Shivmogga:ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಗೆ ವಜ್ರಮಹೊತ್ಸವ ಸಂಭ್ರಮ|ಕ್ರೀಡಾಕೂಟದಲ್ಲಿ ಕುಮಾರ್ ಬಂಗಾರಪ್ಪ, ಡಾ.ಧನಂಜಯ ಸರ್ಜಿ ಭಾಗಿ?
1965ರಲ್ಲಿ ಆರಂಭವಾದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಯಾಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಕಾಂಗ್ರೆಸ್ ನಾಯಕ ಹೆಚ್ ಸಿ ಯೋಗೇಶ್, ಸಂತೋಷ್ ಬಳ್ಳೆಕೆರೆ ಸೇರಿದಂತೇ ಇತರೆ ಹಳೇಯ ವಿದ್ಯಾರ್ಥಿಗಳು ಜೊತೆಯಾಗಿ ಈ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ.
ಮಾಜಿ ಸಚಿವ ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಕಾಂಗ್ರೆಸ್ ನಾಯಕ ಹೆಚ್ ಸಿ ಯೋಗೇಶ್ ಸೇರಿದಂತೆ ಹಲವರು ಡಿ 20ರಂದು ಶಿವಮೊಗ್ಗದಲ್ಲಿ ಏರ್ಪಡಿಸಲಾಗಿರುವ ಕ್ರೀಡಾಕೂಟದಲ್ಲಿ ಖುದ್ದು ಸ್ಪರ್ದಾಳುಗಳಾಗಿ ಪಾಲ್ಗೊಳ್ಳಲಿದ್ದಾರೆ.
ಅಷ್ಟೇ ಅಲ್ಲದೇ ಇವರೊಂದಿಗೆ . ಉತ್ತರ ಪ್ರದೇಶದ ನೊಯ್ಡಾ ಜಿಲ್ಲಾಧಿಕಾರಿ ಸುಹಾಸ್ ಎಲ್, ವೈ, ಐಎಎಸ್ ಅಧಿಕಾರಿ ಡಾ. ದಯಾನಂದ ಮತ್ತು ಮಂಜುನಾಥ ನಾಯ್ಕ್, ಇಸ್ರೋ ವಿಜ್ಞಾನಿ ಗಣೇಶ್ ನಾಯರ್ ಸೇರಿದಂತೆ ಹಲವರು ಬಹುತೇಕ ಆ ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. (ಹಳೇಯ ವಿದ್ಯಾರ್ಥಿಗಳಲ್ಲಿ ಕೆಲವರು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ.)
ಅರೇ ಇದೇನಿದು…ರಾಜಕೀಯ ನಾಯಕರು, ಹಿರಿಯ ಐಎಎಸ್ ಅಧಿಕಾರಿಗಳು ಒಟ್ಟಾಗಿ ಅದ್ಯಾವ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಈ ಸುದ್ದಿಯನ್ನು ಓದಿದ ಜನರಲ್ಲಿ ಸಹಜವಾಗಿ ಪ್ರಶ್ನೆ ಮೂಡುವದಂತು ಸಹಜ.
ಹೌದು..ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೇ ಈ ಎಲ್ಲ ವಿಷಯವನ್ನು ಸೋಮವಾರದಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಘಟಾನುಘಟಿ ರಾಜಕಾರಣಿಗಳು ಒಂದೆಡೆ ಸೇರಲು ಶಿವಮೊಗ್ಗದ ಪ್ರತಿಷ್ಠಿತ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ವಜ್ರಮಹೋತ್ಸವ ಕಾರ್ಯಕ್ರಮ ಕಾರಣವಾಗಲಿದೆ.
ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಡಿಸೆಂಬರ್ 20 ಹಾಗು 21 ರಂದು ಆಯೋಜಿಸಲಾಗಿರುವ ಎರಡು ದಿನಗಳ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ ಕಲಿತಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೇರಿದಂತೆ ಬಹುತೇಕ ಜನರು ಭಾಗವಹಿಸಲಿದ್ದಾರೆ.
