KarnatakaShivamogga

“ಎಐ”ನ ಅತೀವ ಬಳಕೆ ಪರಿಣಾಮ|ಮಾಧ್ಯಮದಲ್ಲಿಯು ಉದ್ಯೋಗ ಕಡಿತ ಸಾಧ್ಯತೆ|ಯುವ ಪತ್ರಕರ್ತರಲ್ಲಿ ಕಲಿಕಾ ಮಟ್ಟ ಕುಸಿತ-ಸುದರ್ಶನ ಚನ್ನಂಗಿಹಳ್ಳಿ

ಎಐ ಪ್ರಭಾವ ಮತ್ತು ಸೋಶಿಯಲ್ ಮೀಡಿಯಾ ಭರಾಟೆಯಲ್ಲಿನ ತಂತ್ರಜ್ಞಾನ ಹೊಸತನಕ್ಕೆ ಹೊಂದಿಕೊಂಡರೇ ಮಾತ್ರ ಭವಿಷ್ಯದಲ್ಲಿ ಪತ್ರಕರ್ತರು ಅಸ್ತಿತ್ವ ಉಳಿಸಿಕೊಳ್ಳಬಹುದಾಗಿದೆ ಎಂದು ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ್ ಚೆನ್ನಂಗಿಹಳ್ಳಿ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಒಂದೆಡೆ ಯುವ ಪತ್ರಕರ್ತರಲ್ಲಿ ಕಲಿಕಾ ಮಟ್ಟ ಕುಸಿಯುತ್ತಿದ್ದರೇ, ಇನ್ನೊಂದೆಡೆ ಪ್ರಜ್ಞಾವಂತರ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಜಯ ಕರ್ನಾಟಕ ಪತ್ರಿಕೆ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಕಳವಳ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿದ ಪತ್ರಿಕಾ ಭವನದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಓದುವ ಮತ್ತು ಕಲಿಯುವ ಆಸಕ್ತಿ ಇಂದಿನ ಯುವ ಪತ್ರಕರ್ತರು ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.

“ಎಐ” ಇಂದು ಎಲ್ಲಾ ಕ್ಷೇತ್ರವನ್ನು ಆವರಿಸಿಕೊಂಡುಬಿಟ್ಟಿದೆ. ಮುಂಬರುವ ದಿನಗಳಲ್ಲಿ “ಎಐ” ನ ಅತೀವ ಬಳಕೆಯ ಪರಿಣಾಮ, ಎಲ್ಲ ಕ್ಷೇತ್ರದಲ್ಲಿಯು ಉದ್ಯೋಗ ಅವಕಾಶಗಳನ್ನು ಕಡಿತಗೊಳ್ಳಲಿದೆ.

ಇದಕ್ಕೆ ಮಾಧ್ಯಮ ಕ್ಷೇತ್ರ ಹೊರತಾಗಿಲ್ಲ ಎಂದು ಸುದರ್ಶನ ಚನ್ನಂಗಿಹಳ್ಳಿ ಆತಂಕ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ವಿಜಯ್‌ ಕರ್ನಾಟಕ ಸಂಪಾದಕ ಸುದರ್ಶನ್‌ ಚೆನ್ನಂಗಿಹಳ್ಳಿ, ಸಿ.ಎಸ್‌,ಷಡಾಕ್ಷರಿ, ಎನ್‌.ಮಂಜುನಾಥ್‌, ನಾಗರಾಜ್‌ ನೇರಿಗೆ ಇದ್ದಾರೆ.

