Shivamogga

ಅರಸಾಳು ಪಡಿತರ ಕೇಂದ್ರದಲ್ಲಿ ಭಾರಿ ಅಧ್ವಾನ| ಕಲ್ಲು, ಮಣ್ಣು ಮಿಶ್ರಿತ ರಾಗಿ ವಿತರಣೆಗೆ ಅರಸಾಳು ಗ್ರಾಮಸ್ಥರ ಆಕ್ರೋಶ|

ಅರಸಾಳು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದು ಮನೆಗೆ ಮರಳಿದ ಬಹುತೇಕ ಫಲಾನುಭವಿಗಳಿಗೆ ಕಲ್ಲು ಮಣ್ಣು ತುಂಬಿದ ರಾಗಿ ಪೂರೈಕೆಯಾಗಿರುವುದು ಕಂಡುಬಂದಿದೆ.

ರಾಗಿ ಬದಲು ಪೂರ್ತಿ ಮರಳೇ ಕೊಟ್ಟಿದ್ದರೆ ಮನೆಕಟ್ಟಬಹುದಾಗಿತ್ತೆಂದು ಗ್ರಾಮಸ್ಥರು ಆಹಾರ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅರಸಾಳು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದು ಮನೆಗೆ ಮರಳಿದ ಬಹುತೇಕ ಫಲಾನುಭವಿಗಳಿಗೆ ಕಲ್ಲು ಮಣ್ಣು ತುಂಬಿದ ರಾಗಿ ಪೂರೈಕೆಯಾಗಿರುವುದು ಕಂಡುಬಂದಿದೆ.

ಬಡ ಕುಟುಂಬಗಳಿಗೆ ವಿತರಿಸುವ ಪಡಿತರ ಧಾನ್ಯವೇ ಇಷ್ಟೊಂದು ಕಳಪೆಯಾಗಿದ್ದರೆ ಅದನ್ನು ಸೇವಿಸುವುದಾದರೂ ಹೇಗೆ? ಆರೋಗ್ಯ ಸಮಸ್ಯೆಯಾದ್ರೆ ಹೊಣೆ ಯಾರೆಂದು ಗ್ರಾಮಸ್ಥರು ಪ್ರಶ್ನಿಸಿದರು.

ಸರ್ಕಾರ ಬಡ ಜನತೆಗೆ ಬಿತರಿಸುವ ಆಹಾರ ಧಾನ್ಯದ ಗುಣಮಟ್ಟ ಪರಿಶೀಲಿಸುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೇಲಿದೆ. ಇಂತಹ ಕಳಪೆ ಗುಣಮಟ್ಟದ ರಾಗಿ ವಿತರಿಸುತ್ತಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಸಲ್ಲದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ಕಳಪೆ ರಾಗಿಯನ್ನು ಹಿಂಪಡೆದು ಉತ್ತಮ ಗುಣಮಟ್ಟದ ಪಡಿತರ ವಿತರಿಸಬೇಕೆಂದು ಒತ್ತಾಯಿಸಿದರು.

ಇಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಒಂದೆಡೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ, ಮತ್ತೊಂದೆಡೆ ತಾಂತ್ರಿಕ ಸಮಸ್ಯೆಯಿಂದ ಪಡಿತರ ಪಡೆಯುವುದೇ ದುಸ್ಥರವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಿ, ಪಡಿತರ ವ್ಯವಸ್ಥೆಯನ್ನು ಸುಧಾರಿಸದಿದ್ದರೆ ಅಂಗಡಿ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಅರಸಾಳು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಈ ವೇಳೆ ಮಲೆನಾಡು ಕನ್ನಡಿಗರ ಸೇನೆಯ ಅಧ್ಯಕ್ಷ ಚಿರಂತ ಭಂಡಾರಿ, ರೇಣುಕಪ್ಪ, ಪ್ರಕಾಶ್, ಮಂಜುನಾಥ್, ರಮೇಶ್, ಹೇಮಾ, ವೀಣಾ, ಸೋಮಣ್ಣ, ರವಿ, ಸುಶ್ಮಿತಾ, ಸುಪ್ರಿತ್, ರೋಷನ್, ಸರಸ್ವತಿ, ನೀಲಮ್ಮ, ಸಂಜು, ಧರ್ಮೇಶ್, ಚೂಡಾಮಣಿ, ತಿಪ್ಪೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button