್ರಮಿಸುವದಾಗಿ ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಸಂವಾದ|
ತಮ್ಮ ಜವಾಬ್ದಾರಿಯ ಅಂಗವಾಗಿ ಹಾಸನ ಜಿಲ್ಲೆಯ ಕಾಲೇಜುಗಳು, ವಿಶ್ವವಿದ್ಯಾಲಯಗಳು, ತರಬೇತಿ ಕೇಂದ್ರಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದೇನೆ ಎಂದು ಶಾಕೀರ್ ಸನದಿ ತಿಳಿಸಿದರು.

ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಅಭಿಯಾನದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದೇನೆ ಎಂದು ಶಾಕೀರ್ ಸನದಿ ಹೇಳಿದರು.

ವಿದ್ಯಾರ್ಥಿಗಳು ತಮ್ಮ ಅನುಭವಗಳು, ಸಮಸ್ಯೆಗಳು ಮತ್ತು ಆಶಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವ ಜೊತೆಗೆ, “ಛಾತ್ರೋಂ ಕಿ ಗೂಂಜ್” ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಶಾಕೀರ್ ಸನದಿ ಮನವಿ ಮಾಡಿದ್ದಾರೆ.
ಮುಖಂಡರಿಗೆ ಕೃತಜ್ಞತೆ|
ಬದ್ಧತೆಯಿಂದ ಕಾರ್ಯನಿರ್ವಹಣೆ|
ಮಹತ್ತರ ಜವಾಬ್ದಾರಿ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರಿಗೆ ಮುಖಂಡ ಶಾಕೀರ ಸನದಿ, ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.




ಎರಡೂ ಜವಾಬ್ದಾರಿಗಳನ್ನು ಪಕ್ಷದ ಆಶಯಗಳಿಗೆ ಅನುಗುಣವಾಗಿ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯಿಂದ ನಿರ್ವಹಿಸುತ್ತೇನೆ ಎಂದಿದ್ದಾರೆ.
ವಿದ್ಯಾರ್ಥಿಗಳ ಧ್ವನಿಯನ್ನು ಬಲಪಡಿಸುವುದರ ಜೊತೆಗೆ ಕಾಂಗ್ರೆಸ್ ಸಂಘಟನೆಯನ್ನು ತಳಮಟ್ಟದಲ್ಲಿ ಇನ್ನಷ್ಟು ಸದೃಢಗೊಳಿಸಲು ಸಂಪೂರ್ಣ ಬದ್ಧತೆಯಿಂದ ಕಾರ್ಯನಿರ್ವಹಿಸುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ ತಿಳಿಸಿದ್ದಾರೆ.
ವರದಿ: ವಿಜಯೀಂದ್ರ ಪಿ.ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.