ಪತ್ರಕರ್ತರು ಹೊಸತನಕ್ಕೆ ತೆರೆದುಕೊಂಡರೆ ಅವಕಾಶಗಳು ಇದ್ದೇ ಇರುತ್ತವೆ. ಕೌಶಲ್ಯವನ್ನು ಪ್ರತಿಯೊಬ್ಬರು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಐ ಪ್ರಭಾವ ಮತ್ತು ಸೋಶಿಯಲ್ ಮೀಡಿಯಾ ಭರಾಟೆಯಲ್ಲಿನ ತಂತ್ರಜ್ಞಾನ ಹೊಸತನಕ್ಕೆ ಹೊಂದಿಕೊಂಡರೇ ಮಾತ್ರ ಭವಿಷ್ಯದಲ್ಲಿ ಪತ್ರಕರ್ತರು ಅಸ್ತಿತ್ವ ಉಳಿಸಿಕೊಳ್ಳಬಹುದಾಗಿದೆ ಎಂದು ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ್ ಚೆನ್ನಂಗಿಹಳ್ಳಿ ಅಭಿಪ್ರಾಯಪಟ್ಟರು.

ಎಐ ಚಿತ್ರ

ಒಂದು ಕಾಲದಲ್ಲಿ ಕಂಪೂಟರೀಕರಣಕ್ಕೆ ಪತ್ರಕರ್ತರು, ಸರ್ಕಾರಿ ನೌಕರರು ವಿರೋಧಿಸಿದ್ದ ದಿನಗಳಿದ್ದವು ಎಂಬುದನ್ನು ಸ್ಮರಿಸಿದ ಅವರು, ಸೋಷಿಯಲ್ ಮೀಡಿಯಾ ಬಂದ ಮೇಲೆ ಪ್ರತಿಯೊಬ್ಬರು ಪತ್ರಕರ್ತರಾಗಿದ್ದಾರೆ. ಆದರೆ ಅಂತಹವರು ಜವಾಬ್ದಾರಿಯುತ ಪತ್ರಕರ್ತರಲ್ಲ ಎಂದು ಹೇಳಿದರು.

ಎಐ ಚಿತ್ರ

ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಳಕಳಿಯಿಂದ ಅರಿತು ವರದಿ ಮಾಡುವವರೇ ನೈಜ ಪತ್ರಕರ್ತರು ಎಂದು ಸುದರ್ಶನ ಚನ್ನಂಗಿಹಳ್ಳಿ ಹೇಳಿದರು.

ಇವತ್ತು ಸೋಷಿಯಲ್ ಮೀಡಿಯಾ ದುರುಪಯೋಗ ಹೆಚ್ಚಾಗತೊಡಗಿದೆ ಎಂದು ಆರೋಪಿಸಿದ ಅವರು, ಸಮಾಜದ ಮೇಲೆ ಇದರಿಂದ ಗಂಭೀರ ಪರಿಣಾಮವನ್ನು ಭೀರುತ್ತಿದೆ.

ಪ್ರತಿಯೊಬ್ಬ ವ್ಯಕ್ತಿಯನ್ನು ನಿಯಂತ್ರಿಸುವ ಮಟ್ಟಕ್ಕೆ ಸೋಷಿಯಲ್ ಮೀಡಿಯ ಸಾಗುತ್ತಿರುವುದು ಆತಂಕಕಾರಿ ವಿಷಯ ಎಂದು ಸುದರ್ಶನ ಚನ್ನಂಗಿಹಳ್ಳಿ ಕಳವಳ ವ್ಯಕ್ತಪಡಿಸಿದರು.

ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರೂ ಕ್ಷಣಮಾತ್ರದಲ್ಲಿ ನೋಡುವ ಅವಕಾಶವನ್ನು ಡಿಜಿಟಲ್ ಮಾಧ್ಯಮ ಒದಗಿಸಿಕೊಟ್ಟಿದೆ ಎಂದು ಸುದರ್ಶನ್ ಚೆನ್ನಂಗಿಹಳ್ಳಿ ಹೇಳಿದರು.

ಆದರೆ ಇದರ ಅನುಕೂಲತೆ ಜೊತೆ ದುರುಪಯೋಗವು ಹೆಚ್ಚಿದೆ. ಡಿಜಿಟಲ್ ಕ್ರಾಂತಿಯ ನಡುವೆ ಪತ್ರಿಕೆಗಳು ಇಂದಿಗೂ ವಿಶ್ವಾಸ ಉಳಿಸಿಕೊಂಡಿವೆ ಎಂದು ತಿಳಿಸಿದರು.