1965ರಲ್ಲಿ ಆರಂಭವಾದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಯಾಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಕಾಂಗ್ರೆಸ್ ನಾಯಕ ಹೆಚ್ ಸಿ ಯೋಗೇಶ್, ಸಂತೋಷ್ ಬಳ್ಳೆಕೆರೆ ಸೇರಿದಂತೇ ಇತರೆ ಹಳೇಯ ವಿದ್ಯಾರ್ಥಿಗಳು ಜೊತೆಯಾಗಿ ಈ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ವಜ್ರಮಹೋತ್ಸವದ ಮೊದಲ ದಿನ ಡಿ. 20 ರಂದು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಏರ್ಪಡಿಸಲಾಗಿದೆ.
ಬೆಳಗ್ಗೆ ಹಳೆಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ಸಂಜೆ ಮನೋರಂಜನಾ ಕಾರ್ಯಕ್ರಮ ಮತ್ತು ಔತಣಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.

ಡಿ.21ರಂದು ಸಂಜೆ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಶಾಲಾ ಆವರಣದಲ್ಲಿ ಅದ್ದೂರಿಯಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ವಜ್ರ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.
ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಶೃದ್ಧೆ, ಶ್ರಮ, ಶಿಸ್ತಿನ ತಳಹದಿಯಲ್ಲಿ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಬೆಳೆದುಬಂದಿದ್ದು ಯಾವ ಜಾತಿ ಮತ ಧರ್ಮದ ತಳಹದಿಯಲ್ಲಿ ಶಿಕ್ಷಣ ನೀಡಲಿಲ್ಲ. ಇದರ ಫಲವಾಗಿ ಸಮಾಜದ ಎಲ್ಲ ಜಾತಿ ವರ್ಗದವರು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.
ವಜ್ರಮಹೋತ್ಸವದ ಹಿನ್ನಲೆಯಲ್ಲಿ ಸೇಕ್ರೆಡ್ ಹಾರ್ಟ್ ಶಾಲೆಯ ಮೂಲಸೌಕರ್ಯಗಳನ್ನು ಒದಗಿಸಿ ಉನ್ನತ ದರ್ಜೆಗೇರಿಸಲು ಹಲವು ಯೋಜನೆಯನ್ನು ರೂಪಿಸಲಾಗಿದೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
ಶಾಲೆಯ ಕಟ್ಟಡದ ನೆಲವು ಗಾರೆನೆಲವಾಗಿತ್ತು. ಶೈಕ್ಷಣಿಕ ವರ್ಷದ ಆರಂಭದಲ್ಲೇ ಸಂಪೂರ್ಣವಾಗಿ ಗ್ರಾನೈಟ್ ಹಾಕಿಸಲಾಗಿದೆ.

ಮಕ್ಕಳಿಗೆ ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ನೀಡಲು ಸ್ಮಾರ್ಟ್ ಕ್ಲಾಸ್, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮಾಡಲು ಭೋಜನಾ ಕೊಠಡಿಯ ನಿರ್ಮಾಣ. ಕುಡಿಯುವ ನೀರಿನ ವ್ಯವಸ್ಥೆ ಸೇರಿ ಸಾಕಷ್ಟು ಸುಧಾರಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಾದ ಶಾಸಕ ಡಾ ಧನಂಜಯ ಸರ್ಜಿ, ಸಂತೋಷ್ ಬಳ್ಳೆಕೆರೆ, ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್, ಪತ್ರಕರ್ತ ರಾಕೇಶ್ ಡಿಸೋಜಾ, ಹರ್ಷ, ಪ್ರಾಚಾರ್ಯ ವಿಲಿಯಮ್ ಡಿಸೋಜಾ , ಹಾಗೂ ಧರ್ಮಗುರುಗಳಾದ ಸ್ಟ್ಯಾನ್ಲಿ ಡಿಸೋಜಾ, ಕ್ಲಿಫರ್ಡ್ ರೋಷನ್ ಪಿಂಟೋ, ಫ್ರಾನ್ಸಿಸ್ಸ್ ನೊರೊನ್ಹಾ, ಮುಖಂಡರಾದ ರಾಬರ್ಟ್ ನೊರೊನ್ಹಾ, ವಿನ್ಸೆಂಟ್ ರಾಡ್ರಿಗ್ಸ್ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.






