ಕನ್ನಡ ಮೀಡಿಯಂ 24X7 ಸುದ್ದಿ ವಾಹಿನಿ ಪ್ರಸ್ತುತಿ|ಪತ್ರಕರ್ತ ಎನ್.ಮಂಜುನಾಥ್ ಅವರಿಗೆ ಕದಂಬ ಅವಾರ್ಡ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ|ಚಿತ್ರನಟಿ ಪ್ರೇಮಾ ಅವರಿಂದ ಪ್ರಶಸ್ತಿ ಪ್ರಧಾನ
ಸುದ್ದಿ ಮಾಧ್ಯಮಗಳು ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಬೇಕಿದೆ ಎಂದು ಚಿತ್ರನಟಿ ಪ್ರೇಮಾ ಹೇಳಿದರು.

ಶಿವಮೊಗ್ಗ: ಹಿರಿಯ ಪತ್ರಕರ್ತ ಹಾಗೂ ಕ್ರಾಂತಿದೀಪ ದಿನಪತ್ರಿಕೆ ಸಂಪಾದಕ ಎನ್.ಮಂಜುನಾಥ್ ಅವರಿಗೆ ಕನ್ನಡ ಮೀಡಿಯಂ 24X7 ಸುದ್ದಿ ವಾಹಿನಿ ವತಿಯಿಂದ “ಕದಂಬ ಅವಾರ್ಡ್ ಆಫ್ ಎಕ್ಸಲೆನ್ಸ್” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ಚಿತ್ರನಟಿ ಪ್ರೇಮಾ ಅವರು ಎನ್.ಮಂಜುನಾಥ್ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಗಾ ಸಿಲ್ಕ್ಸ್ ನ ಸುಜಾತಾ ಚನ್ನೇಶ್, ಉದ್ಯಮಿ ಮರಿಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್. ಮೋಹನ್ಕುಮಾರ್, ವಿಧಾತ್ರಿ ಭವನ ಹೊಟೇಲ್ಗಳ ಮಾಲೀಕ ಅವಿನಾಶ್, ಜಿಎಮ್ ಬಯೋಟೆಕ್ನ ದುಮ್ಮಳ್ಳಿ ಜಿ.ಎಂ.ರಘು, ಮಕ್ಕಳ ತಜ್ಞ ಡಾ.ಶಂಭುಲಿಂಗ ಬಂಕೊಳ್ಳಿ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಾಚಾರ್ಯೆ ಶ್ರೀಮತಿ ಸುನೀತಾದೇವಿ ರಮೇಶ್, ಕೇಕ್ ಕೆಫೆಯ ಮಾಲೀಕ ತೀರ್ಥಕುಮಾರ್, ಮಾಜಿ ಕಾರ್ಪೊರೇಟರ್ ಇ.ವಿಶ್ವಾಸ್, ಶಸ್ತ್ರಚಿಕಿತ್ಸಕ ಡಾ.ಚೇತನ್ ಪಾಂಡೋಮಟ್ಟಿ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯು ಎಚ್ ವೈದ್ಯನಾಥ ಹಾಗೂ ಕಿರುತೆರೆ ರಂಗ ನಟ ಚಂದ್ರಶೇಖರ್ ಶಾಸ್ತ್ರಿ ಅವರಿಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ , ಸಮಾಜದಲ್ಲಿ ಉನ್ನತ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತೋಷದ ಸಂಗತಿ ಎಂದರು. ಇಂದಿನ ಸ್ಪರ್ಧಾತ್ಮಕ ಲೋಕದಲ್ಲಿ ಮಾಧ್ಯಮ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ ಎಂದು ಅಭಿಪ್ರಾಯಪಟ್ಟರು.
ಚಿತ್ರನಟಿ ಪ್ರೇಮಾ ಮಾತನಾಡಿ, ಸುದ್ದಿ ಮಾಧ್ಯಮಗಳು ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಇದೇ ವೇಳೆ ಸ್ಟೈಲ್ ಡಾನ್ಸ್ ಕ್ರ್ವೀವ್ ಸ್ಟುಡಿಯೋ ಕೇಂದ್ರದ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು. ಪೃಥ್ವಿ ಗೌಡ ಹಾಗೂ ಆದ್ಯ ರಾವ್ ಮತ್ತು ಸಂಗಡಿಗರು ಚಲನಚಿತ್ರ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್.ಅರುಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ ಹಾಗೂ ಕನ್ನಡ ಮೀಡಿಯಂ 24X7 ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ , ನಂದಿನಿ ಸಾಗರ್ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