ಪ್ರಸಕ್ತ ಪತ್ರಕರ್ತರ ಮೇಲಿನ ಜವಾಬ್ದಾರಿ ಹೆಚ್ಚಾಗಿದ್ದು, ಜನಸಾಮಾನ್ಯರ ಧ್ವನಿಯಾಗಿ ನಾವು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹೊಂದಿರುವ ಸಭಾಂಗಣವನ್ನು ನೋಡಿದಾಕ್ಷಣ ದೇವಸ್ಥಾನ ನೋಡಿದ್ಹಾಗೆ ಆಯಿತು ಎಂದರು. ಬೆಂಗಳೂರಲ್ಲೂ ಇತರ ಸಭಾಂಗಣ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ‌, ರಾಜ್ಯದಲ್ಲಿರುವ ಪತ್ರಿಕಾ ಭವನಗಳ ಪೈಕಿ ಅತ್ಯಾಧುನಿಕ ಸುಸಜ್ಜಿತ ನವೀಕೃತ ಕಟ್ಟಡ ಹೊಂದಿರುವುದರಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಂಬರ್ ಒನ್ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಪ್ರೆಸ್ ಟ್ರಸ್ಟ್ ಮೇಲಂತಸ್ಥಿನ ಜಾಗ ಸದ್ಬಳಕೆಯಾಗುವ ನಿಟ್ಟಿನಲ್ಲಿ ಗೆಸ್ಟ್ ಗೌಸ್ ನಿರ್ಮಿಸಿ ದೂರದಿಂದ ಬರುವ ಪತ್ರಕರ್ತರ ವಾಸ್ತವ್ಯಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮುಂದೆ ಪ್ರಸ್ತಾಪ ಸಲ್ಲಿಸಿದರೇ ಅನುದಾನ ಕೊಡಿಸುವ ಭರವಸೆ ನೀಡಿದರು.

ಪತ್ರಿಕಾ ದಿನಾಚರಣೆಗೆ ಮಹತ್ವ ಬರುವಂತಾಗಲು ಪತ್ರಕರ್ತರು ಸಂಗ್ರಹಿಸಿದ ಸುದ್ದಿಯನ್ನ ಭಿತ್ತರಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ ಸಧೃಡ ಸಮಾಜಕ್ಕೆ ಅಗತ್ಯವಾದ ರೀತಿಯಲ್ಲಿ ಜವಾಬ್ದಾರಿಯುತವಾಗಿ ಸುದ್ದಿ ಬಿತ್ತರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಎನ್.ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ‌ ಮಾತನಾಡಿ, 42 ವರ್ಷ ತಾವು ಕಂಡಿರುವ ಪತ್ರಿಕೋದ್ಯಮ ಸವಿಸ್ತಾರವಾಗಿ‌ ವಿಕಸನಗೊಂಡಿದೆ ಎಂದು ಹೇಳಿದರು.

ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಸ್ತುನಿಷ್ಠ ಸುದ್ದಿಕೊಡುವ ಪತ್ರಿಕೆಗಳು ಇಂದಿಗೂ ಮಾಧ್ಯಮ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿದಿವೆ ಎಂದು ಹೇಳಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಸಜ್ಜನ, ಪ್ರತಿಭಾವಂತ ಪತ್ರಕರ್ತರು ಇದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಧೀಶರು ಸಹ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಆಡಳಿತ ವೈಖರಿ, ಕಾರ್ಯ ಚಟುವಟಿಕೆ ನೋಡಿ ಮೆಚ್ಚಿಕೊಂಡಿದ್ದಾರೆ.

ಸೇವಾ ಅವಧಿ, ಹಿರಿತನ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವನ್ನು ಮಾಡಿದ್ದೇವೆ.

