KarnatakaNationalShivamogga

ಆಗಸ್ಟ್‌ 16ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಹುಟ್ಟುಹಬ್ಬ|ಅಭಿಮಾನಿಗಳಿಂದ ನಾಗರಿಕ ಸನ್ಮಾನ|ಬಿ.ಎಸ್‌ವೈ ಸಮೇತ ನಾಯಕರು ಭಾಗಿ-ಬಳ್ಳೆಕೆರೆ ಸಂತೋಷ್

ಬಿ.ವೈ.ರಾಘವೇಂದ್ರರವರ ನಾಯಕತ್ವ, ಸಹನೆ, ಜನರ ಸೇವೆ ಮಾಡುವ ಅವರ ಕಳಕಳಿಯನ್ನು ಹತ್ತಿರದಿಂದ ಕಂಡಿರುವ ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅಭಿನಂದನಾ ನುಡಿ ಸಮರ್ಪಿಸಲಿದ್ದಾರೆ

ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಇದೇ ಆಗಸ್ಟ್‌ 16 ರಂದು ಹುಟ್ಟು ಹಬ್ಬದ ಸಂಭ್ರಮ.

ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗವು ಹುಟ್ಟುಹಬ್ಬವನ್ನು ವಿಶಿಷ್ಟ ಹಾಗೂ ಅದ್ದೂರಿಯಾಗಿ ಆಚರಿಸಲು ಸಜ್ಜಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಕಾರ್ಯಕ್ರಮದ ಮುಂದಾಳತ್ವ ವಹಿಸಿರುವ ಬಳ್ಳೆಕೆರೆ ಸಂತೋಷ್ ತಿಳಿಸಿದರು.

ಗುರುವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಿ.ವೈ.ರಾಘವೇಂದ್ರ ಅವರ ಜನ್ಮದಿನಾಚರಣೆ ಸಾರ್ಥಕವಾಗಿಲು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ವಿವರಿಸಿದರು.

ತಮ್ಮ ಹುಟ್ಟುಹಬ್ಬದ ಸಂಭ್ರಾಮಚರಣೆ ಬೇಡ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ ಎಂದು ಬಳ್ಳೇಕೆರೆ ಸಂತೋಷ್‌ ಹೇಳಿದರು.

ಆದರೆ ನಾಡು ಕಂಡ ಮಾದರಿ ಜನಪ್ರತಿನಿಧಿ, ಹೆಮ್ಮೆಯ ನಾಯಕನನ್ನು ಅಭಿನಂದಿಸುವುದು ಅಭಿಮಾನಿಗಳ ಬಯಕೆಗೆ ಕೊನೆಗೂ ಅವರನ್ನು ಒಪ್ಪಿಸಲಾಯಿತು ಎಂದು ತಿಳಿಸಿದರು.

ಆಗಸ್ಟ್‌ 16 ರಂದು ಹುಟ್ಟು ಹಬ್ಬದ ಅಂಗವಾಗಿ ಮೊದಲಿಗೆ ಬೆಳಿಗ್ಗೆ 7.30ಕ್ಕೆ ವಿನೋಬನಗರದ ಶಿವಾಲಯದಲ್ಲಿ ರುದ್ರಾಭಿಷೇಕ ನಡೆಯಲಿದೆ.

ಬಳಿಕ 9 ಗಂಟೆಗೆ ರವೀಂದ್ರನಗರದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದೆ ಎಂದು ಬಳ್ಳೇಕೆರೆ ಸಂತೋಷ ತಿಳಿಸಿದರು.

ನಂತರ ಬೆಳಿಗ್ಗೆ 10.30ಕ್ಕೆ ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿ ಆಟೋ ಚಾಲಕರ ಸಂಘದಿಂದ ಸಿಹಿ ವಿತರಣೆ ನಡೆಯಲಿದೆ ಎಂದರು.

ಬಳಿಕ 11.30ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸಂಜೆ 6.30ಕ್ಕೆ ನಗರದ ಬಂಟರ ಭವನದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಅದ್ದೂರಿ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಈ ವೇಳೆ ಬಿ.ವೈ.ರಾಘವೇಂದ್ರರವರ ನಾಯಕತ್ವ, ಸಹನೆ, ಜನರ ಸೇವೆ ಮಾಡುವ ಅವರ ಕಳಕಳಿಯನ್ನು ಹತ್ತಿರದಿಂದ ಕಂಡಿರುವ ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅಭಿನಂದನಾ ನುಡಿ ಸಮರ್ಪಿಸಲಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಖುದ್ದು ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ, ಮಾಜಿ ಶಾಸಕರಾದ ರುದ್ರೇಗೌಡ, ಆರ್.ಕೆ. ಸಿದ್ದರಾಮಣ್ಣ ಸೇರಿದಂತೆ ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳು, ಮುಖಂಡರು ಹಾಗೂ ವಿವಿಧ ಸಮಾಜದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಬಳ್ಳೇಕೆರೆ ಸಂತೋಷ್‌ ತಿಳಿಸಿದರು.

ಅಭಿಮಾನಿ ಬಳಗದ ಪ್ರಮುಖರಾದ ಹಾಗೂ ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಮಾತನಾಡಿ, ನಮ್ಮ ರಾಘಣ್ಣ ಜಿಲ್ಲೆಯ ಹೆಮ್ಮೆ. ಕೆಲಸ ಅಭಿವೃದ್ದಿ ವಿಚಾರದಲ್ಲಿ ಎದುರಾಳಿಗಳೂ ಕೂಡ ಪಕ್ಷತೀತವಾಗಿ ಒಪ್ಪಿಕೊಳ್ಳುವಂತಹ ನಾಯಕ ಎಂದು ಹೇಳಿದರು.

ಅವರ ಕೆಲಸಗಳಿಂದಾಗಿ ಮಾದರಿ ಎಂಪಿಯಾಗಿ ಗುರುತಿಸಿಕೊಂಡಿದ್ದು, ರಾಜ್ಯ ರಾಜಕಾರಣಕ್ಕೆ ಅವರ ಸೇವೆ ಅಗತ್ಯವಿದೆ.

ರಾಜ್ಯದಲ್ಲಿ ಬಿ.ವೈ.ರಾಘವೇಂದ್ರರನ್ನು ಮುಖ್ಯಮಂತ್ರಿಯಾಗಿ ನೋಡಲು ಜನ ಅಭಿಮಾನಿಗಳು ಬಯಸಿದ್ದಾರೆ. ಅವರು ಕರ್ನಾಟಕದ ಮುಖ್ಯಮಂತ್ರಿಯಾದರೆ ರಾಜ್ಯವನ್ನು ಭಾರತದ ಭೂಪಟದಲ್ಲಿ ಮತ್ತಷ್ಟು ಹೊಳಯುವಂತೆ ಮಾಡುವರು ಎಂದು ರಾಘವೇಂದ್ರ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

Follow Us

Leave a Reply

Your email address will not be published. Required fields are marked *

Back to top button