ಶ್ರೀ ಬಸವಶ್ರೀ ಆಶ್ರಮದಲ್ಲಿ ಲಯನ್ಸ್ ಕ್ಲಬ್ನಿಂದ ವನಮಹೋತ್ಸವ|ವೃದ್ಧರಿಗೆ,ಮಾನಸಿಕ ಅಸ್ವಸ್ಥರಿಗೆ ತಿಂಡಿ ವಿತರಣೆ|ಬೀರಬಲ್ ಬಿಷ್ಣೋಯ್,ಎಸ್.ಆರ್.ಒಂಕಾರಿ ಭಾಗಿ
ಹುಬ್ಬಳ್ಳಿ ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಲೆಕ್ಕಪರಿಶೋಧಕ ಎಸ್.ಆರ್.ಓಂಕಾರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮದ ಆವರಣದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡಲಾಯಿತು.

ಹುಬ್ಬಳ್ಳಿ ನಗರ ಲಯನ್ಸ್ ಕ್ಲಬ್ ವತಿಯಿಂದ ಶನಿವಾರದಂದು ಅಂಚಟಗೇರಿ ಗ್ರಾಮದ ಶ್ರೀ ಬಸವಶ್ರೀ ಆಶ್ರಮದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಲಯನ್ಸ್ ಕ್ಲಬ್ನ ವಲಯ ಅಧ್ಯಕ್ಷ ಎಂಜೆಎಫ್ ಲಯನ್ ಬೀರಬಲ್ ಬಿಷ್ಣೋಯ್ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಲೆಕ್ಕಪರಿಶೋಧಕ ಎಸ್.ಆರ್.ಓಂಕಾರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮದ ಆವರಣದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡಲಾಯಿತು.

ಇದೇ ವೇಳೆ ಶ್ರೀಮತಿ ಶ್ರೀದೇವಿ ಪಾಟೀಲ್ ಅವರು ದಾನವಾಗಿ ನೀಡಿದ ರೆಪ್ರಿಜಿರೇಟರ್ (ಫ್ರಿಜ್) ಅನ್ನು ಆಶ್ರಮಕ್ಕೆ ನೀಡಲಾಯಿತು.


ಬಳಿಕ ಆಶ್ರಮದಲ್ಲಿ ವಾಸವಿರುವ 18 ವೃದ್ಧರು ಹಾಗು ಮಾನಸಿಕ ಅಸ್ವಸ್ಥರಿಗೆ ಎಸ್.ಆರ್.ಓಂಕಾರಿ ಹಾಗೂ ಇತರರು ತಿಂಡಿಯನ್ನು ನೀಡಿ ಉಪಚರಿಸಿದರು.


ಈ ಸಂದರ್ಭದಲ್ಲಿ ಹುಬ್ಬಳ್ಳಿ ನಗರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಗುರು ಅಂಗಡಿ, ಡಾ. ಅಶ್ವಿನಿ, ಲಯನ್ಸ್ ಕ್ಲಬ್ನ ಪದಾಧಿಕಾರಿಗಳು, ಶ್ರೀ ಬಸವಶ್ರೀ ಆಶ್ರಮದ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕ
ನ್ಯೂ ಇಂಡಿಯಾ ಕನ್ನಡ
ಹುಬ್ಬಳ್ಳಿ-ಬೆಂಗಳೂರು.









