DistrictKarnatakaShivamogga

ಸಿದ್ಧರಾಮಯ್ಯ ಸರ್ಕಾರವನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ|ಬಿ.ವೈ.ವಿಜಯೇಂದ್ರ ತವರಲ್ಲೇ ಧ್ವಂಧ್ವ ನಿಲುವು|ಡಾ.ಧನಂಜಯ್‌ ಸರ್ಜಿ, ಸರ್ಕಾರದ ಪರ ಹೇಳಿಕೆಗೆ ಕಾರಣವೇನು?

ಏಕಾಏಕಿ ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ ಅವರು ಕಾಂಗ್ರೆಸ್‌ ಪರ ಬಹಿರಂಗವಾಗಿ ನಿಲುವು ತೆಳೆದಿದ್ದು, ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ಸರ್ಜಿ ಅವರ ದಿಢೀರ ಕಾಂಗ್ರೆಸ್‌ ಪರ ನಿಲುವು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದ್ದಲ್ಲದೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಶಿವಮೊಗ್ಗ: ಒಂದೆಡೆ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ, ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಸಾಲದಲ್ಲಿ ಮುಳುಗಿಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸುತ್ತಾರೆ.

ಇನ್ನೊಂದೆಡೆ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಅವರದೇ ಪಕ್ಷದ ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ, ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಹಾಡಿ ಹೊಗಳುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ.

ಏಕಾಏಕಿ ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ ಅವರು ಕಾಂಗ್ರೆಸ್‌ ಪರ ಬಹಿರಂಗವಾಗಿ ನಿಲುವು ತೆಳೆದಿದ್ದು, ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.

ಡಾ.ಧನಂಜಯ್‌ ಸರ್ಜಿ ಅವರ ದಿಢೀರ ಕಾಂಗ್ರೆಸ್‌ ಪರ ನಿಲುವು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದ್ದಲ್ಲದೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಬುಧವಾರದಂದು ಶಿವಮೊಗ್ಗದ ತಮ್ಮ ವಿಧಾನಪರಿಷತ್‌ ಸದಸ್ಯರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದ ಎಂಎಲ್‌ಸಿ ಡಾ.ಧನಂಜಯ್‌ ಸರ್ಜಿ, ಕಳೆದ ಅಧಿವೇಶನಗಳಲ್ಲಿ ತಾವು ಕೇಳಿದ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಮಹತ್ವದ ಸುಧಾರಣೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದೆ ಎಂದು ಕಾಂಗ್ರೆಸ್‌ ಸರ್ಕಾರವನ್ನು ಅಪರೋಕ್ಷವಾಗಿ ಡಾ.ಧನಂಜಯ್‌ ಸರ್ಜಿ ಶ್ಲಾಘಿಸಿದರು.

ಈ ಹಿಂದೆ ರಾಜ್ಯದ ಸಣ್ಣ ಕ್ಲಿನಿಕ್ ಅಥವಾ ಆಸ್ಪತ್ರೆಗಳು ಬಹುಮಹಡಿ ಕಟ್ಟಡದ ಒಂದು ಭಾಗದಲ್ಲಿದ್ದರೂ ಇಡೀ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ಎನ್.ಒ.ಸಿ (NOC) ಪಡೆಯುವುದು ಕಡ್ಡಾಯವಾಗಿತ್ತು.

ಹಳೆಯ ಅಗ್ನಿಸುರಕ್ಷತಾ ಮಾನದಂಡದ ಪ್ರಕಾರ ಶೇ. 99ಕ್ಕೂ ಹೆಚ್ಚು ಆಸ್ಪತ್ರೆಗಳು ಪರವಾನಗಿ ಪಡೆಯಲು ಸಂಕಷ್ಟ ಎದುರಿಸುತ್ತಿದ್ದವು.

ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ, PHANA , ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಅವರು ಮತ್ತು ನಾನು ಒಡಗೂಡಿ ನಡೆಸಿದ ಹೋರಾಟದ ಫಲವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಜಂಟಿ ಸಭೆ ನಡೆಸಿ ನಿಯಮಗಳನ್ನು ಸರಳೀಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅದರಂತೆ 20.99 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಆಸ್ಪತ್ರೆಗಳಿಗೆ ಕನಿಷ್ಠ ಅಗ್ನಿ ಸುರಕ್ಷತಾ ಮಾನದಂಡ ನಿಗದಿಪಡಿಸಿ ಜನವರಿ 9, 2026ರಂದು ಆದೇಶ ಹೊರಡಿಸಲಾಗಿದೆ.

ವಸತಿ ರಹಿತ 21 ಮೀಟರ್‌ಗಿಂತ ಕಡಿಮೆ ಎತ್ತರದ ಸಣ್ಣ ಕ್ಲಿನಿಕ್ ಹಾಗೂ ರಕ್ತನಿಧಿ ಕೇಂದ್ರಗಳು ಇನ್ನು ಮುಂದೆ ಅಗ್ನಿಶಾಮಕ ಇಲಾಖೆಯ ಬದಲು ಆರೋಗ್ಯ ಇಲಾಖೆ ಮಟ್ಟದಲ್ಲೇ ತಪಾಸಣೆಗೊಳಪಡಲಿವೆ ಮತ್ತು ನವೀಕರಣ ಶುಲ್ಕವನ್ನು ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿ ಒಟ್ಟು 8,728 ಆಸ್ಪತ್ರೆಗಳಿವೆ ಇವುಗಳಲ್ಲಿ 329 ಆಸ್ಪತ್ರೆಗಳು ಮಾತ್ರ ಫೈರ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಈ ಕಾನೂನು ತಿದ್ದುಪಡಿಯಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಅನುಕೂಲವಾಗಲಿದೆ ಎಂದು ಎಂಎಲ್‌ಸಿ ಡಾ.ಧನಂಜಯ್‌ ಸರ್ಜಿ ಹೇಳಿದರು.

ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 1,50,000 ಸೀಟುಗಳಿದ್ದರೆ ಅದ್ರಲ್ಲಿ 1 ಲಕ್ಷ ಸೀಟುಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್ ಗೆ ಇದೆ ಎಂಬ ಆಘಾತಕಾರಿ ವಿಷಯದ ಬಗ್ಗೆ ಗಮನ ಸೆಳೆಯಲಾಗಿತ್ತು.

ಪರಿಣಾಮವಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಒಂದೇ ಕೋರ್ಸಿಗೆ ಅಧಿಕ ಸೀಟು ಪಡೆಯುವುದನ್ನು ನಿರ್ಬಂಧಿಸಲು ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಸೌಲಭ್ಯ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದು ಖಾಸಗಿ ವಿವಿಗಳ ಹಾವಳಿಗೆ ಕಡಿವಾಣ ಹಾಕುವುದಲ್ಲದೆ, ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಡಾ.ಧನಂಜಯ್‌ ಸರ್ಜಿ ಹೇಳಿದರು.

ಒಟ್ಟಾರೇ, ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ ಅವರು ಇವತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧಾಟಿ ನೋಡಿದಾಗ ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದ್ದಾರಾ? ಎಂಬ ಸಂಶಯ ಬಿಜೆಪಿಗರಲ್ಲಿ ಹುಟ್ಟು ಹಾಕಿದೆ.

ಈ ಹಿಂದೆ ವಿಪಕ್ಷ ಸದಸ್ಯರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ತಾರತಮ್ಯ ತೋರುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇನ್ನು ಅನುದಾನ ನೀಡಿದರೂ ತುಟಿಪಿಟಿಕ್‌ ಮಾಡದ ಈ ಕಾಲದಲ್ಲಿ ಡಾ.ಸರ್ಜಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದು ವಿಶೇಷ.

ಶಿವಮೊಗ್ಗ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಬಿ. ಹರಿಕೃಷ್ಣ, ಹೆಚ್.ಸಿ. ಮಾಲತೇಶ್, ಮುಖಂಡರಾದ ಶಿವರಾಜ್ ಮತ್ತು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button