ಟ್ರಸ್ಟ ಎಂದರೆ ನಂಬಿಕೆ. ಈ ನಂಬಿಕೆ ಉಳಿಸಿಕೊಂಡು ರಾಜ್ಯದಲ್ಲಿಯೇ ಮಾದರಿಯಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯನಿರ್ವಹಿಸಲಿದೆ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಎನ್.ಮಂಜುನಾಥ್ ಹೇಳಿದರು.

ಪತ್ರಿಕೋದ್ಯಮದಲ್ಲಿ ಹಲವಾರು ವರುಷ ಕೆಲಸ ಮಾಡಿ ಸಾಧನೆಗೈದ ಅನೇಕರನ್ನು ಸನ್ಮಾನಿಸಲಾಯಿತು.

ವಾರ್ತಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಬಿ.ಎಸ್.ತಿಮ್ಮೋಳಿ, ತುಂಗಾತರಂಗ ಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರ ಸ್ವಾಮಿ, ಸುವರ್ಣ ನ್ಯೂಸ್ ಹಿರಿಯ ವರದಿಗಾರರಾದ ರಾಜೇಶ್ ಕಾಮತ್, ದಿ ಹಿಂದೂ ಪತ್ರಿಕೆಯ ಛಾಯಾಗ್ರಹಕ ಎಸ್.ಕೆ.ದಿನೇಶ್, ಹೊಸದಿಂಗಂತ ಪತ್ರಿಯ ಮುದ್ರಣ ವಿಭಾಗದ ರಾಘವೇಂದ್ರ, ವಿಜಯ ಕರ್ನಾಟಕ ಪತ್ರಿಕೆ ( ಹಣಕಾಸು ವಿಭಾಗ) ಸಹಾಯಕ ವ್ಯವಸ್ಥಾಪಕ ಟಿ.ಸಿ.ಮಂಜುನಾಥ್, ನ್ಯೂಸ್ ಫಸ್ಟ್ ಸೀನಿಯರ್ ವಿಡಿಯೋ ಜರ್ನಲಿಸ್ಟ್ ಕೆ.ಎ.ಮಹೇಶ್, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸೀನಿಯರ್ ಮ್ಯಾನೇಜರ್ (ಮಾರ್ಕೇಟಿಂಗ್) ಡಿ.ಕೆ.ಕಾರ್ತಿಕ್, ಶಿವಮೊಗ್ಗ ಟೈಮ್ಸ್ ಪತ್ರಿಕೆ ಡಿಸೈನರ್ ಎಸ್.ಪಿ.ಶೋಭಾ, ಪತ್ರಿಕಾ ವಿತರಕ ವಿಭಾಗದ ಡಿ.ಶಿವಪ್ಪ ಅವರನ್ನು ಗಣ್ಯರು ಪ್ರಶಸ್ತಿ , ಫಲಕ ನೀಡಿ ಗೌರವಿಸಲಾಯಿತು.

ಇದೇ ವೇಳೆ ಅಂತಿಮ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪತ್ರಕರ್ತರು ಸೇರಿದಂತೆ ಆಹ್ವಾನಿತರು ಉಪಸ್ಥಿತರಿದ್ದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಸ್ವಾಗತಿಸಿದರು. ಮೋಹನ್ ಕೃಷ್ಣ ನಿರೂಪಿಸಿದರು.

ಇನ್ನು ಆರಂಭದಲ್ಲಿ ನ್ಯೂಇಂಡಿಯಾ ಕನ್ನಡ ಡಿಜಿಟಲ್‌ ಪತ್ರಿಕೆಯ ಶಿವಮೊಗ್ಗ ಬ್ಯುರೋ ಚೀಫ್‌ ಸೌಮ್ಯ ರೆಡ್ಡಿ ಪ್ರಾರ್ಥಿಸಿದರು. ಕಿರಣ್ ಕಂಕಾರಿ ವಂದಿಸಿದರು.

Follow Us

Leave a Reply

Your email address will not be published. Required fields are marked *

Back to top button